ರಕ್ಷಣೆ ಬಯಸಿ ಯಾವುದೇ ಶಾಸಕರು ತಮ್ಮನ್ನು ಕೋರಿಲ್ಲ- ಸ್ಪೀಕರ್

ಮೈತ್ರಿ ಸರ್ಕಾರವನ್ನು ಪತನಗೊಳಿಸುವ ನಿಟ್ಟಿನಲ್ಲಿ ಬಂಡಾಯ ಶಾಸಕರನ್ನು ಬಂಧನದಲ್ಲಿಡಲಾಗಿದೆ ಎಂಬ ಕಾಂಗ್ರೆಸ್ ಆರೋಪಿಸುತ್ತಿರುವಂತೆ ಯಾವುದೇ ಶಾಸಕರನ್ನು ತಮ್ಮಿಂದ ರಕ್ಷಣೆ ಬಯಸಿಲ್ಲ ಎಂದು ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ವಿಧಾನಸಭೆಯಲ್ಲಿಂದು ಹೇಳಿದರು.
ಸ್ಪೀಕರ್ ರಮೇಶ್ ಕುಮಾರ್
ಸ್ಪೀಕರ್ ರಮೇಶ್ ಕುಮಾರ್
ಬೆಂಗಳೂರು: ಮೈತ್ರಿ ಸರ್ಕಾರವನ್ನು ಪತನಗೊಳಿಸುವ ನಿಟ್ಟಿನಲ್ಲಿ ಬಂಡಾಯ ಶಾಸಕರನ್ನು ಬಂಧನದಲ್ಲಿಡಲಾಗಿದೆ ಎಂಬ ಕಾಂಗ್ರೆಸ್ ಆರೋಪಿಸುತ್ತಿರುವಂತೆ ಯಾವುದೇ ಶಾಸಕರನ್ನು ತಮ್ಮಿಂದ ರಕ್ಷಣೆ ಬಯಸಿಲ್ಲ ಎಂದು ಸ್ಪೀಕರ್ ಕೆ.ಆರ್. ರಮೇಶ್ ಕುಮಾರ್ ವಿಧಾನಸಭೆಯಲ್ಲಿಂದು ಹೇಳಿದರು.
ಮುಂಬೈಯಲ್ಲಿರುವ ಶಾಸಕರನ್ನು ಅಧಿವೇಶನಕ್ಕೆ ಹಾಜರಾಗುವಂತೆ ಮಾಡಲು ಸೂಕ್ತ ವಾತವಾರಣ ರೂಪಿಸುವಂತೆ ಹಿರಿಯ ಕಾಂಗ್ರೆಸ್ ಮುಖಂಡ ಹೆಚ್ ಕೆ ಪಾಟೀಲ್ ಮನವಿಗೆ ಉತ್ತರಿಸಿದ ಸ್ಪೀಕರ್,  ಯಾವುದೇ ಶಾಸಕರಾಗಲೀ ಅಥವಾ ಅವರ ಕುಟುಂಬದ ಸದಸ್ಯರಾಗಲೀ  ರಕ್ಷಣೆ ಬಯಸಿ ತಮ್ಮನ್ನು ಕೋರಿಲ್ಲ ಆದ್ದರಿಂದ ಈ ವಿಷಯವನ್ನು ಇಲ್ಲಿಗೆ ಬಿಡೋಣ ಎಂದರು.
ರಾಜೀನಾಮೆ ನೀಡಿರುವ ಶಾಸಕರನ್ನು ಭೇಟಿಯಾಗಲು ಮುಂಬೈಗೆ ಹೋಗಿದ್ದಾಗ ಅವರನ್ನು ಬಂಧನದಲ್ಲಿಡಲಾಗಿತ್ತು ಎಂದು ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್  ಸ್ಪೀಕರ್ ಗಮನಕ್ಕೆ ತಂದರು.ಇಂದು ಹೆಚ್ಚಿನ ಪ್ರಮಾಣದಲ್ಲಿ ವಿಶ್ವಾಸಮತ ನಿರ್ಣಯದ ಮೇಲಿನ ಚರ್ಚೆ ನಡೆದಿದ್ದು, ಈ ಪ್ರಕ್ರಿಯೆಯನ್ನು ಇಂದು ಅಂತ್ಯಗೊಳಿಸುವುದಾಗಿ ರಮೇಶ್ ಕುಮಾರ್ ತಿಳಿಸಿದರು.
ಇಂದು ಮಧ್ಯಾಹ್ನ 1-30ರೊಳಗೆ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ವಿಶ್ವಾಸಮತಯಾಚಿಸುವಂತೆ ನಿನ್ನೆ ಗಡುವು ವಿಧಿಸಿದ್ದ  ರಾಜ್ಯಪಾಲರು, ಈ ಪ್ರಕ್ರಿಯೆಯನ್ನು ಇಂದು ಪೂರ್ಣಗೊಳಿಸುವಂತೆ ಸೂಚನೆ ನೀಡಿದ್ದರು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com