ಶುಕ್ರವಾರ ಮಧ್ಯಾಹ್ನದ ಒಳಗೆ ಬಹುಮತ ಸಾಬೀತುಪಡಿಸಿ: ಸಿಎಂಗೆ ರಾಜ್ಯಪಾಲರ ನಿರ್ದೇಶನ

ವಿಶ್ವಾಸಮತ ಸಾಬೀತು ಕುರಿತ ಚರ್ಚೆ ನಾಳೆಗೆ ಮುಂದೂಡಿದ ಬೆನ್ನಲ್ಲೇ ನಾಳೆ (ಶುಕ್ರವಾರ) ಮಧ್ಯಾಹ್ನ ೧.೩೦ರೊಳಗೆ ಬಹುಮತ ಸಾಬೀತುಪಡಿಸಬೇಕೆಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ರಾಜ್ಯಪಾಲ ವಜುಭಾಯಿವಾಲಾ ನಿರ್ದೇಶಿಸಿದ್ದಾರೆ.

Published: 18th July 2019 12:00 PM  |   Last Updated: 18th July 2019 08:57 AM   |  A+A-


ಶುಕ್ರವಾರ ಮಧ್ಯಾಹ್ನದ ಒಳಗೆ ಬಹುಮತ ಸಾಬೀತುಪಡಿಸಿ: ಸಿಎಂಗೆ ರಾಜ್ಯಪಾಲರ ನಿರ್ದೇಶನ

Posted By : RHN RHN
Source : Online Desk
ಬೆಂಗಳೂರು: ವಿಶ್ವಾಸಮತ ಸಾಬೀತು ಕುರಿತ ಚರ್ಚೆ ನಾಳೆಗೆ ಮುಂದೂಡಿದ ಬೆನ್ನಲ್ಲೇ ಶುಕ್ರವಾರ ಮಧ್ಯಾಹ್ನ 1.30ರೊಳಗೆ ಬಹುಮತ ಸಾಬೀತುಪಡಿಸಬೇಕೆಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ರಾಜ್ಯಪಾಲ ವಜುಭಾಯಿವಾಲಾ ನಿರ್ದೇಶಿಸಿದ್ದಾರೆ.

ಇದಕ್ಕೆ ಮುನ್ನ ವಿಶ್ವಾಸಮತ ಯಾಚನೆ ಚರ್ಚೆಗಾಗಿ ಸೇರಿದ್ದ ವಿಧಾನಸಭೆ ಆಡಳಿತ ಹಾಗೂ ವಿರೋಧ ಪಕ್ಷಗಳ ನಾಯಕರ ಗದ್ದಲದಿಂದ ತುಂಬಿದ್ದು ಕಡೆಗೆ ಸದನವನ್ನು ನಾಳೆ ಬೆಳಿಗ್ಗೆ ಹನ್ನೊಂದಕ್ಕೆ ಮುಂದೂಡಲಾಗಿದೆ.

ವಿಶ್ವಾಸ ಮತಯಾಚನೆಗೆ ಸ್ಪೀಕರ್ ವಿಳಂಬ ಂಆಡುತ್ತಿದ್ದಾರೆ  ಎಂಬ ವಿಚಾರದಲ್ಲಿ ಸದನದಲ್ಲಿ ಭಾರೀ ಕೋಲಾಹಲ ಏರ್ಪಟ್ಟ ಹಿನ್ನೆಲೆಯಲ್ಲಿ ರಾಜ್ಯಪಾಲರು ಇಂದೇ ವಿಶ್ವಾಸಮತ ಪ್ರಕ್ರಿಯೆ ಮುಗಿಸುವಂತೆ ಸ್ಪೀಕರ್ ಗೆ ಸಂದೇಶ ರವಾನಿಸಿದ್ದರು. ಆದರೆ ಅದಾಗಲೇ ಸ್ಪೀಕರ್ ರಮೇಶ್ ಕುಮಾರ್ ತಾವು ಎಜೆ ಉದಯ್ ಹೊಳ್ಳ ಜತೆ ವಿಪ್ ಜಾರಿ ಸಂಬಂಧ ಚರ್ಚೆಗೆ ತೆರಳಿದ್ದ ಕಾರಣ ಸದನವನ್ನು ಉಪಸಭಾಪತಿಗಳು ಮುನ್ನಡೆಸಿದ್ದರು.

ಸದನದಲ್ಲಿ ಗಲಾಟೆ, ಗದ್ದಲ ಮುಂದುವರಿದು ಆಡಳಿತ ಪಖ್ಷದವರೇ ಆಪರೇಶನ್ ಕಮಲ ವಿರುದ್ಧ ಸಿಡಿದು ಪ್ರತಿಭಟಿಸಿದರೆ ಬಿಜೆಪಿ ವಿಶ್ವಾಸಮತ ಯಾಚನೆ ನಡೆಸಿ ಎಂದು ಪ್ರತಿಭಟಿಸಿದೆ.

ಕಡೆಗೆ ಉಪಸಭಾಪತಿಗಳು ನಾಳೆ (ಶುಕ್ರವಾರ) ಬೆಳಿಗ್ಗೆ ಹನ್ನೊಂದಕ್ಕೆ ಸದನದ ಕಲಾಪವನ್ನು ಮುಂದೂಡಿ ಆದೇಶಿಸಿದ್ದಾರೆ.

ಆದರೆ ಸದನದಲ್ಲಿ ವಿಶ್ವಾಸಮತ ಯಾಚನೆ ಆಗುವವರೆಗೆ ಅಹೋರಾತ್ರಿ ಹೋರಾಟ ನಡೆಸುವುದಾಗಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp