ರಾಜ್ಯ ರಾಜಕೀಯ ಬಿಕ್ಕಟ್ಟು: ಜುಲೈ 17ರಂದು ಸಮ್ಮಿಶ್ರ ಸರ್ಕಾರದಿಂದ ವಿಶ್ವಾಸಮತ ಯಾಚನೆ?

ಸದನದಲ್ಲಿ ವಿಶ್ವಾಸಮತ ಯಾಚಿಸಲು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನಿರ್ಧರಿಸಿದ್ದಾರೆ. ಅವರು ಬಹುಮತ ಸಾಬೀತಿಗೆ ಮುಖ್ಯಮಂತ್ರಿಗಳು ...
ವಿಧಾನಸಭೆಯಲ್ಲಿ ಸ್ಪೀಕರ್
ವಿಧಾನಸಭೆಯಲ್ಲಿ ಸ್ಪೀಕರ್
ಬೆಂಗಳೂರು: ಸದನದಲ್ಲಿ ವಿಶ್ವಾಸಮತ ಯಾಚಿಸಲು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನಿರ್ಧರಿಸಿದ್ದಾರೆ. ಅವರು ಬಹುಮತ ಸಾಬೀತಿಗೆ ಮುಖ್ಯಮಂತ್ರಿಗಳು ಕೇಳಿದ ಸಮಯ ನಿಗದಿಪಡಿಸಲಾಗುವುದು ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಶುಕ್ರವಾರ ಸದನದಲ್ಲಿ ವಿಶ್ವಾಸಮತ ಯಾಚನೆ ಮಾಡುವುದಾಗಿ ಸಿಎಂ ಕುಮಾರಸ್ವಾಮಿ ಘೋಷಿಸಿದ್ದಾರೆ, ಈ ಹಿನ್ನೆಲೆಯಲ್ಲಿ ಮಾತನಾಡಿದ ರಮೇಶ್ ಕುಮಾರ್, ವಿಶ್ವಾಸ ಮತ ಯಾಚನೆ ಮಾಡುವ ಒಂದು ದಿನ ಮೊದಲು ನನಗೆ ತಿಳಿಸಬೇಕು. ಆದರೆ ಯಾವಾಗ ವಿಶ್ವಾಸ ಮತಯಾಚಿಸಬೇಕು ಎಂದು ನಾನು ಹೇಳಲಾರೆ ಎಂದು ತಿಳಿಸಿದ್ದಾರೆ.
ಸೋಮವಾರ ಸಿಎಂ ವಿಶ್ವಾಸ ಮತ ಯಾಚಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು, ಆದರೆ ಜುಲೈ 17 ರಂದು ವಿಶ್ವಾಸ ಮತಯಾಚನೆ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಅನಿಶ್ಚಿತ ಪರಿಸ್ಥಿತಿಯಲ್ಲಿ ವಿಶ್ವಾಸ ಮತಯಾಚಿಸುವುದು ಕಷ್ಟದ ವಿಷಯವಾಗಿದೆ ಎಂದು ಸಮ್ಮಿಶ್ರ ಸರ್ಕಾರದ ಸಚಿವರೊಬ್ಬರು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com