ಸಾರಾ ಮಹೇಶ್ ಈಶ್ವರಪ್ಪ ಭೇಟಿ: 'ದಳಪತಿ'ಗಳ ಹೊಸ ದಾಳ, 'ಕೈ' ತಳಮಳ, 'ಕಮಲ' ವಿಲವಿಲ!

ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ವಿಶ್ವಾಸಮತ ಯಾಚನೆ ಮಾಡುವುದಾಗಿ ನಿನ್ನೆ ವಿಧಾನಸಭೆ ಕಲಾಪದಲ್ಲಿ ಘೋಷಿಸಿದ ಹಿನ್ನೆಲೆಯಲ್ಲಿ ಅತೃಪ್ತರ ...
ಸಾರಾ ಮಹೇಶ್, ಈಶ್ವರಪ್ಪ ಮತ್ತು ಕೆ ಮುರುಳಿಧರ್ ರಾವ್
ಸಾರಾ ಮಹೇಶ್, ಈಶ್ವರಪ್ಪ ಮತ್ತು ಕೆ ಮುರುಳಿಧರ್ ರಾವ್
ಬೆಂಗಳೂರು: ಮುಖ್ಯಮಂತ್ರಿ ಎಚ್.ಡಿ ಕುಮಾರ ಸ್ವಾಮಿ ವಿಶ್ವಾಸಮತ ಯಾಚನೆ ಮಾಡುವುದಾಗಿ ನಿನ್ನೆ ವಿಧಾನಸಭೆ ಕಲಾಪದಲ್ಲಿ ಘೋಷಿಸಿದ ಹಿನ್ನೆಲೆಯಲ್ಲಿ ಅತೃಪ್ತರ ಮನವೊಲಿಸಲು ಸಮ್ಮಿಶ್ರ ಸರ್ಕಾರದ ಮುಖಂಡರು ಮುಂದಾಗಿದ್ದಾರೆ.
ಜೆಡಿಎಸ್ ನ ಕೆಲವು ಸಚಿವರು ತೆರೆಮರೆಯಲ್ಲಿ ಬಿಜೆಪಿ ಜೊತೆ ಸಖ್ಯ ಬೆಳೆಯಲು ಕಸರತ್ತು ನಡೆಸುತ್ತಿದ್ದಾರೆ. ಕುಮಾರಸ್ವಾಮಿ ಆಪ್ತ ಹಾಗೂ ಪ್ರವಾಸೋದ್ಯಮ ಸಚಿವ ಸಾ.ರಾ ಮಹೇಶ್ ಬಿಜೆಪಿ ಮುಖಂಡರ ಜೊತೆಗೆ ನಡೆಸಿದ ಮಾತುಕತೆ ಪ್ಲಾನ್ ಬಿ ಎಂದೇ ಕರೆಸಿಕೊಳ್ಳುತ್ತಿದೆ.
ಸಾ.ರಾ ಮಹೇಶ್, ಬಿಜೆಪಿ ನಾಯಕರಾದ ಕೆ.ಎಸ್ ಈಶ್ವರಪ್ಪ ಮತ್ತು ಬಿಜೆಪಿ ರಾಜ್ಯ ಉಸ್ತುವಾರಿ ಕೆ,. ಮುರುಳಿಧರ್ ರಾವ್ ಭೇಟಿ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ, 2006 ರಲ್ಲಿ ನಡೆದಂತೆ ಕಾಂಗ್ರೆಸ್ ಗೆ ಕೈಕೊಟ್ಟು ಜೆಡಿಎಸ್ ಬಿಜೆಪಿ ಜೊತೆ ಸೇರಿಸಿ ಸರ್ಕಾರ ರಚಿಸಲಿದೆ ಎಂಬ ಊಹಾಪೋಹಗಳು ಎಲ್ಲೆಡೆ ಹರಿದಾಡುತ್ತಿವೆ.
ಆದರೆ ಈ ಬಗ್ಗೆ ಕುಮಾರಸ್ವಾಮಿ ಮತ್ತು ಯಡಿಯೂರಪ್ಪ ಇಬ್ಬರು ಸ್ಪಷ್ಟನೆ ನೀಡಿದ್ದು, ಈ ಭೇಟಿಗೆ ಯಾವುದೇ ಪ್ರಾಮುಖ್ಯತೆ ನೀಡಬಾರದೆಂದು ಹೇಳಿಕೆ ನೀಡಿದ್ದಾರೆ,
ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಜೆಡಿಎಸ್ ನ ತ ತಮ್ಮ ಅತ್ಯಾಪ್ತ ಶಾಸಕರಿಗೆ ಏನಾದರೂ ಮಾಡಿ ಎಂದು ಹೇಳಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ, ಇದಕ್ಕಾಗಿ ಜೆಡಿಎಸ್ ಮುಖಂಡರು ಬಿಜೆಪಿ ಮುಂದೆ ಪ್ರಸ್ತಾವನೆಯಿಟ್ಟಿದ್ದು ಬಿಜೆಪಿಯಿಂದ ಯಾವುದೇ ಪ್ರತಿಕ್ರಿಯೆ  ಸಿಕ್ಕಿಲ್ಲ ಎಂದು ತಿಳಿದು ಬಂದಿದೆ.
ಸಾರಾ ಮಹೇಶ್ ಬಿಜೆಪಿ ನಾಯಕರು ಸುಮಾರು 25 ನಿಮಿಷಗಳ ಕಾಲ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಮತ್ತೊಬ್ಬ ಬಿಜೆಪಿ ನಾಯಕ ತಿಳಿಸಿದ್ದಾರೆ,  ಆದರೆ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರ ಮುಖದಲ್ಲಿರುವ ಆತ್ಮವಿಶ್ವಾಸ ನೋಡಿದರೇ  ಸಖತ್ ಪ್ಲಾನ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಈಶ್ವರಪ್ಪ- ಸಾರಾ ಮಹೇಶ್ ಭೇಟಿ  ರಾಜಕೀಯವಾಗಿ ಹೊಸ ಟ್ವಿಸ್ಟ್ ಪಡೆದುಕೊಂಡಿದೆ, ಕಾಂಗ್ರೆಸ್ ಅತೃಪ್ತರನ್ನು ಬಗ್ಗಿಸಲು ನಡೆದ ಪ್ಲಾನ್ ಇದಾಗಿದೆ ಎಂದು ಹೇಳಲಾಗುತ್ತಿದೆ, ಆದರೆ ಸಾರಾ ಮಹೇಶ್ ಭೇಟಿಯನ್ನು ಸಿದ್ದರಾಮಯ್ಯ ಗಂಭೀರವಾಗಿ ಪರಿಗಣಿಸುತ್ತಿದ್ದಾರೆ ಎನ್ನಲಾಗಿದೆ.
ಈಶ್ವರಪ್ಪ ಸಿಎಂ ಆಗುವ ಲೆಕ್ಕಚಾರ ಇಟ್ಟುಕೊಂಡಿದ್ದಾರೆ, ಈ ಹಿನ್ನೆಲೆಯಲ್ಲಿ ಸಾರಾ ಮಹೇಶ್ ಭೇಟಿ ಮಾಡಿದ್ದಾರೆ ಎನ್ನಲಾಗಿದೆ.. ಆದರೆ ಯಡಿಯೂರಪ್ಪ ಟೀಂ ಕೂಡ ಈ ಭೇಟಿಯಿಂದಾಗಿ ವಿಚಲಿತಗೊಂಡಿದೆ ಎಂದು ತಿಳಿದು ಬಂದಿದೆ,.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com