ಆಡಳಿತ-ವಿಪಕ್ಷಗಳ ಗದ್ದಲ: ವಿಧಾನಸಭೆ ಕಲಾಪ ಮಧ್ಯಾಹ್ನ 3 ಕ್ಕೆ ಮುಂದೂಡಿಕೆ

ವಿಶ್ವಾಸಮತಯಾಚನೆಯಾಗದೇ, ವಿಪಕ್ಷ-ಆಡಳಿತಪಕ್ಷದ ನಾಯಕರ ಗದ್ದಲ, ವಾಗ್ವಾದಗಳ ನಡುವೆ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಗಿದೆ.
ಆಡಳಿತ-ವಿಪಕ್ಷಗಳ ಗದ್ದಲ:  ವಿಧಾನಸಭೆ ಕಲಾಪ ಮಧ್ಯಾಹ್ನ 3 ಕ್ಕೆ ಮುಂದೂಡಿಕೆ
ಆಡಳಿತ-ವಿಪಕ್ಷಗಳ ಗದ್ದಲ: ವಿಧಾನಸಭೆ ಕಲಾಪ ಮಧ್ಯಾಹ್ನ 3 ಕ್ಕೆ ಮುಂದೂಡಿಕೆ
ಬೆಂಗಳೂರು: ವಿಶ್ವಾಸಮತಯಾಚನೆಯಾಗದೇ, ವಿಪಕ್ಷ-ಆಡಳಿತಪಕ್ಷದ ನಾಯಕರ ಗದ್ದಲ, ವಾಗ್ವಾದಗಳ ನಡುವೆ ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಲಾಗಿದೆ. 
ಸದನದಲ್ಲಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಭಾಷಣದ ನಂತರ ಆಡಳಿತ ಪಕ್ಷದ ನಾಯಕರು ವಿಪಕ್ಷ ನಾಯಕರ ವಿರುದ್ಧ ಶಾಸಕರಿಗೆ ಹಣದ ಆಮಿಷವೊಡ್ಡಿ ಕುದುರೆ ವ್ಯಾಪಾರ ಮಾಡುತ್ತಿರುವ ಆರೋಪ ಮಾಡಿದರು. ಈ ವೇಳೆ ಸದನದಲ್ಲಿ ಗದ್ದಲ ಉಂಟಾಯಿತು. ಜನಪ್ರತಿನಿಧಿಗಳ ವರ್ತನೆಗೆ ಅಸಮಾಧಾನಗೊಂಡ ಸ್ಪೀಕರ್ ರಮೇಶ್ ಕುಮಾರ್ ಶಾಸಕರ ಖರೀದಿ ಆರೋಪಕ್ಕೆ ಸಂಬಂಧಿಸಿದಂತೆ ಆಡಳಿತ-ವಿಪಕ್ಷಗಳಿಗೆ ಚಾಟಿ ಬೀಸಿದರು.  ನಿಮ್ಮ ಹೊಲಸು ವ್ಯಾಪಾರ ಸ್ವಾರ್ಥಕ್ಕಾಗಿ, ಗೌರವವಾಗಿ ಬದುಕುತ್ತಿರುವವರನ್ನು ಸಾಯಿಸುತ್ತಿದ್ದೀರಿ ಎಂದು ರಮೇಶ್ ಕುಮಾರ್ ಅಸಮಾಧಾನ ಹೊರಹಾಕಿದ್ದಾರೆ. 
ಪ್ರಾಮಾಣಿಕರು ಇರುವುದು ಆಡಳಿತ-ವಿಪಕ್ಷಗಳಿಗೆ ಬೇಕಿಲ್ಲ. ಎಲ್ಲವನ್ನೂ ಬಿಚ್ಚಿಡಿ ನಿಮ್ಮ ಸ್ವಾರ್ಥ ಎಲ್ಲಿಗೆ ಬೇಕಾದರೂ ಬಂದು ನಿಲ್ಲಬಹುದು ಎಂದು ಸ್ಪೀಕರ್ ಬೇಸರ ವ್ಯಕ್ತಪಡಿಸಿದರು. ಆಡಳಿತ-ವಿಪಕ್ಷಗಳ ಗದ್ದಲದ ನಡುವೆಯೇ ಸ್ಪೀಕರ್ ಮಧ್ಯಾಹ್ನ 3 ಗಂಟೆಗೆ ಕಲಾಪವನ್ನು ಮುಂದೂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com