ನನಗೆ ಸ್ನಾನ ಮಾಡಲು ಅವಕಾಶ ಕೊಡಲಿಲ್ಲ: ಹೋಟೆಲ್ ವಿರುದ್ಧ ಕಾನೂನು ಸಮರ; ಡಿಕೆಶಿ

ನಾವು ಮಹಾರಾಷ್ಟ್ರ ಸರ್ಕಾರಕ್ಕೆ ತಿಳಿಸಿಯೇ ಅಧಿಕೃತವಾಗಿ ಮುಂಬೈಗೆ ಹೋಗಿದ್ದು, ಹೋಟೆಲ್ ರೂಂ ಬುಕ್ ಮಾಡಿದ್ದೇವು. ಆದರೆ ರೂಮ್ ಕ್ಯಾನ್ಸಲ್ ಮಾಡಿ...
ಡಿ.ಕೆ ಶಿವಕುಮಾರ್
ಡಿ.ಕೆ ಶಿವಕುಮಾರ್
ಬೆಂಗಳೂರು:  ನಾವು ಮಹಾರಾಷ್ಟ್ರ ಸರ್ಕಾರಕ್ಕೆ ತಿಳಿಸಿಯೇ ಅಧಿಕೃತವಾಗಿ ಮುಂಬೈಗೆ ಹೋಗಿದ್ದು, ಹೋಟೆಲ್ ರೂಂ ಬುಕ್ ಮಾಡಿದ್ದೇವು. ಆದರೆ ರೂಮ್  ಕ್ಯಾನ್ಸಲ್ ಮಾಡಿ, ಹೋಟೆಲ್ ಒಳಗೆ ಹೋಗದಂತೆ ತಡೆಯಲಾಯಿತು. ನನಗೆ ಸ್ನಾನ ಮಾಡಲು ಅವಕಾಶ ನೀಡಲಿಲ್ಲ, ಈ ಸಂಬಂಧ ನಾನು ಕಾನೂನು ಹೋರಾಟ ನಡೆಸುತ್ತೇನೆ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ಕುಮಾರ ಕೃಪಾ ಅತಿಥಿಗೃಹದಲ್ಲಿ ನಡೆದ ಸಭೆಯ ನಂತರ ಮಾತನಾಡಿದ ಡಿಕೆ ಶಿವಕುಮಾರ್, ಮುಂಬೈಯಿಂದ ಮಧ್ಯರಾತ್ರಿ ಬಂದೆ. ನನ್ನನ್ನು ಡಿಪಾರ್ಟ್ ಮಾಡಿದ್ದರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರ ನಡೆದುಕೊಳ್ಳೋ ರೀತಿಯಲ್ಲ, ನಾನು ಟೂರ್ ಹಾಕ್ಕೊಂಡು ಹೋಗಿದ್ದೆ, ಅತೃಪ್ತರು ಭೇಟಿ ಮಾಡದಿರಲಿಲು ಮನವಿ ಮಾಡಿದ್ದಾರೆ ಅಂದರು,  ಹೋಟೆಲ್ ರಿಸರ್ವೇಶನ್ ಬುಕ್ ಮಾಡಿ ನಂತರ ಕ್ಯಾನ್ಸಲ್ ಮಾಡಿದ್ದಾರೆ ಎಂದು ಕಿಡಿಕಾರಿದರು.
ನನಗೆ ಸ್ನಾನ ಮಾಡಲೂ ಅವಕಾಶ ಕೊಡಲಿಲ್ಲಾ, ಪೊಲೀಸರು ಹೋಟೆಲ್ ಹೋಗದಂತೆ ತಡೆದಿದ್ದಾರೆ. ಹೋಟೆಲ್ ಮೇಲೆ ಹಾಗೂ ತಡೆದಿದ್ದವರ ಮೇಲೆ ಮುಂದಿನ ಕ್ರಮ ಕೈಗೊಳ್ತೀನಿ, ಕಾನೂನು ತಜ್ಙರ ಸಲಹೆ ಪಡೆದು ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com