ನಾವಿನ್ನೂ ಮಾನ ಮರ್ಯಾದೆ ಇಟ್ಟುಕೊಂಡು ಬದುಕುತ್ತಿದ್ದೇವೆ: ಸಿಎಂ ಕುಮಾರಸ್ವಾಮಿ

ಕಾಂಗ್ರೆಸ್, ಜೆಡಿಎಸ್ ನ 15 ಶಾಸಕರು ಬಂಡಾಯ ಸಾರಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿಗೆ ಇಂದು ವಿಶ್ವಾಸಮತ ಯಾಚನೆಯ...

Published: 18th July 2019 12:00 PM  |   Last Updated: 18th July 2019 12:35 PM   |  A+A-


H.D kumaraswamy

ಎಚ್.ಡಿ ಕುಮಾರಸ್ವಾಮಿ

Posted By : SD SD
Source : Online Desk
ಬೆಂಗಳೂರು: ಕಾಂಗ್ರೆಸ್, ಜೆಡಿಎಸ್ ನ 15 ಶಾಸಕರು ಬಂಡಾಯ ಸಾರಿ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಸಿಎಂ ಕುಮಾರಸ್ವಾಮಿಗೆ ಇಂದು ವಿಶ್ವಾಸಮತ ಯಾಚನೆಯ ಅಗ್ನಿ ಪರೀಕ್ಷೆ ಎದುರಾಗಿದೆ.

ವಿಶ್ವಾಸ ಮತಯಾಚನೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿಧಾನಸಭೆಯಲ್ಲಿ ಭಾಷಣ ಮಾಡಿದರು. ಒಂದೇ ದಿನದಲ್ಲಿ ವಿಶ್ವಾಸ ಮತಯಾಚನೆ ಮುಗಿಸುವುದು ಸಾಧ್ಯವಾಗದ ಮಾತು, ಈ ಹಿಂದೆ ಒಂದೇ ದಿನದಲ್ಲಿ ಅಥವಾ ಒಂದೇ ಗಂಟೆಯಲ್ಲಿ ವಿಶ್ವಾಸ ಮತಯಾಚನೆ ಮಂಡನೆ  ಮಾಡಿರಬಹುದು.

ಆದರೆ ಅಂದಿನ ಬೆಳವಣಿಗೆ ಬೇರೆ, ಇಂದಿನ ಬೆಳವಣಿಗೆ ಬೇರೆ, ಸ್ಪೀಕರ್ ಬಗ್ಗೆಯೂ ಅವಿಶ್ವಾಸದ ವಾತಾವರಣ ನಿರ್ಮಿಸಿದ್ದಾರೆ. ಇದರ ಬಗ್ಗೆ ಚರ್ಚೆ ನಡೆಯಲಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ವಿರೋಧ ಪಕ್ಷದ ನಾಯಕ ಬಿ.ಎಸ್ ಯಡಿಯೂರಪ್ಪ ಅವರು ಆತುರದಲ್ಲಿದ್ದಾರೆ, ಆದರೆ ಸದನದ ಸದಸ್ಯರಿಗೆ ಹೇಳುತ್ತೇನೆ. ನಮ್ಮದು ಲೂಟಿ ಸರ್ಕಾರವಲ್ಲ. ನಾನು ಹಾಗೂ ನಮ್ಮ ಸಂಪುಟದ ಮಂತ್ರಿಗಳು ಮಾನ, ಮರ್ಯಾದೆ ಇಟ್ಟುಕೊಂಡು ಬದುಕಿದ್ದಾರೆ.

ಚರ್ಚೆ ನಡೆಸದೇ ವಿಶ್ವಾಸಮತ ಯಾಚನೆ ಸಾಧ್ಯವೇ? ಎಂದು ಪ್ರಶ್ನಿಸಿದ ಕುಮಾರಸ್ವಾಮಿ ಕಳೆದ 14 ತಿಂಗಳಿಂದ ಭದ್ರವಾದ ಸರ್ಕಾರ ವನ್ನು ಅಸ್ಥಿರಗೊಳಿಸುತ್ತಿರುವವರು ಯಾರು ಎಂಬ ಚರ್ಚೆ ನಡೆಯಬೇಕು. ಎಂದು ಸಿಎಂ ಹೇಳಿದ್ದಾರೆ.

ಐಎಂಎ ಪ್ರಕರಣ, ಜಿಂದಾಲ್ ಪ್ರಕರಣದ ಬಗ್ಗೆಯೂ ನಾನು ಸತ್ಯವನ್ನು ಜನರ ಮುಂದೆ ಇಡಬೇಕಾಗಿದೆ. ಬರಗಾಲ, ರಾಜ್ಯದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಯಬೇಕು ಹೀಗಾಗಿ ಚರ್ಚೆ ನಡೆಸಲು ಸಮಯಾವಕಾಶ ನೀಡಬೇಕು. ಇಂದಿನ ರಾಜಕೀಯ ಪರಿಸ್ಥಿತಿ ಬಗ್ಗೆ ಜನರು ಚರ್ಚಿಸುತ್ತಿದ್ದಾರೆ. ಸಾರ್ವಜನಿಕರಿಗೆ ತಪ್ಪು ಸಂದೇಶ ಹೋಗದಂತೆ ನಾವು ಕಲಾಪದಲ್ಲಿ ಚರ್ಚೆ ನಡೆಸಬೇಕಾಗಿದೆ ಎಂದು ಸದನದಲ್ಲಿ ಕೋರಿದ್ದಾರೆ.
Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp