ಸದನದಲ್ಲಿ ಮೊಳಗಿದ 'ಬಿರಿಯಾನಿ' ಕಥೆ: ಕೆರಳಿದ ಸಿಎಂ ಕುಮಾರಸ್ವಾಮಿ

ವಿಶ್ವಾಸ ಮತಯಾಚನೆ ಮೇಲಿನ ಚರ್ಚೆ ಇಂದು ವಿಧಾನಸಭೆಯಲ್ಲಿ ಬಿರುಸಿನಿಂದ ನಡೆಯುತ್ತಿದ್ದು ಈ ವೇಳೆ ಕೃಷ್ಣ ಭೈರೇಗೌಡ ಅವರು ಐಎಂಎ ಬಹುಕೋಟಿ ವಂಚನೆ ಪ್ರಕರಣದ ಬಗ್ಗೆ ಮಾತು ತೆಗೆದರು.
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ
ಬೆಂಗಳೂರು: ವಿಶ್ವಾಸ ಮತಯಾಚನೆ ಮೇಲಿನ ಚರ್ಚೆ ಇಂದು ವಿಧಾನಸಭೆಯಲ್ಲಿ ಬಿರುಸಿನಿಂದ ನಡೆಯುತ್ತಿದ್ದು ಈ ವೇಳೆ ಕೃಷ್ಣ ಭೈರೇಗೌಡ ಅವರು ಐಎಂಎ ಬಹುಕೋಟಿ ವಂಚನೆ ಪ್ರಕರಣದ ಬಗ್ಗೆ ಮಾತು ತೆಗೆದರು. 
ಐಎಂಎ ಬಹುಕೋಟಿ ವಂಚನೆ ಪ್ರಕರಣದಿಂದ ರಾಜ್ಯದ ಸಾವಿರಾರೂ ಜನರಿಗೆ ತೊಂದರೆಯಾಗಿದೆ ಎಂದು ಆರೋಪಿಸಿದರು. ಇದಕ್ಕೆ ಬಿಜೆಪಿ ಶಾಸಕ ಸಿಟಿ ರವಿ ಅವರು ಮಧ್ಯೆ ಮಾತನಾಡಿ ಯಾವ ಸರ್ಕಾರ ಈ ವಂಚನೆ ಪ್ರಕರಣದ ಹಿಂದೆ ಇದೆ ಅದನ್ನು ಹೇಳಿ ಬಿಡಿ. ಐಎಂಎ ಸಂಸ್ಥಾಪಕ ಮನ್ಸೂರ್ ಖಾನ್ ಜೊತೆ ಯಾರು ಹೋಗಿ ಬಿರಿಯಾನಿ ತಿಂದಿದ್ದರು. ಯಾರು ಯಾರನ್ನು ರಕ್ಷಿಸಿದರು ಎಂದು ಹೇಳಿದರು.
ಇದಕ್ಕೆ ಮಧ್ಯೆ ಎದ್ದು ನಿಂತು ಮಾತನಾಡಿದ ಕುಮಾರಸ್ವಾಮಿ ಅವರು ನಾನು ಬಿರಿಯಾನಿ ತಿನ್ನೊದ್ದಕ್ಕೆ ಹೋಗಿರಲಿಲ್ಲ. ರಂಜಾನ್ ಗೆ ಕರೆದಿದ್ದರು ಅದಕ್ಕೆ ಹೋಗಿದ್ದೆ. ಅಲ್ಲಿ ಕೊಟ್ಟ ಕರ್ಜೂರಣ್ಣನ್ನು ತಿಂದಿದ್ದೆ ಅದನ್ನೇ ಬಿರಿಯಾನಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ವೈರಲ್ ಮಾಡಿದ್ದರು ಎಂದು ಸಿಎಂ ಕುಮಾರಸ್ವಾಮಿ ಅವರು ಹೇಳಿದರು.
ಇದಕ್ಕೆ ನಗು ಮೊಗದಲ್ಲೇ ಉತ್ತರಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರು ನಾನ್ ವೆಜ್ ತಿನ್ನುವುದನ್ನು ಬಿಡಬೇಡಿ. ನಾನ್ ವೆಜ್ ತಿನ್ನದವರು ಇಂದು ತಿನ್ನುತ್ತಿದ್ದಾರೆ. ತಿನ್ನಬೇಕಾದರೂ ತಿನ್ನುವುದನ್ನು ಬಿಟ್ಟಿದ್ದಾರೆ ಎಂದು ಜನರು ನಗುತ್ತಾರೆ ನೀವು ನನ್ನ ಜೊತೆ ಬನ್ನಿ ಎಂದು ಹೇಳಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com