ರಾಯಚೂರು ಶಾಸಕರ ಮೇಲೆ ಕಣ್ಣಿಟ್ಟ ಬಿಜೆಪಿ, ಮತ್ತಿಬ್ಬರು ಶಾಸಕರ ರಾಜೀನಾಮೆ?

ಸಮ್ಮಿಶ್ರ ಸರ್ಕಾರದ ಇಬ್ಬರು ಶಾಸಕರು ರಾಜೀನಾಮೆ ಸಲ್ಲಿಸಿದ ಬಳಿಕವೂ ಸಹ ವಿರೋಧ ಪಕ್ಷ ಬಿಜೆಪಿಯೊಡನೆ ಸಂಪರ್ಕದಲ್ಲಿರುವ ಕಾಂಗ್ರೆಸ್ ಶಾಅಸಕರ ಒಂದು ಗುಂಪು ಇನ್ನೂ ಕಾದು ನೋಡುವ ಯೋಜನೆಯನ್ನೇ ಮುಂದುವರಿಸಿದೆ
ದಡ್ಡಲ್ ಬಸವನಗೌಡ ಮತ್ತು ಪ್ರತಾಪ್ ಗೌಡ ಪಾಟೀಲ್
ದಡ್ಡಲ್ ಬಸವನಗೌಡ ಮತ್ತು ಪ್ರತಾಪ್ ಗೌಡ ಪಾಟೀಲ್
ರಾಯಚೂರು: ಸಮ್ಮಿಶ್ರ ಸರ್ಕಾರದ ಇಬ್ಬರು ಶಾಸಕರು ರಾಜೀನಾಮೆ ಸಲ್ಲಿಸಿದ ಬಳಿಕವೂ ಸಹ ವಿರೋಧ ಪಕ್ಷ ಬಿಜೆಪಿಯೊಡನೆ ಸಂಪರ್ಕದಲ್ಲಿರುವ ಕಾಂಗ್ರೆಸ್ ಶಾಅಸಕರ ಒಂದು ಗುಂಪು ಇನ್ನೂ ಕಾದು ನೋಡುವ ಯೋಜನೆಯನ್ನೇ ಮುಂದುವರಿಸಿದೆ.ಬಿಜೆಪಿಯ ಮೂಲಗಳ ಪ್ರಕಾರ, ರಾಯಚೂರು ಜಿಲ್ಲೆಯ ಇಬ್ಬರು ಕಾಂಗ್ರೆಸ್ ಶಾಸಕರು ಈಗ ಪಕ್ಷ ತೊರೆದು ಬಿಜೆಪಿ ಸೇರುವ ಇರಾದೆಯಲ್ಲಿದ್ದಾರೆ.ಇಬ್ಬರು ಶಾಸಕರು ಪ್ರಸ್ತುತ ಬಿಜೆಪಿ ನಾಯಕರೊಂದಿಗೆ ಸಂಪರ್ಕದಲ್ಲಿದ್ದಾರೆ, ಆದಾಗ್ಯೂ, ಅವರು ತಮ್ಮ ನಿರ್ಧಾರವನ್ನು ಜಾರಿಗೆ ತರಲು ಕೆಲವು ಷರತ್ತನ್ನು ಹೊಂದಿದ್ದಾರೆ.
ರಾಯಚೂರು ಗ್ರಾಮೀಣ ಕಾಂಗ್ರೆಸ್ ಶಾಸಕ ದಡ್ಡಲ್ ಬಸವನಗೌಡ ಸಮ್ಮಿಶ್ರ ಸರ್ಕಾರದಲ್ಲಿ ರಾಜೀನಾಮೆ ಸಲ್ಲಿಸುತ್ತಿರುವ 14 ನೇ ವ್ಯಕ್ತಿ ತಾವೆಂದು ಹೇಳುತ್ತಿದ್ದಾರೆ.ಇದರರ್ಥ ಕಾಂಗ್ರೆಸ್-ಜೆಡಿಎಸ್ ನಿಂದ 13 ಶಾಸಕರು ನಿರ್ಗಮಿಸಿದರೆ ಮಾತ್ರ ತಾವು ರಾಜೀನಾಮೆ ಸಲ್ಲಿಸುತ್ತೇವೆ ಎಂದಾಗಿದೆ."ಯಾವುದೇ ಫಲವಿಲ್ಲದೆ ರಾಜೀನಾಮೆ ಸಲ್ಲಿಸಲಾರೆ" ಎಂದು ಅವರು ಬಿಜೆಪಿ ನಾಯಕರಿಗೆ ಕಳಿಸಿದ ಸಂದೇಶದಲ್ಲಿ ತಿಳಿಸಿದ್ದಾರೆ.13 ಶಾಸಕರು ರಾಜೀನಾಮೆ ನೀಡಿದರೆ ನಾವು ಸಹ ರಾಜೀನಾಮೆ ಸಲ್ಲಿಸಲಿದ್ದು ತಾವು 14ನೇಯವರಾಗಿ ರಾಜೀನಾಮೆ ಸಲ್ಲಿಕೆ ಮಾಡುತ್ತೇನೆಂದು ಹೇಳಿದ್ದಾರೆ ಎಂದು ಮೂಲಗಳು ಹೇಳಿದೆ.
ಮಸ್ಕಿಯ ಪ್ರತಾಪ್ ಗೌಡ ಪಾಟೀಲ್ ಕೂಡ ಕೆಲವು ಷರತ್ತುಗಳಿಗೆ ಒಪ್ಪಿದರೆ ರಾಜೀನಾಮೆ ನೀಡಿ ಬಿಜೆಪಿ ಸೇರುವುದಾಗಿ ಹೇಳಿದ್ದಾರೆ.ಮೂಲದ ಪ್ರಕಾರ, ಬಿಜೆಪಿ ಸಂಖ್ಯಾಬಲ ಒಂದು ಹಂತಕ್ಕೆ ಬಂದರೆ ಮಾತ್ರ  ಪ್ರತಾಪ್ ರಾಜೀನಾಮೆ ನೀಡುತ್ತಾರೆ,  ಆಗ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಏರಬಹುದು. ಆದರೆ  ದಡ್ಡಲ್ ಮತ್ತು ಪ್ರತಾಪ್ ಇಬ್ಬರೂ ಈ ಬೆಳವಣಿಗೆಯನ್ನು ನಿರಾಕರಿಸಿದ್ದು . "ನಾನು ಮೊದಲ ಬಾರಿಗೆ ಚುನಾವಣೆಯಲ್ಲಿ ಗೆದ್ದಿದ್ದೇನೆ ಮತ್ತು ನಾನು ಕಾಂಗ್ರೆಸ್ ಪಕ್ಷಕ್ಕೆ ನಿಷ್ಠನಾಗಿರುತ್ತೇನೆ". ಈ ಸುದ್ದಿ ಕೇವಲ ವದಂತಿ"  ದಡ್ಡಲ್ ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com