ವಿಶ್ವಾಸ ಮತದಲ್ಲಿ ದೋಸ್ತಿ ಸರ್ಕಾರಕ್ಕೆ ಸೋಲು ಖಚಿತ: ಬಿಎಸ್ ಯಡಿಯೂರಪ್ಪ

ಇಂದು ನಡೆಯಲಿರುವ ವಿಶ್ವಾಸಮತ ಯಾಚನೆಯಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರಕ್ಕೆ ಸೋಲು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

Published: 18th July 2019 12:00 PM  |   Last Updated: 18th July 2019 11:13 AM   |  A+A-


There is no doubt that their motion will be defeated: BS Yaddyurappa on Trust vote

ವಿಧಾನಸೌಧದಲ್ಲಿ ಬಿಎಸ್ ವೈ

Posted By : SVN SVN
Source : ANI
ಬೆಂಗಳೂರು: ಇಂದು ನಡೆಯಲಿರುವ ವಿಶ್ವಾಸಮತ ಯಾಚನೆಯಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರಕ್ಕೆ ಸೋಲು ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಇಂದು ವಿಧಾನಸೌಧಕ್ಕೆ ತಮ್ಮ ಶಾಸಕರೊಂದಿಗೆ ಆಗಮಿಸಿದ ಬಿಎಸ್ ಯಡಿಯೂರಪ್ಪ ಅವರು ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ನೂರಕ್ಕೆ ನೂರ ಐದು ಪ್ರತಿಶತ ದೋಸ್ತಿ ಸರ್ಕಾರಕ್ಕೆ ಸೋಲು ಖಚಿತ. ನಾವು 105 ಶಾಸಕರಿದ್ದು, ಕಾಂಗ್ರೆಸ್-ಜೆಡಿಎಸ್ ಶಾಸಕರ ಸಂಖ್ಯಾ ಬಲ ನೂರಕ್ಕಿಂತಲೂ ಕಡಿಮೆಯಾಗಿದೆ. ಹೀಗಾಗಿ ಇಂದು ವಿಶ್ವಾಸ ಮತ ಯಾಚನೆಯಲ್ಲಿ ಮೈತ್ರಿ ಸರ್ಕಾರಕ್ಕೆ ಸೋಲು ಖಚಿತ ಎಂದು ಹೇಳಿದರು.

ಇನ್ನು ಕೆಲವೇ ಕ್ಷಣಗಳಲ್ಲಿ ವಿಧಾನಸೌಧದಲ್ಲಿ ಕಲಾಪ ಆರಂಭವಾಗಲಿದ್ದು, ವಿಶ್ವಾಸಮತ ಯಾಚನೆಗೂ ಮುನ್ನ ನಾಯಕರಿಂದ ಚರ್ಚೆ ನಡೆಯಲಿದೆ.
Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp