ಸಮ್ಮಿಶ್ರ ಸರ್ಕಾರ ಪತನಕ್ಕೆ ಮುಹೂರ್ತ ಇಟ್ಟಿದ್ದು ಲಕ್ಷ್ಮಿ ಹೆಬ್ಬಾಳ್ಕರ್, ಡಿಕೆ ಶಿವಕುಮಾರ್!

ಯಾವುದೇ ತೊಂದರೆಯಿಲ್ಲದೇ ಕಾರ್ಯನಿರ್ವಹಿಸುತ್ತಿದ್ದ ಎಚ್,ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಕಂಟಕ ಆರಂಭವಾಗಿದ್ದು ಬೆಳಗಾವಿ ...
ಸಮ್ಮಿಶ್ರ ಸರ್ಕಾರ ಪತನಕ್ಕೆ ಮುಹೂರ್ತ ಇಟ್ಟಿದ್ದು ಲಕ್ಷ್ಮಿ ಹೆಬ್ಬಾಳ್ಕರ್-ಡಿಕೆ ಶಿವಕುಮಾರ್
ಸಮ್ಮಿಶ್ರ ಸರ್ಕಾರ ಪತನಕ್ಕೆ ಮುಹೂರ್ತ ಇಟ್ಟಿದ್ದು ಲಕ್ಷ್ಮಿ ಹೆಬ್ಬಾಳ್ಕರ್-ಡಿಕೆ ಶಿವಕುಮಾರ್
ಬೆಳಗಾವಿ: ಯಾವುದೇ ತೊಂದರೆಯಿಲ್ಲದೇ ಕಾರ್ಯನಿರ್ವಹಿಸುತ್ತಿದ್ದ ಎಚ್,ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ಕಂಟಕ ಆರಂಭವಾಗಿದ್ದು ಬೆಳಗಾವಿ ಪಿಎಲ್ ಡಿ ಬ್ಯಾಂಕ್ ಚುನಾವಣೆಯಿಂದ. 
ಶಾಸಕ ರಮೇಶ್  ಜಾರಕಿಹೊಳಿ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ನಡುವಿನ ಇಗೋ ಕ್ಲಾಶ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ನಾಂದಿ ಹಾಡಿತ್ತು. ಕಳೆದ ವರ್ಷ ಸೆಪ್ಟಂಬರ್ 7 ರಂದು ನಡೆದ ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಬಣ ಗೆದ್ದು ಬೀಗಿತ್ತು, ಜಾರಕಿಹೊಳಿ ಬಣ ಸೋತು ಸುಣ್ಣವಾಗಿತ್ತು.
ರಮೇಶ್, ಸತೀಶ್ ಮತ್ತು ಲಖನ್ ಜಾರಕಿಹೊಳಿ ಮೂವರು ಸೇರಿ ಹೆಬ್ಬಾಳ್ಕರ್ ಬೆಂಬಲಿಗರನ್ನು ಸೋಲಿಸಲು ನಡೆಸಿದ ಕಸರತ್ತು ವಿಫಲವಾಗಿತ್ತು. ಡಿಕೆ ಶಿವಕುಮಾರ್ ಅವರ ಬೆಂಬಲದಿಂದಾಗಿ ಹೆಬ್ಬಾಳ್ಕರ್ ಬಣ ಗೆದ್ದಿತ್ತು.
ಜಾರಕಿಹೊಳಿ ಮತ್ತು ಹೆಬ್ಬಾಳ್ಕರ್ ನಡುವಿನ ಮನಸ್ತಾಪವನ್ನು ಸರಿದೂಗಿಸಲು ಕಾಂಗ್ರೆಸ್ ಹೈಕಮಾಂಡ್ ಸೇರಿದಂತೆ ರಾಜ್ಯ ನಾಯಕರು ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾಗಿದ್ದವು. ದೆಹಲಿಯಲ್ಲಿ 2 ಬಾರಿ ಸಭೆ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ಪಿಎಲ್ ಡಿ ಬ್ಯಾಂಕ್ ಚುನಾವಣೆಗೂ ಮುನ್ನ ಹೆಬ್ಬಾಳ್ಕರ್ ಮತ್ತು ರಮೇಶ್ ಜಾರಕಿಹೊಳಿ ತುಂಬಾ ಆತ್ಮೀಯರಾಗಿದ್ದರು. ಒಂದು ಹಂತದಲ್ಲಿ ರಮೇಶ್ ಜಾರಕಿಹೊಳಿಗೆ ಸಂಪುಟದಲ್ಲಿ ಸ್ಥಾನ ಕೊಡಿಸಲು ಹೆಬ್ಬಾಳ್ಕರ್ ಲಾಬಿ ನಡೆಸಿದ್ದರು,.ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಸಚಿವರಾಗಿದ್ದ ಸತೀಶ್ ಜಾರಕಿಹೊಳಿಯನ್ನು ಕಿತ್ತು ಹಾಕಿ ರಮೇಶ್ ಗೆ ಸ್ಥಾನ ಕೊಡಿಸಲಾಗಿತ್ತು. 
ಆದರೆ ಬದಲಾದ ರಾಜಕೀಯ. ಸನ್ನಿವೇಶಗಳಿಂದಾಗಿ ಕುಮಾರಸ್ವಾಮಿ ಸರ್ಕಾರದಲ್ಲಿಯೂ ಕೂಡ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡಲಾಯಿತು,. ಸತೀಶ್ ಜಾರಕಿಹೊಳಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು.
ಆದರೆ ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ. ಡಿಕೆ ಶಿವಕುಮಾರ್ ಬೆಂಬಲದಿಂದಾಗಿ ಹೆಬ್ಬಾಳ್ಕರ್ ಬಣ ಗೆದ್ದ ನಂತರ ಬೆಳಗಾವಿಯ ರಾಜಕೀಯ ಚಿತ್ರಣವೇ ಬದಲಾಗಿ ಹೋಯಿತು.
ಒಕ್ಕಲಿಗ ನಾಯಕರ ಪ್ರಭಾವ ಹಾಗೂ  ಹೆಬ್ಬಾಳ್ಕರ್ ರಾಜಕೀಯ ಸಾಮರ್ಥ್ಯದಿಂದಾಗಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ  ಅವರನ್ನು ಕಡೆಗಣಿಸಲಾಯಿತು, ಇದು ಸಮ್ಮಿಶ್ರ ಸರ್ಕಾರದ ಪತನಕ್ಕೆ ಮೊದಲ ಮೆಟ್ಟಿಲಾಯಿತು.
ತಮಗೆ ಆದ ಅವಮಾನಕ್ಕೆ ಡಿಕೆ ಶಿವಕುಮಾರ್ ವಿರುದ್ಧ ಸೇಡು ತೀರಿಸಿಕೊಳ್ಳಲು ಮುಂದಾದ ರಮೇಶ್ ಜಾರಕಿ ಹೊಳಿ ಸಿಟ್ಟು ಅಂತಿಮವಾಗಿ ,ಸಮ್ಮಿಶ್ರ ಸರ್ಕಾರವನ್ನು ಬಲಿ ತೆಗೆದುಕೊಂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com