ನಿರ್ಣಾಯಕ ಘಟ್ಟದಲ್ಲಿ ಮೈತ್ರಿ ಸರ್ಕಾರದ ಅಸ್ತಿತ್ವ: ವಿಧಾನಸೌಧಕ್ಕೆ ಸ್ಪೀಕರ್ ಆಗಮನ; ರಾಜೀನಾಮೆ ಅಂಗೀಕಾರದ ಬಗ್ಗೆ ಹೇಳಿದ್ದಿಷ್ಟು

ವಿಧಾನಸೌಧಕ್ಕೆ ಸ್ಪೀಕರ್ ರಮೇಶ್ ಕುಮಾರ್ ಆಗಮಿಸಿದ್ದು, ಕಾಂಗ್ರೆಸ್ ಶಾಸಕರ ರಾಜೀನಾಮೆಯಿಂದ ಪ್ರಾರಂಭವಾಗಿದ್ದ ರಾಜಕೀಯ ಹೈಡ್ರಾಮ ಜೂ.09 ರಂದು ನಿರ್ಣಾಯಕ ಘಟ್ಟ ತಲುಪುವ ಸಾಧ್ಯತೆಗಳಿವೆ.
ಸ್ಪೀಕರ್ ರಮೆಶ್ ಕುಮಾರ್
ಸ್ಪೀಕರ್ ರಮೆಶ್ ಕುಮಾರ್
ವಿಧಾನಸೌಧಕ್ಕೆ ಸ್ಪೀಕರ್ ರಮೇಶ್ ಕುಮಾರ್ ಆಗಮಿಸಿದ್ದು, ಕಾಂಗ್ರೆಸ್ ಶಾಸಕರ ರಾಜೀನಾಮೆಯಿಂದ ಪ್ರಾರಂಭವಾಗಿದ್ದ ರಾಜಕೀಯ ಹೈಡ್ರಾಮ ಜೂ.09 ರಂದು ನಿರ್ಣಾಯಕ ಘಟ್ಟ ತಲುಪುವ ಸಾಧ್ಯತೆಗಳಿವೆ.
ವಿಧಾನಸೌಧದ ಬಳಿ ಮಾಧ್ಯಮಗಳೊಂದಿಗೆ ರಮೇಶ್ ಕುಮಾರ್ ಮಾತನಾಡಿದ್ದು, ಶಾಸಕರ ಈಗಾಗಲೇ ಸಲ್ಲಿಸಿರುವ ರಾಜೀನಾಮೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. "ಶಾಸಕರು ಸಲ್ಲಿಸಿರುವ ರಾಜೀನಾಮೆ ಪ್ರತಿ ನೋಡಿದರೆ ಗೊತ್ತಾಗಲಿದೆ. ಕಚೇರಿಗೆ ತೆರಳಿ ರಾಜೀನಾಮೆ ಪರಿಶೀಲನೆ ಮಾಡಬೇಕು, ರೂಲ್ ಬುಕ್  ನೋಡಿ ಆ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. 
ಇದೇ ವೇಳೆ ಶಾಸಕರ ರಾಜೀನಾಮೆ ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರ ಒತ್ತಡದ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ರಮೇಶ್ ಕುಮಾರ್  ನನ್ನ ಸಂವಿಧಾನವೇ ನನಗೆ ನಾಯಕ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com