ಬಿಜೆಪಿಯವರು ನಿನ್ನನ್ನ ಡಿಸಿಎಂ ಮಾಡಲ್ಲ. ನಮ್ಮ ಪಕ್ಷಕ್ಕೆ ಬಾ: ಶ್ರೀರಾಮುಲುಗೆ ಸದನದಲ್ಲೇ ದೋಸ್ತಿ ನಾಯಕರ ಆಪರೇಷನ್?

ರಮೇಶ್ ಜಾರಕಿಹೊಳಿಯನ್ನು ಡಿಸಿಎಂ ಮಾಡ್ತಾರೆ, ಬಿಜೆಪಿಯಲ್ಲಿ ಯಾವುದೇ ಕಾರಣಕ್ಕೂ ನಿನಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವುದಿಲ್ಲ ಎಂದು ಶಾಸಕ ಶ್ರೀರಾಮುಲುಗೆ ...

Published: 18th July 2019 12:00 PM  |   Last Updated: 18th July 2019 02:44 AM   |  A+A-


DK Shivakumar with  B Sriramulu

ಶ್ರೀರಾಮಲು ಮತ್ತು ಡಿ.ಕೆ ಶಿವಕುಮಾರ್

Posted By : SD SD
Source : ANI
ಬೆಂಗಳೂರು: ರಮೇಶ್ ಜಾರಕಿಹೊಳಿಯನ್ನು ಡಿಸಿಎಂ ಮಾಡ್ತಾರೆ, ಬಿಜೆಪಿಯಲ್ಲಿ ಯಾವುದೇ ಕಾರಣಕ್ಕೂ ನಿನಗೆ ಉಪಮುಖ್ಯಮಂತ್ರಿ ಹುದ್ದೆ ನೀಡುವುದಿಲ್ಲ ಎಂದು ಶಾಸಕ ಶ್ರೀರಾಮುಲುಗೆ ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ವಿಧಾನಸಭೆ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಸ್ಪೀಕರ್ ಮುಂದೂಡಿದ ಹಿನ್ನೆಲೆಯಲ್ಲಿ ಎಲ್ಲಾ ನಾಯಕರು ಭೋಜನಕ್ಕೆ ತೆರಳಿದರು. ಈ ವೇಳೆ ಸದನದಲ್ಲಿಯೇ  ಇದ್ದ ಬಿಜೆಪಿ ಶಾಸಕ ಶ್ರೀರಾಮುಲುಗೆ ಸಚಿವ ಡಿ.ಕೆ ಶಿವಕುಮಾರ್ ಓಪನ್ ಆಪರ್ ನೀಡಿದ್ದಾರೆ ಎನ್ನಲಾಗುತ್ತಿದೆ.

ನಂತರ ರಾಮುಲು ಬಳಿ ಬಂದ ಶಿವಕುಮಾರ್ ಕೆಲ ಸಮಯ ಮಾತುಕತೆ ನಡೆಸಿದ್ದು, ಅವರ ಸಂಭಾಷಣೆ ಕುತೂಹಲ ಕೆರಳಿಸಿದೆ, ಇನ್ನೂ ಈ ವೇಳೆ ಮಾತನಾಡಿದ ಕುಮಾರಸ್ವಾಮಿ, ಅಲ್ಲಿ ಕೂತು ಏನು ಯೋಚನೆ ಮಾಡ್ತಿದ್ದೀಯಾ, ನಮ್ಮ ಬಳಿಗೆ ಬಾ ಎಂದು ಕರೆದಿದ್ದಾರೆ.

ಇನ್ನೂ ಈ ಮಾತುಕತೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಶ್ರೀರಾಮುಲು, ಅವರ ಸೀಟೇ ಅಲ್ಲಾಡುತ್ತಿದೆ, ಮೊದಲು ಅವರ ಸ್ಥಾನ ಉಳಿಸಿಕೊಳ್ಳಲಿ, ಬೇಕಾದರೇ ಶಿವಕುಮಾರ್ ಅವರೇ ನಮ್ಮ ಪಕ್ಷಕ್ಕೆ ಬರಲಿ ಎಂದು ಹೇಳಿದ್ದಾರೆ.

ನಾನು ಊಟಕ್ಕೆ ಹೋಗುವುದು ತಡವಾಗಿತ್ತು, ಸಿಎಂ ಮತ್ತು ಶಿವಕುಮಾರ್ ಏನೋ ಮಾತನಾಡುತ್ತಿದ್ದರು, ಆಗ ಅವರು ಏನು ಹೇಳಿದರು ಎಂಬುದು ನನಗೆ ಗೊತ್ತಾಗಲಿಲ್ಲ, ಟಿವಿಯಲ್ಲಿ ನೋಡಿದ ಮೇಲೆ ತಿಳಿಯಿತು ಎಂದು ಪ್ರತಿಕ್ರಿಯಿಸಿದ್ದಾರೆ.
Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp