ನಮ್ಮ ಮೌನ ವಿಜಯದ ಸಂಕೇತ: ಸುಳ್ಳೇ ಡಿಕೆ ಶಿವಕುಮಾರ್ ಮನೆ ದೇವರು; ಆರ್. ಅಶೋಕ್

ಡಿ.ಕೆ ಶಿವಕುಮಾರ್ ಅಂದರೆ ಸುಳ್ಳು, ಸುಳ್ಳು ಎಂದರೇ ಡಿಕೆ ಶಿವಕುಮಾರ್, ಡಿಕೆಶಿವಕುಮಾರ್ ಅವರ ಮನೆ ದೇವರೇ ಸುಳ್ಳು, ಸುಪ್ರೀಂಕೋರ್ಟ್ ನಾಳೆಗೆ ವಿಚಾರಣೆ ...
ಆರ್. ಅಶೋಕ್
ಆರ್. ಅಶೋಕ್
ಬೆಂಗಳೂರು: ಡಿ.ಕೆ ಶಿವಕುಮಾರ್ ಅಂದರೆ ಸುಳ್ಳು, ಸುಳ್ಳು ಎಂದರೇ ಡಿಕೆ ಶಿವಕುಮಾರ್, ಡಿಕೆಶಿವಕುಮಾರ್ ಅವರ ಮನೆ ದೇವರೇ ಸುಳ್ಳು, ಸುಪ್ರೀಂಕೋರ್ಟ್ ನಾಳೆಗೆ ವಿಚಾರಣೆ ಮುಂದೂಡಿದೆ.ಆದರೆ ಸುಪ್ರೀಂಕೋರ್ಟ್ ವಿಚಾರಣೆ ಬಗ್ಗೆ ಸುಳ್ಳುವದಂತೆ ಹಬ್ಬಿಸುತ್ತಿದ್ದಾರೆ ಎಂದು ಮಾಜಿ ಡಿಸಿಎಂ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಧಿಕಾರ ಇರುವಾಗ ಯಾರಿಗೂ ಸಹಾಯ ಮಾಡುವುದಿಲ್ಲ, ಅಧಿಕಾರ ಹೋಗುತ್ತದೆ ಎಂದಾಗ ಎಲ್ಲರ ಮನೆಬಾಗಲಿಗೂ ಹೋಗಿ ಬೇಡುತ್ತಾರೆ, ಸುಪ್ರಿಂಕೋರ್ಟ್ ನಲ್ಲಿ ತೀರ್ಪು ಇನ್ನು ಬಾಕಿಯಿದೆ, ಕೋರ್ಟ್ ತೀರ್ಪು ಬರುವವರೆಗೂ ಡಿಕೆಶಿ ಸುಳ್ಳು ಹೇಳುವುದನ್ನು ಬಿಡಬೇಕು ಎಂದು ಸಲಹೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಆಡಳಿತಾರೂಢ ಸದಸ್ಯರು ಎಷ್ಟೇ ಧರಣಿ ಮಾಡಲಿ, ಗಲಾಟೆ ಮಾಡಲಿ ನಾವು ಮೌನವಾಗಿಯೇ ಇರುತ್ತೇವೆ, ಏಕೆಂದರೆ ನಮ್ಮ ಮೌನ ವಿಜಯದ ಸಂಕೇತ ಎಂದು ಹೇಳಿರುವ ಅವರು ವಿಶ್ವಾಸಮತ ಕೇಳಿ ಎಂದು ನಾವು ಮೊದಲು ಹೇಳಲಿಲ್ಲ. ಕುಮಾರಸ್ವಾಮಿ ಅವರೇ ವಿಶ್ವಾಸಮತ ಕೇಳುತ್ತೇನೆ. ಸಮಯ ನಿಗದಿ ಪಡಿಸುವಂತೆ ಕೇಳಿದ್ದಾರೆ. ಹೇಳಿದಂತೆ ಅವರು ನಡೆದುಕೊಳ್ಳಬೇಕು. ಆದರೆ ಆಡಳಿತಾರೂಢ ಸದಸ್ಯರು ಹಾಗೆ ಮಾಡುತ್ತಿಲ್ಲ. ಅವರೇ ಹೇಳಿಕೆ ನೀಡುತ್ತಾರೆ. ಅವರೇ ಪ್ರತಿಭಟಿಸುತ್ತಾರೆ ಎಂದರೆ ಏನು ಅರ್ಥ ? ಎಂದು ಪ್ರಶ್ನಿಸಿದರು.
ಸರ್ಕಾರಕ್ಕೆ ಬಹುಮತವಿಲ್ಲ ಎನ್ನುವುದು ಕಾಂಗ್ರೆಸ್-ಜೆಡಿಎಸ್ ಸದಸ್ಯರಿಗೆ ಬಹಳ ಚೆನ್ನಾಗಿಯೇ ಅರಿವಾಗಿದೆ. ಹೀಗಾಗಿ ಅವರು ವಿಶ್ವಾಸಮತಕ್ಕೆ ವಿಳಂಬ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com