ಸ್ಪೀಕರ್ ಕರ್ತವ್ಯದಲ್ಲಿ ಸುಪ್ರೀಂ ಕೋರ್ಟ್ ಮಧ್ಯೆ ಪ್ರವೇಶಿಸಲು ಸಾಧ್ಯವಿಲ್ಲ: ಸಿಎಂ ಕುಮಾರಸ್ವಾಮಿ

ಶಾಸಕರ ರಾಜೀನಾಮೆ ಪ್ರಕರಣ ಸ್ಪೀಕರ್ ವರ್ಸಸ್ ನ್ಯಾಯಾಲಯದ ಮಧ್ಯೆ ಅಲ್ಲ ಎಂದು ಮುಖ್ಯಮಂತ್ರಿ ...
ಸಿಎಂ ಹೆಚ್ ಡಿ ಕುಮಾರಸ್ವಾಮಿ
ಸಿಎಂ ಹೆಚ್ ಡಿ ಕುಮಾರಸ್ವಾಮಿ
ನವದೆಹಲಿ: ಶಾಸಕರ ರಾಜೀನಾಮೆ ಪ್ರಕರಣ ಸ್ಪೀಕರ್ ವರ್ಸಸ್ ನ್ಯಾಯಾಲಯದ ಮಧ್ಯೆ ಅಲ್ಲ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ಇದು ತಮ್ಮ ಮತ್ತು ತಮ್ಮ ಸರ್ಕಾರವನ್ನು ಕೆಡವಿ ಸಿಎಂ ಸ್ಥಾನವನ್ನು ಪಡೆಯಲು ಯತ್ನಿಸುತ್ತಿರುವವರ ಮಧ್ಯೆ ಇರುವ ವಿಷಯ ಎಂದು ಹೇಳಿದರು.
ಮುಖ್ಯಮಂತ್ರಿಗಳ ಪರವಾಗಿ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಹಿರಿಯ ವಕೀಲ ರಾಜೀವ್ ಧವನ್, ಕಾಂಗ್ರೆಸ್ ಮತ್ತು ಜೆಡಿಎಸ್ ನ ಅತೃಪ್ತ ಶಾಸಕರ ರಾಜೀನಾಮೆ ಹಿಂದೆ ಉದ್ದೇಶ ಇರಲಿಕ್ಕಿಲ್ಲ, ರಾಜೀನಾಮೆ ಹಿಂದೆ ದುರುದ್ದೇಶಪೂರಿತ ಉತ್ತೇಜನ ಇದೆಯೆಂದು ಕಾಣಿಸುತ್ತದೆ. ಸರ್ಕಾರವನ್ನು ಕೆಡವುವ ಉದ್ದೇಶವಿದ್ದರೆ ಸಂವಿಧಾನದ ನಿಯಮ ಪ್ರಕಾರ ಸ್ಪೀಕರ್ ತನಿಖೆ ನಡೆಸಬೇಕು. ಶಾಸಕರ ರಾಜೀನಾಮೆ ಸ್ವಯಂಪ್ರೇರಿತತೆ ಮತ್ತು ಪ್ರಾಮಾಣಿಕತೆಯಿಂದ ಕೂಡಿದೆ ಎಂದು ನೀಡುವ ಕಾರಣಗಳ ಬಗ್ಗೆ ಸ್ಪೀಕರ್ ತೃಪ್ತರಾಗಬೇಕು ಎಂದು ಹೇಳಿದರು.
ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ನ ಅಧಿಕಾರವನ್ನು ಪ್ರಶ್ನಿಸಿದ ವಕೀಲ ಧವನ್, ಸ್ಪೀಕರ್ ಕೆಲಸದಲ್ಲಿ ಮಧ್ಯೆ ಪ್ರವೇಶಿಸುವ ಅಧಿಕಾರ ನ್ಯಾಯಾಲಯಕ್ಕಿಲ್ಲ ಎಂದು ಹೇಳಿದರು.
ಜುಲೈ 11ರೊಳಗೆ ಶಾಸಕರ ರಾಜೀನಾಮೆ ಕುರಿತು ಸ್ಪೀಕರ್ ತೀರ್ಮಾನಿಸಬೇಕೆಂದು ಮಧ್ಯಂತರ ಆದೇಶ ಹೊರಡಿಸುವ ಮೂಲಕ ನ್ಯಾಯಾಲಯ ತನ್ನ ನ್ಯಾಯಾಂಗ ಕಾರ್ಯವ್ಯಾಪ್ತಿಯನ್ನು ಮೀರಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಸ್ಪೀಕರ್ ನಿರ್ಧಾರ ತೆಗೆದುಕೊಂಡ ನಂತರ ನ್ಯಾಯಾಲಯ ಮಧ್ಯೆ ಪ್ರವೇಶಿಸಬಹುದೇ ಹೊರತು ಅದಕ್ಕಿಂತ ಮೊದಲು ಅಲ್ಲ. ಸ್ಪೀಕರ್ ನಿರ್ಧಾರಕ್ಕೆ ಮುನ್ನ ನ್ಯಾಯಾಂಗ ವಿಮರ್ಶೆಗೆ ಅವಕಾಶವಿಲ್ಲ ಎಂದು ವಾದಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com