ಮಾಡಿದ್ದುಣ್ಣೋ ಮಾರಾಯಾ: ರಾಜಕೀಯ ಹೈ ಡ್ರಾಮಾ; ಮತದಾನ ಪ್ರಭುಗಳಿಗೆ ಒಂದು ದಿನ ಮಾತ್ರ ಬೆಲೆ; ಉಪೇಂದ್ರ

ವಿಧಾನಸಭೆಯಲ್ಲಿ ರಾಜಕೀಯ ಪಕ್ಷಗಳ ಹೈ ಡ್ರಾಮಾದಿಂದ ರಾಜ್ಯದ ಜನತೆ ತೋಳಲಾಟಕ್ಕೆ ಸಿಲುಕುವಂತಾಗಿದೆ. ಮತದಾನ ಪ್ರಭುಗಳು ಮತ ನೀಡಿ ಹಾರಿಸಿದ ಶಾಸಕರು ಕಚ್ಚಾಡುತ್ತಿದ್ದಾರೆ.
ಉಪೇಂದ್ರ
ಉಪೇಂದ್ರ
ಬೆಂಗಳೂರು: ವಿಧಾನಸಭೆಯಲ್ಲಿ ರಾಜಕೀಯ ಪಕ್ಷಗಳ ಹೈ ಡ್ರಾಮಾದಿಂದ ರಾಜ್ಯದ ಜನತೆ ತೋಳಲಾಟಕ್ಕೆ ಸಿಲುಕುವಂತಾಗಿದೆ. ಮತದಾನ ಪ್ರಭುಗಳು ಮತ ನೀಡಿ ಹಾರಿಸಿದ ಶಾಸಕರು ಕಚ್ಚಾಡುತ್ತಿದ್ದಾರೆ. 
ಮುಖ್ಯಮಂತ್ರಿ ಕುಮಾರಸ್ವಾಮಿ ವಿಶ್ವಾಸ ಮತಯಾಚನೆ ಸಂಬಂಧ ಇಂದು ನಡೆದ ಕಲಾಪ ಇನ್ನಿಲ್ಲದಂತಾ ಸನ್ನಿವೇಶಗಳಿಗೆ ಎಡೆ ಮಾಡಿಕೊಟ್ಟಿದೆ. ಇದರಿಂದ ಬೇಸರಗೊಂಡು ಟ್ವೀಟ್ ಮಾಡಿರುವ ಉತ್ತಮ ಪ್ರಜಾಕೀಯ ಪಕ್ಷ(ಯುಪಿಪಿ)ದ ಸಂಸ್ಥಾಪಕ ಉಪೇಂದ್ರ ಅವರು 'ಈಗಿನ ರಾಜಕೀಯ ವ್ಯವಸ್ಥೆಯಲ್ಲಿ ಮತ ಚಲಾಯಿಸುವ ಒಂದು ದಿನ ಮಾತ್ರ ನಮಗೆ ಬೆಲೆ ಇರುತ್ತದೆ. ಆನಂತರ ನಾವು ಮೂಕ ಪ್ರೇಕ್ಷಕರು!!!!  ನಾಯಕರಿಂದ ಪ್ರಜೆಗಳಿಗೆ ಸಂಪೂರ್ಣ ಅಧಿಕಾರ ಹಸ್ತಾಂತರ ಮಾಡಲು ಬಹುಮತ ಬೇಕು ಅದಕ್ಕೆ ಪ್ರಜೆಗಳೇ ಪ್ರಜಾಕೀಯ ಪಕ್ಷಕ್ಕೆ ಸ್ಪರ್ಧಿ ಹಾಗೂ ಕಾರ್ಯಕರ್ತರಾಗಬೇಕು!! (ಮತ್ತೊಬ್ಬ ನಾಯಕ ಮಾಡಲಿ ಎಂದು ನಾವು ಕಾಯಬಾರದು)' ಬರೆದುಕೊಂಡಿದ್ದಾರೆ.
ಕಲಾಪ ನಾಳೆಗೆ ಮುಂದೂಡಲಾಗಿದ್ದು ಈ ಮಧ್ಯೆ ರಾಜ್ಯಪಾಲರು ನಾಳೆ ವಿಶ್ವಾಸ ಮತ ಸಾಬೀತು ಪಡಿಸುವಂತೆ ಸಿಎಂ ಕುಮಾರಸ್ವಾಮಿ ಅವರಿಗೆ ಆದೇಶ ನೀಡಿದ್ದು ಬಹುಮತ ಸಾಬೀತು ಪಡಿಸಬಹುದೇ ಅಥವಾ ವಿಶ್ವಾಸ ಮತ ಸಾಬೀತು ಮಡಲಾಗದೇ ವಿದಾಯ ಭಾಷಣ ಮಾಡಿ ನಿರ್ಗಮಿಸುವರೋ ಎಂಬುದೀಗ ತೀವ್ರ ಕುತೂಹಲ ಮೂಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com