ಸುಪ್ರೀಂ ಕೋರ್ಟ್‌- ನನ್ನ ನಡುವೆ ಸಂಘರ್ಷ ಇಲ್ಲ : ಸ್ಪೀಕರ್ ರಮೇಶ್ ಕುಮಾರ್

ಸುಪ್ರೀಂಕೋರ್ಟ್ ಗಿಂತ ದೊಡ್ಡವನು ನಾನಲ್ಲ, ಸುಪ್ರೀಂಕೋರ್ಟ್ ಹಾಗೂ ತಮ್ಮ ನಡುವೆ ಯಾವುದೇ ಸಂಘರ್ಷ ಇಲ್ಲ ಎಂದು ವಿಧಾನಸಭಾಧ್ಯಕ್ಷ ಕೆ. ಆರ್. ರಮೇಶ್ ಕುಮಾರ್ ಹೇಳಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್
ಸ್ಪೀಕರ್ ರಮೇಶ್ ಕುಮಾರ್
ಕೋಲಾರ: ಸುಪ್ರೀಂಕೋರ್ಟ್ ಗಿಂತ ದೊಡ್ಡವನು ನಾನಲ್ಲ, ಸುಪ್ರೀಂಕೋರ್ಟ್ ಹಾಗೂ ತಮ್ಮ ನಡುವೆ ಯಾವುದೇ ಸಂಘರ್ಷ ಇಲ್ಲ ಎಂದು ವಿಧಾನಸಭಾಧ್ಯಕ್ಷ ಕೆ. ಆರ್. ರಮೇಶ್ ಕುಮಾರ್ ಹೇಳಿದ್ದಾರೆ.
ಶ್ರೀನಿವಾಸಪುರದ ಅಡ್ಡಗಲ್ ಗ್ರಾಮದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜೀನಾಮೆ ಅಂಗೀಕರಿಸಲು ಸ್ಪೀಕರ್ ಗೆ ರಾಜೀನಾಮೆ ನೀಡುವಂತೆ ಅತೃಪ್ತ ಶಾಸಕರು ಸುಪ್ರೀಂಕೋರ್ಟ್ ಗೆ ಸಲ್ಲಿಸಿರುವ ಅರ್ಜಿ ವಿಚಾರಣೆ ಕುರಿತಂತೆ ಇಂದು ವಾದ- ವಿವಾದ ನಡೆದಿದೆ. ಅದರ ಬಗ್ಗೆ ಅಂತಿಮ ತೀರ್ಮಾನ ಬರುವವರೆಗೂ ನಾನು ಪ್ರತಿಕ್ರಿಯೆ ನೀಡಲ್ಲ ಎಂದರು.
ನನಗೆ ಕೊಟ್ಟಿರುವ ಜವಾಬ್ದಾರಿ ಯನ್ನು  ನಿರ್ವಹಣೆ ಮಾಡುತ್ತಿದ್ದೇನೆ. ನಾನು ಯಾರಿಗೂ ಸವಾಲು ಹಾಕಿಲ್ಲ. ನಾಳೆ ಬೆಳಗ್ಗೆ ಸುಪ್ರೀಂಕೋರ್ಟ್  ನೀಡಿರುವ ತೀರ್ಪಿನ ಬಗ್ಗೆ ಎಲ್ಲರಿಗೂ ಇದ್ದಂತೆ ನನಗೂ ಕುತೂಹಲ ಇದೆ. ಯಾವ ರೀತಿಯ ಆದೇಶ ಬರುತ್ತದೋ ಕಾದು ನೋಡಬೇಕು. ನಂತರ ಪ್ರತಿಕ್ರಿಯೆ ನೀಡುವುದಾಗಿ ರಮೇಶ್ ಕುಮಾರ್ ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com