ರೈಲ್ವೆ, ನೀರಾವರಿ ಯೋಜನೆ ಅನುಷ್ಠಾನಕ್ಕೆ ತರುವುದು ಸಂಗಣ್ಣ ಕರಡಿ ಗುರಿ!

ಕೊಪ್ಪಳ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಎರಡನೇ ಬಾರಿ ಜಯಗಳಿಸಿದ್ದಾರೆ. ಕ್ಷೇತ್ರದ ಜನರ ನಾಡಿಮಿಡಿತವನ್ನು ಸಂಗಣ್ಣ ಬಹಳ ..
ಕೊಪ್ಪಳ: ಕೊಪ್ಪಳ ಲೋಕಸಭೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಕರಡಿ ಸಂಗಣ್ಣ ಎರಡನೇ ಬಾರಿ ಜಯಗಳಿಸಿದ್ದಾರೆ. ಕ್ಷೇತ್ರದ ಜನರ ನಾಡಿಮಿಡಿತವನ್ನು ಸಂಗಣ್ಣ ಬಹಳ ಚೆನ್ನಾಗಿ ಅರ್ಥೈಸಿಕೊಂಡಿದ್ದಾರೆ.
ರೈಲ್ವೆ ಮತ್ತು ನೀರಾವರಿ ಯೋಜನೆಗಳನ್ನು ಜಾರಿಗೆ ಅನುಷ್ಠಾನಗೊಳಿಸುವ ಗುರಿ ಹೊಂದಿದ್ದಾರೆ. ಕೇಂದ್ರ ಸಚಿವರುಗಳಾದ ಪ್ರಹ್ಲಾದ್ ಜೋಶಿ ಮತ್ತು ಸುರೇಶ್ ಅಂಗಡಿ ತಮ್ಮ ಉದ್ದೇಶಿತ ಯೋಜನೆಗಳನ್ನು ಸಾಕಾರಗೊಳಿಸಲು ಎಲ್ಲಾ ರೀತಿಯ ಬೆಂಬಲ ನೀಡುತ್ತಿದ್ದಾರೆ.
ಹಿಂದಿನ ಅವಧಿಯಲ್ಲಿ ಮುನಿರಾಬಾದ್- ಮೆಹಬೂಬ್ ನಗರ ರೈಲ್ವೆ ಪ್ರಾಜೆಕ್ಟ್ ಅಡಿಯಲ್ಲಿ ಹುಬ್ಬಳ್ಳಿ ಮತ್ತು ಗಂಗಾವತಿ ರೈಲು ಸೇವೆ ಆರಂಭಿಸುವುದಾಗಿ ಭರವಸೆ ನೀಡಿದ್ದರು, ಅದು ಆರಂಭವಾಗಿದೆ, ಹೀಗಾಗಿ ಈ ವೇಳೆರಾಯಚೂರು ಜಿಲ್ಲೆಯ ಗಂಗಾವತಿ ಮತ್ತಪ ಸಿಂಧೂರು ನಡುವೆ ರೈಲು ಸೇವೆ ವಿಸ್ತರಿಸುವುದಾಗಿ ತಿಳಿಸಿದ್ದಾರೆ. ಇತ್ತೀಚೆಗೆ ಗಂಗಾವತಿ ಮತ್ತು ಹುಬ್ಬಳ್ಳಿ ನಡುವೆ ಪ್ಯಾಸೆಂಜರ್ ರೈಲು ಸಂಚರಿಸುತ್ತಿದೆ.
ಯುಕೆಪಿ 3ನೇ ಹಂತದ ನೀರಾವರಿ ಯೋಜನೆ ಅಡಿಯಲ್ಲಿ ಆಲಮಟ್ಟಿ ಜಲಾಶಯದ ಎತ್ತರ ಹೆಚ್ಚಿಸಿದರೇ ಸಾವಿರಾರು ಎಕರೆ ಭೂಮಿಗೆ ನೀರಾವರಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಬಹುದಾಗಿದೆ ಎಂದು ಕರಡಿ ಸಂಗಣ್ಣ ಹೇಳಿದ್ದಾರೆ.
ಜೊತೆಗೆ ಈ ಯೋಜನೆ ಜಾರಿಗೆ ತರಬೇಕು ಬದ್ಧವಾಗಿರುವುದಾಗಿ ತಿಳಿಸಿದ್ದಾರೆ, ನವಲಿ ಗ್ರಾಮದಲ್ಲಿರುವ ಜಲಾಶಯವನ್ನು ಸಮತೋಲನಗೊಳಿಸುವ ಪ್ರಸ್ತಾವನೆ ಕೂಡ ಸಂಗಣ್ಣ ಆವರ ಮುಂದಿದೆ,  ತುಂಗಭದ್ರಾ ಜಲಾಶಯದ ಹೂಳೆತ್ತು ಕಾರ್ಯ ಹಾಗೂ ರಾಯಚೂರು ಜಿಲ್ಲೆಯ ಮಾನ್ವಿ ಮತ್ತು ಸಿಂಧನೂರು ತಾಲೂಕುಗಳ ರೈತರ ಬೆಳೆಗಳಿಗೆ ನೀರು ಪೂರೈಸುವ ಉದ್ದೇಶವನ್ನು ಹೊಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com