ಬೇಡ, ಬೇಡ ಅಂದ್ರು ತೆನೆ ಹೊರಿಸಿದ್ದೆ ತಪ್ಪಾಯ್ತು: ಸಿಎಂ ಅವರ ಈ ಸ್ಥಿತಿಗೆ ನಾನೇ ಕಾರಣ; ಸಾ.ರಾ ಮಹೇಶ್

ಜಿ.ಟಿ ದೇವೇಗೌಡ ಸೇರಿದಂತೆ ಹಲವು ನಾಯಕರು ಎಚ್.ವಿಶ್ವನಾಥ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು ಬೇಡ ಎಂದಿದ್ದರು. ಹಾಗಿದ್ದರೂ ಪುಟ್ಟರಾಜು ಅವರ ಮಾತಿಗೆ ಬೆಲೆ ...
ಸಾ.ರಾ ಮಹೇಶ್
ಸಾ.ರಾ ಮಹೇಶ್
ಮೈಸೂರು: ಜಿ.ಟಿ ದೇವೇಗೌಡ ಸೇರಿದಂತೆ ಹಲವು ನಾಯಕರು ಎಚ್.ವಿಶ್ವನಾಥ್ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು ಬೇಡ ಎಂದಿದ್ದರು. ಹಾಗಿದ್ದರೂ ಪುಟ್ಟರಾಜು ಅವರ ಮಾತಿಗೆ ಬೆಲೆ ನೀಡಿ ನಾನು ವಿಶ್ವನಾಥ್ ಸೇರ್ಪಡೆಗೆ ಒಪ್ಪಿಕೊಂಡೆ, ಆ ಬಳಿಕ ಅವರನ್ನು ಜೆಡಿಎಸ್‌ಗೆ ಸೇರಿಸಿಕೊಳ್ಳಲಾಯಿತು, ಅದೊಂದು ತಪ್ಪಿನಿಂದಲೇ ಇಷ್ಟಕ್ಕೆಲ್ಲಾ ಕಾರಣ ಎಂದು ಸಚಿವ ಸಾ.ರಾ ಮಹೇಶ್ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಾ.ರಾ ಮಹೇಶ್ ಹಿರಿಯ ನಾಯಕ ಎಚ್‌.ವಿಶ್ವನಾಥ್ ವಿರುದ್ಧ ಹರಿಹಾಯ್ದಿದ್ದಾರೆ. ನಾನು ನಾಲ್ಕು ಬಾರಿ ಚುನಾವಣೆಗೆ ಸ್ಪರ್ಧಿಸಿ ಮೂರು ಬಾರಿ ಗೆದ್ದಿದ್ದಾನೆ, ಒಂಬತ್ತು ಬಾರಿ ಚುನಾವಣೆ ಎದುರಿಸಲು ನಿಮಗೆ ಹಣ ಎಲ್ಲಿಂದ ಬಂತು? ಎಂದು ವಿಶ್ವನಾಥ್ ಅವರನ್ನು ಕೆಣಕಿದ್ದಾಕೆ.
ನಾನು ಪ್ರಾಮಾಣಿಕನಲ್ಲದಿದ್ದರೂ ಭ್ರಷ್ಠಚಾರಿಯಲ್ಲ ಎಂದು ವಿಶ್ವನಾಥ್ ಜೆಡಿಎಸ್‌ಗೆ ಸೇರುವಾಗ ಹೇಳಿಕೊಂಡಿದ್ದರು. ವಿಶ್ವನಾಥ್ ತಮಗಿರುವ ಸಾಲಗಳ ವಿಚಾರವನ್ನು ನನ್ನ ಬಳಿ ಹೇಳಿಕೊಂಡಿದ್ದು ನಿಜ. ನಾನು ವ್ಯವಹಾರದಲ್ಲಿ ಒಬ್ಬ ಡೆವಲಪರ್ ಆಗಿದ್ದೇನೆ. ನಿಮ್ಮ ವಿರುದ್ಧವೂ ಜನ ನನ್ನನ್ನು ಗೆಲ್ಲಿಸಿದ್ದಾರೆ ಎಂಬುದನ್ನು ಮರೆಯಬೇಡಿ. ನೀವು ರಾಜಕೀಯವಾಗಿ ಶುದ್ಧಹಸ್ತರು ಎಂದು ಹೇಳಿಕೊಳ್ಳುತ್ತಿದ್ದೀರಿ. ಹಾಗಾದರೆ ಒಂಬತ್ತು ಚುನಾವಣೆಗಳಲ್ಲಿ ಸ್ಪರ್ಧಿಸಲು ನಿಮಗೆ ಹಣ ಎಲ್ಲಿಂದ ಬಂತು? ಎಂದು ಸಾ.ರಾ ಪ್ರಶ್ನಿಸಿದರು. 
ನಾವು ನಿಮ್ಮನ್ನು ಜೆಡಿಎಸ್ ರಾಜ್ಯಾಧ್ಯಕ್ಷರನ್ನಾಗಿ ಮಾಡಿದೆವು. ನಮ್ಮನ್ನು ನೀವು ಜಾತಿವಾದಿಗಳು ಎಂದು ಟೀಕಿಸಿದಿರಿ. ನಾವು ಜಾತಿವಾದಿಗಳಾಗಿದ್ದರೆ ನಿಮ್ಮನ್ನು ಅಧ್ಯಕ್ಷ ಮಾಡುತ್ತಿದ್ದೆವೆ? ಎಂದು ಅವರು ಪ್ರಶ್ನಿಸಿದರು. 
ನೀವು ರಾಜಕೀಯ ಶುದ್ದಹಸ್ತರಾಗಿದ್ದಲ್ಲಿ ಯಾಕೆ ವಿಶೇಷ ವಿಮಾನದಲ್ಲಿ ತೆರಳಿ ದೆಹಲಿಯಲ್ಲಿ ಕುಳಿತಿದ್ದೀರಿ? ಎಂದು ಪ್ರಶ್ನಿಸಿದ ಸಾ.ರಾ ಮಹೇಶ್, 'ವಿಧಾನಸಭೆಯಲ್ಲಿ ನಾನು ಆಡಿದ ಮಾತಿಗೆ ನೀವು ನನ್ನ ವಿರುದ್ದ ಮಾನನಷ್ಟ ಮೊಕದ್ದಮೆ ಹಾಕಲು ಸಾಧ್ಯವಿಲ್ಲ. ಆದರೆ ಹಕ್ಕು ಚ್ಯುತಿ ಮಂಡಿಸಲು ಅವಕಾಶ ಇದೆ. ಸೋಮವಾರ ಬಂದು ನನ್ನ ವಿರುದ್ದ ಹಕ್ಕು ಚ್ಯುತಿ ಮಂಡಿಸಿ' ಎಂದು ಸವಾಲು ಹಾಕಿದರು. 
ಎಚ್. ವಿಶ್ವನಾಥ್ ಗೆ ಕಾಂಗ್ರೆಸ್ ಪಕ್ಷ ಎಲ್ಲವನ್ನು ನೀಡಿತ್ತು, ಅವರು ಅಂಥಹ ಪಕ್ಷವನ್ನು ಬಿಟ್ಟು ಬಂದಿದ್ದಾರೆ, ಅವರು ಎಲ್ಲಿಯೇ ಬಹಿರಂಗ ಚರ್ಚೆಗೆ ಬಂದರು ನಾನು ಸಿದ್ದನಿದ್ದೇನೆ,.ಬಿಜೆಪಿಯವರು ತಮಗೆ ಆಮೀಷ ಒಡ್ಡಿದ್ದಾಗಿ ನನಗೆ ಹೇಳಿದ್ದರು ಎಂದು ಸಾ.ರಾ ಮಹೇಶ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com