ಅತೃಪ್ತ ಶಾಸಕರ ರಾಜಿನಾಮೆ ಬಗ್ಗೆ ಸುಪ್ರೀಂ ತೀರ್ಪು: ಸ್ಪೀಕರ್ ರಮೇಶ್ ಕುಮಾರ್ ಪ್ರತಿಕ್ರಿಯೆ

ಅತೃಪ್ತ ಶಾಸಕರ ರಾಜಿನಾಮೆ ಅಂಗೀಕಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶಕ್ಕೆ ತಾನು ಬದ್ದನಾಗಿದ್ದು, ಸಂವಿಧಾನದ ಅಡಿಯೇ ಕ್ರಮ ...
ರಮೇಶ್ ಕುಮಾರ್
ರಮೇಶ್ ಕುಮಾರ್
ಕೋಲಾರ: ಅತೃಪ್ತ ಶಾಸಕರ ರಾಜಿನಾಮೆ ಅಂಗೀಕಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶಕ್ಕೆ ತಾನು ಬದ್ದನಾಗಿದ್ದು, ಸಂವಿಧಾನದ ಅಡಿಯೇ ಕ್ರಮ ಕೈಗೊಳ್ಳುವುದಾಗಿ ಸ್ಪೀಕರ್ ರಮೇಶ್ ಕುಮಾರ್ ಹೇಳಿದ್ದಾರೆ.
ಕೋಲಾರದಲ್ಲಿ ಮಾತನಾಡಿದ ಸ್ಪೀಕರ್ ರಮೇಶ್ ಕುಮಾರ್, ನಾನು ನಿಯಮಾವಳಿಯನ್ನು ಬಿಟ್ಟು ಕದಲುವುದಿಲ್ಲ, ಯಾರನ್ನು ತೃಪ್ತಿ ಪಡಿಸಲು ನಾನು ಕೆಲಸ ಮಾಡುವುದಿಲ್ಲ ಎಂದು ಹೇಳಿದ್ದಾರೆ.
ನಾಳೆ ಏನು ನಡೆಯುತ್ತದೆಯೋ ಎಂಬ ಬಗ್ಗೆ ನನಗೆ ಗೊತ್ತಿಲ್ಲ, ಸ್ಪೀಕರ್ ಕಚೇರಿಯ ಗೌರವವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಇದರಿಂದಾಗಿ ನನ್ನ ಮೇಲಿನ ಜವಾಬ್ದಾರಿ ಹೆಚ್ಚಿದೆ. ನನ್ನ ನಿರ್ಧಾರದಿಂದ ಯಾರಿಗೆ ಬೇಜಾರಾಗುತ್ತೋ ಅಥವಾ ಸಂತೋಷವಾಗುತ್ತೋ ನನಗೆ ಗೊತ್ತಿಲ್ಲ, ಶಾಸಕರನ್ನು ಸದನಕ್ಕೆ ಕರೆಸುವುದು ನನ್ನ ಜವಾಬ್ದಾರಿಯಲ್ಲ, ಅದು ಆ ಪಕ್ಷಗಳಿಗೆ ಬಿಟ್ಟದ್ದು, ಪಕ್ಷಗಳ ಲೆಕ್ಕಾಚಾರ ನನಗೆ ಸಂಬಂಧಿಸಿದ್ದಲ್ಲ ಎಂದು ಹೇಳಿದ್ದಾರೆ.,
ಯಾರನ್ನು ಮೆಚ್ಚಿಸಲು ನಾನು ಇಲ್ಲಿಲ್ಲ, ರಾಜಿನಾಮೆ ಅಂಗೀಕಾರ ಸಂಬಂಧ ನಾನು ಕಳೆದುಕೊಳ್ಳುವುದು ಏನು ಇಲ್ಲ, ಮನೆಗೆ ತೆಗೆದುಕೊಂಡು ಹೋಗುವುದಿಲ್ಲ, ಸಂವಿಧಾನ ಯಾರ ಕೈಗೆ ಸಿಕ್ಕು ನಲುಗುವುದು ನನಗೆ ಇಷ್ಟವಿಲ್ಲ, ನಮ್ಮ ಸಂವಿಧಾನ ವಿಜೃಂಭಿಸಬೇಕು ಎಂದು ಸ್ಪೀಕರ್ ಹೇಳಿದ್ದಾರೆ.
ಎಲ್ಲರ ವಿಶ್ವಾಸವನ್ನು ನಾನು ಉಳಿಸಿಕೊಳ್ಳುತ್ತೇನೆ, ನಾನು ಯಾರಿಗೂ ಜೀತ ಮಾಡುವವನಲ್ಲ, ಸಂವಿಧಾನದ ಜೀತದಾಳು ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com