ನಾಳೆ ವಿಶ್ವಾಸ ಮತ ಯಾಚನೆಗೆ ಹಾಜರಾಗುವುದಿಲ್ಲ, ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ: ಅತೃಪ್ತ ಶಾಸಕರು

ಸುಪ್ರೀಂ ಕೋರ್ಟ್ ನ ತೀರ್ಪನ್ನು ನಾವು ಗೌರವಿಸುತ್ತೇವೆ, ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ...

Published: 17th July 2019 12:00 PM  |   Last Updated: 17th July 2019 07:34 AM   |  A+A-


File photo of rebel legislators

ಅತೃಪ್ತ ಶಾಸಕರ ಸಂಗ್ರಹ ಚಿತ್ರ

Posted By : SUD SUD
Source : Online Desk
ಮುಂಬೈ:  ಸುಪ್ರೀಂ ಕೋರ್ಟ್ ನ ತೀರ್ಪನ್ನು ನಾವು ಗೌರವಿಸುತ್ತೇವೆ, ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಮುಂಬೈಯಿಂದ ಅತೃಪ್ತ ಶಾಸಕರು ಬುಧವಾರ ಸುಪ್ರೀಂ ಕೋರ್ಟ್ ನ ಮಧ್ಯಂತರ ಆದೇಶ ಹೊರಬಂದ ನಂತರ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ತಾವು ಈ ಹಿಂದೆ ಹೇಳಿದಂತೆ ಮುಂಬೈಯಿಂದ ಇಂದು ವಿಡಿಯೊ ಸಂದೇಶ ಕಳುಹಿಸಿರುವ ಅತೃಪ್ತ ಶಾಸಕರು,  ನಮಗೆ ಕೋರ್ಟ್ ತೀರ್ಪು ಮೇಲೆ ವಿಶ್ವಾಸವಿದೆ, ನಮ್ಮ ಮೇಲೆ ಒತ್ತಡ ಹಾಕುವಂತಿಲ್ಲ ಎಂದು ತೀರ್ಪು ನೀಡಿದೆ. ನಾಳೆ ವಿಧಾನಸಭೆ ಕಲಾಪದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ. 

ಅತೃಪ್ತ ಶಾಸಕರ ಪರವಾಗಿ ಮಾತನಾಡಿರುವ ಬಿ ಸಿ ಪಾಟೀಲ್ ನಾವು ಮತ್ತೆ ಸರ್ಕಾರಕ್ಕೆ ಬೆಂಬಲ ನೀಡುವ ಪ್ರಶ್ನೆಯೇ ಇಲ್ಲ, ನಮ್ಮ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದರಿಂದ ಸರ್ಕಾರ ಅಲ್ಪಮತಕ್ಕೆ ಕುಸಿಯಲಿದ್ದು ನಾಳೆ ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸಮತ ಗೆಲ್ಲುವುದು ಕ್ಷೀಣವಾಗಿದೆ. 
Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp