ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ರಾಜೀನಾಮೆ: ರಾಜ್ಯ ನಾಯಕರ ಪ್ರತಿಕ್ರಿಯೆ ಹೀಗಿತ್ತು

ಯಾರೇ ಇಷ್ಟಪಡದೆ ಹೋದರೂ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಅವರ ರಾಜೀನಾಮೆ ವಿಚಾರ ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ಒಂದು ಅಚ್ಚರಿಯ ವಿಚಾರವಾಗಿ ಉಳಿದಿಲ್ಲ
ರಾಹುಲ್ ಗಾಂಧಿ
ರಾಹುಲ್ ಗಾಂಧಿ
ಬೆಂಗಳೂರು: ಯಾರೇ ಇಷ್ಟಪಡದೆ ಹೋದರೂ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಅವರ ರಾಜೀನಾಮೆ ವಿಚಾರ ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ಒಂದು ಅಚ್ಚರಿಯ ವಿಚಾರವಾಗಿ ಉಳಿದಿಲ್ಲ. ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಹಿರಿಯ ನಾಯಕರು ರಾಹುಲ್ ಗಾಂಧಿ ಮುಂದುವರಿಯುತ್ತಾರೆ ಎಂಬ ಭರವಸೆ ಹೊಂದಿರಲಿಲ್ಲ. ಅಲ್ಲದೆ ಎದುರಾಳಿಗಳಿಗೆ ಬಲವಾದ ಸಂದೇಶ ರವಾನಿಸಲು ಹಾಗೂ ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೇರಲು ಗಾಂಧಿ ಕುಟುಂಬದ ಕುಡಿ ರಾಹುಲ್ ಈ ಪದತ್ಯಾಗ ಮಾಡಲಿದ್ದಾರೆ ಎನ್ನುವುದು ಅವರ ಭಾವನೆಯಾಗಿತ್ತು.
ಆದರೆ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ “ರಾಹುಲ್ ಗಾಂಧಿ ಅಧ್ಯಕ್ಷರಾಗಿ ಮುಂದುವರಿಯಬೇಕೆಂದು ನಾವೆಲ್ಲರೂ ಬಯಸುತ್ತೇವೆ. ಕಾಂಗ್ರೆಸ್ ಅನ್ನು ಒಗ್ಗೂಡಿಸಲು ಗಾಂಧಿ ಕುಟುಂಬದ ಪಾತ್ರ ಮುಖ್ಯವಾಗಿದೆ, ಈ ದೇಶವನ್ನು ಒಗ್ಗೂಡಿಸಲು ಕಾಂಗ್ರೆಸ್ ಮುಖ್ಯವಾಗಿದೆ ” ಎಂದಿದ್ದಾರೆ. . 
ಲೋಕಸಭಾ ಚುನಾವಣಾ ಫಲಿತಾಂಶ ಕಾಂಗ್ರೆಸ್ ಪಾಲಿಗೆ ಹೀನಾಯ ಸೋಲನ್ನು ನೀಡಿದ್ದ ಬಳಿಕ ರಾಹುಲ್ ಗಾಂಧಿ ಬುಧವಾರ ನಾಲ್ಕು ಪುಟಗಳ ವಿವರವಾದ ಪತ್ರ ಬರೆದು ಪಕ್ಷದ ಅಧ್ಯಕ್ಷಗಿರಿಗೆ ರಾಜೀನಾಮೆ ಸಲ್ಲಿಸಿದ್ದಾರೆ.
ನಾನು ಮೊದಲಿನಿಂದಲೂ ಹೇಳುತ್ತಿರುವಂತೆ ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದ ಶಕ್ತಿ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದು ಅವರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವುದನ್ನು ನಾನು ಬಯಸುತ್ತೇನೆ ಎಂದಿದ್ದಾರೆ.
ಪತ್ರವನ್ನು ಪೋಸ್ಟ್ ಮಾಡುವಾಗ ಮಲ್ಲಿಕಾರ್ಜುನ್ ಖರ್ಗೆ ನವದೆಹಲಿಯಲ್ಲಿದ್ದರು, ಆದರೆ ರಾಹುಲ್ ಗಾಂಧಿಯ ನಂತರ ಎಐಸಿಸಿ ಮುಖ್ಯಸ್ಥರಾಗಿ ಉತ್ತರಾಧಿಕಾರಿ ಬಗೆಗೆ ಯಾವ ಯೋಜನೆ ಹೊಂದಿಲ್ಲ.. "ಚುನಾವಣೆಯ ಸಮಯದಲ್ಲಿ ಪಕ್ಷವನ್ನು ಒಂಟಿಯಾಗಿ ಮುನ್ನಡೆಸಿದ ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಕೆಲಸ ಮಾಡುವುದು ಒಂದು ಗೌರವ. ಅವರು ದ್ವೇಷ ಸಾಧನೆ ಮಾಡಿಲ್ಲ. ಆದರೆ ಸಹಿಷ್ಣು, ಜಾತ್ಯತೀತ ಮತ್ತು ಶಾಂತಿಯುತ ದೇಶವನ್ನು ನಿರ್ಮಿಸುವತ್ತ ಮನಹರಿಸಿದ್ದಾರೆ ”ಎಂದು ಉಪಮುಖ್ಯಮಂತ್ರಿ ಜಿ ಪರಮೇಶ್ವರ ಟ್ವೀಟ್ ಮಾಡಿದ್ದಾರೆ. ಆದಾಗ್ಯೂ, ಕಾಂಗ್ರೆಸ್ ಶಾಸಕಾಂಗ ಪಕ್ಷದ ಮುಖ್ಯಸ್ಥ ಸಿದ್ದರಾಮಯ್ಯ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಸಕ್ರಿಯ ಸಾಮಾಜಿಕ ಮಾಧ್ಯಮ ಈ ಬಗೆಗೆ ಮೌನ ತಾಳಿದೆ.
“ಈ ಬಾರಿ ಅವರು(ರಾಹುಲ್ ಗಾಂಧಿ) ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವುದಿಲ್ಲ ಎಂಬ ನಿಲುವು ಅಚಲವಾಗಿತ್ತು, ಇದರಲ್ಲಿ ಅಚ್ಚರಿಯೇನೂ ಇಲ್ಲ"”ಎಂದು ಸಮ್ಮಿಶ್ರ ಸರ್ಕಾರದ ಸಚಿವರು ಹೇಳಿದರು. ಕಾಂಗ್ರೆಸ್ ಹಿರಿಯ ಮುಖಂಡ ಮತ್ತು ಕರ್ನಾಟಕದ ಮಾಜಿ ಸಿಎಂ ವೀರಪ್ಪ ಮೊಯಿಲಿ , “ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಮುಂದುವರಿಯುವ ಶೇಕಡಾ 1 ರಷ್ಟು ಸಾಧ್ಯತೆಯೂ ಇಲ್ಲ,’ ’ಆದರೆ ನಮ್ಮಲ್ಲಿ ಯಾರೊಬ್ಬರೂ ಅವರ ರಾಜೀನಾಮೆಯನ್ನು ಬಯಸಿಲ್ಲ" ಎಂದಿದ್ದಾರೆ.
ಕರ್ನಾಟಕ ಚುನಾವಣೆಯ ನಿರ್ಣಾಯಕ ಸ್ಥಾನ ಹಂಚಿಕೆ ಮಾತುಕತೆ ವೇಳೆ ರಾಹುಲ್ ಅವರೊಂದಿಗೆ ಸಂವಹನ ನಡೆಸಿದ ಜೆಡಿಎಸ್ ಮುಖ್ಯಸ್ಥ ಎಚ್ ಡಿ ದೇವೇಗೌಡ, “ನಾನು ಅವರನ್ನು ರಾಜೀನಾಮೆ ನೀಡಬಾರದೆಂದು ವಿನಂತಿಸಿದೆ ಆದರೆ ಅವರು ನೈತಿಕ ನಿಲುವನ್ನು ತೆಗೆದುಕೊಂಡಿದ್ದಾರೆ. ರಾಹುಲ್ ಇಡೀ ದೇಶದಲ್ಲಿ ಪ್ರವಾಸ ಮಾಡಿ ಸಂಘಟನೆಯನ್ನು ಬಲಪಡಿಸಲು ಹೆಣಗಾಡಿದರು. ಅವರು ತಮ್ಮ ಕೈಲಾದಷ್ಟು ಮಾಡಿದ್ದಾರೆ. ಆದರೆ ಅವರು ರಾಜಕೀಯದಿಂದ ನಿವೃತ್ತರಾಗುವುದಿಲ್ಲ" ಎಂದರು.
ಕಾಂಗ್ರೆಸ್ ಹಿರಿಯ ಮುಖಂಡ ಬಿ ಕೆ ಹರಿಪ್ರಸಾದ್, “ಇದು ದುಃಖಕರವಾಗಿದೆ. ನನ್ನ ಮಟ್ಟಿಗೆ, ಅವರು ಅಧ್ಯಕ್ಷರಾಗಿದ್ದವರು ಮುಂದೆಯೂ ಅಧ್ಯಕ್ಷರಾಗಿಯೇ ಇರುತ್ತಾರೆ.ಅವರು ಇನ್ನೂ ನನ್ನ ನಾಯಕರಾಗಿದ್ದಾರೆ. ’’  ಎಂದರೆ ಕಾಂಗ್ರೆಸ್ ಕಾರ್ಯಕಾರಿ ಅಧ್ಯಕ್ಷ ಈಶ್ವರ್ ಖಂಡ್ರೆ, “ಈ ನಿರ್ಧಾರದಿಂದ ನಾವೆಲ್ಲರೂ ತೀವ್ರವಾಗಿ ನೊಂದಿದ್ದೇವೆ. ಮೋದಿ ಸರ್ಕಾರದ ದುಷ್ಪರಿಣಾಮಗಳ ವಿರುದ್ಧ ಹೋರಾಡಲು ಅಥವಾ ಅವರ ತಪ್ಪನ್ನು ಎತ್ತಿ ತೋರಿಸಲು ಅವರು ರಾಷ್ಟ್ರದ ಉದ್ದಕ್ಕೂ ಪ್ರವಾಸ ಮಾಡಿದ್ದರು, ಆದರೆ ಅನೇಕರು ಅವರನ್ನು ಬೆಂಬಲಿಸಲಿಲ್ಲ. ಅವರು ದೊಡ್ಡ ನಾಯಕರಾಗಿದ್ದರು. ’’ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com