ಸಮ್ಮಿಶ್ರ ಸರ್ಕಾರಕ್ಕೆ ಸಂಕಷ್ಟ: ಬಿಜೆಪಿಗೆ ಬೆಂಬಲಿಸಲಿದ್ದಾರಾ ಬಿಎಸ್ಪಿ ಶಾಸಕ ಮಹೇಶ್?

ರಾಜ್ಯದ ಏಕೈಕ ಬಹುಜನ ಸಮಾಜವಾದಿ ಪಕ್ಷದ ಶಾಸಕ ಎನ್. ಮಹೇಶ್ ತಾವು ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಇದೆ. ರಾಜ್ಯದಲ್ಲಿ ಸಿಎಂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ....
ಎನ್. ಮಹೇಶ್
ಎನ್. ಮಹೇಶ್
ಬೆಂಗಳೂರು: ರಾಜ್ಯದ ಏಕೈಕ ಬಹುಜನ ಸಮಾಜವಾದಿ ಪಕ್ಷದ ಶಾಸಕ ಎನ್. ಮಹೇಶ್ ತಾವು ಬಿಜೆಪಿಗೆ ಬೆಂಬಲ ನೀಡುವ ಸಾಧ್ಯತೆ ಇದೆ. ರಾಜ್ಯದಲ್ಲಿ ಸಿಎಂ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಅವರ ಹಾಗೂ ಮೈತ್ರಿ ಪಕ್ಷ ಕಾಂಗ್ರೆಸ್ನಿಂದಲೇ ತೊಂದರೆಯಾಗುತ್ತಿರುವ ವೇಳೆ ಮಹೇಶ್ ತಾವು ಬಿಜೆಪಿ ಬೆಂಬಲಿಸಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗಿದೆ.
ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಎಸ್ಪಿ-ಬಿಎಸ್ಪಿ ಮೈತ್ರಿಕೂಟ ತೊರೆದು ಉತರ ಪ್ರದೇಶ ಉಪಚುನಾವಣೆಯಲ್ಲಿ ಎಸ್ಪಿ ಹಾಗೂ ಬಿಜೆಪಿಯನ್ನು ಏಕಾಂಗಿಯಾಗಿ ಎದುರಿಸಲು ತೀರ್ಮಾನಿಸಿದ್ದಾರೆ. ಇದೀಗ ರಾಜ್ಯದ ಬಿಎಸ್ಪಿ ಶಾಸಕ ಮಹೇಶ್ ರಾಜಕೀಯವಾಗಿ ಪ್ರಯೋಜನ ಪಡೆಯುವ ಎಲ್ಲಾ ಆಯ್ಕೆಗಳನ್ನು ಪರಿಗಣಿಸುತ್ತಿರುವುದರ ಜತೆಗೇ ಅವರ ಕ್ಷೇತ್ರ ಕೊಳ್ಳೇಗಾಲದ ಅಭಿವೃದ್ದಿಯಾಗುವತ್ತಲೂ ಗಮನ ನೀಡಿದ್ದಾರೆ.
2018 ರಲ್ಲಿ ಜೆಡಿಎಸ್ ಮೈತ್ರಿಕೂಟದೊಡನೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಜಯ ಗಳಿಸಿದ್ದ ಮಹೇಶ್ ಮೈತ್ರಿ ಸರ್ಕಾರದಲ್ಲಿ ಪ್ರಾಥಮಿಕ ಶಿಕ್ಷಣ ಸಚಿವರಾದರು.ಆದರೆಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ನಿಂದ  ಹಿಂದೆ ಸರಿಯಲು ಮಾಯಾವತಿ ನಿರ್ಧರಿಸಿದಾಗ ಸಚಿವವ ಸ್ಥಾನವನ್ನು ಅವರು ತೊರೆಯಬೇಕಾಯಿತು.ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಸರ್ಕಾರದಲ್ಲಿ  ಅವರು ವಿಧಾನಸಭೆಯಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆಯನ್ನು ಕೋರಿದ್ದರು ಮತ್ತು ಸರ್ಕಾರಕ್ಕೆ ವಿಷಯಾಧಾರಿತ ಬೆಂಬಲ ನೀಡುವುದಾಗಿ ಘೋಷಿಸಿದ್ದರು.
ಈಗ ಸಮ್ಮಿಶ್ರ ಸರ್ಕಾರ ಸಂಕಷ್ಟದಲ್ಲಿರುವಾಗ ಮಹೇಶ್ , ಎರಡೂ ಕಡೆ ಬೆಂಬಲಿಸಬಹುದು ಅಥವಾ ತಟಸ್ಥ ನಿಲುವನ್ನು ತೆಗೆದುಕೊಳ್ಳಬಹುದು, ಏಕೆಂದರೆ ಅವರೊಬ್ಬರೇ ಸರ್ಕಾರ ರಚನೆ ಮಾಡಲು ಎಂದಿಗೂ ಆಗುವುದಿಲ್ಲ.ಸಮ್ಮಿಶ್ರ ಸರ್ಕಾರದ ಸಾಕಷ್ಟು ಸಂಖ್ಯೆಯ ಶಾಸಕರು ಶಾಸಕ ಸ್ಥಾನಕ್ಕೆ ತಮ್ಮ ರಾಜೀನಾಮೆಯನ್ನು ಈಗಾಗಲೇ ಸಲ್ಲಿಸಿದ್ದಾರೆ.
ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ, ಎಸ್‌ಪಿ ಮತ್ತು ಕಾಂಗ್ರೆಸ್ ವಿರುದ್ಧ ಹೋರಾಡಲು ಬಿಎಸ್ಪಿ ನಿಲುವು ತೆಗೆದುಕೊಂಡಿದ್ದರೂ, ಕ್ಷೇತ್ರದ ಹಿತದೃಷ್ಟಿಯಿಂದ ಹೊಸ ಸರ್ಕಾರಕ್ಕೆ ಬಾಹ್ಯ ಬೆಂಬಲವನ್ನು ನೀಡುವಂತೆ ಅವರ ಬೆಂಬಲಿಗರಿಂದ ಒತ್ತಡವಿದೆ. ಮಧ್ಯಂತರ ಚುನಾವಣೆಗೆ ಯಾರೂ ಒಅಲವು ತೋರದ ಕಾರಣ ಮಹೇಶ್ ಸ್ಥಿರ ಸರ್ಕಾರವನ್ನು ಬೆಂಬಲಿಸಬೇಕೆಂದು ಅವರು ಬಯಸುತ್ತಾರೆ. ಬಿಎಸ್ಪಿ ಕಾರ್ಯಕರ್ತರು ಬಿಜೆಪಿ ಸರ್ಕಾರಕ್ಕೆ ವಿಷಯಾಧಾರಿತ ಬೆಂಬಲ ನೀಡದರೆ ಕೊಳ್ಳೇಗಾಲ ಕ್ಷೇತ್ರದ ಅಭಿವೃದ್ದಿಗೆ ಇದು ನೆರವಾಗಲಿದೆ ಎಂದು ಬಾವಿಸುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com