ಕುಸಿದು ಬಿದ್ದ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ: ಗೇಮ್ ಆಫ್ ಕರ್ಮಾ ಎಂದ ಬಿಜೆಪಿ

ಅತೃಪ್ತ ಶಾಸಕರ ಮನವೊಲಿಸುವಲ್ಲಿ ಕೊನೆಗೂ ವಿಫಲವಾದ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ಪತನವಾಗಿದ್ದು, ಕರ್ನಾಟಕದ ಜನತೆಯ ನಿರ್ದೇಶನವನ್ನು ಧಿಕ್ಕರಿಸಿ ಕೈ ಜೋಡಿಸಿದ್ದಕ್ಕೆ ಸಿಕ್ಕ ಕರ್ಮದ ಫಲ ಎಂದು ಬಿಜೆಪಿ ಕಿಡಿಕಾರಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಅತೃಪ್ತ ಶಾಸಕರ ಮನವೊಲಿಸುವಲ್ಲಿ ಕೊನೆಗೂ ವಿಫಲವಾದ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ಪತನವಾಗಿದ್ದು, ಕರ್ನಾಟಕದ ಜನತೆಯ ನಿರ್ದೇಶನವನ್ನು ಧಿಕ್ಕರಿಸಿ ಕೈ ಜೋಡಿಸಿದ್ದಕ್ಕೆ ಸಿಕ್ಕ ಕರ್ಮದ ಫಲ ಎಂದು ಬಿಜೆಪಿ ಕಿಡಿಕಾರಿದೆ.
ಅತ್ತ ಸರ್ಕಾರ ಪತನವಾಗುತ್ತಲೇ ಇತ್ತ ಟ್ವೀಟ್ ಮಾಡಿರುವ ಬಿಜೆಪಿ ಜನಾದೇಶವನ್ನು ಧಿಕ್ಕರಿಸಿ ಮಾಡಿಕೊಂಡಿದ್ದ ಅಪವಿತ್ರ ಮೈತ್ರಿಗೆ ಸಿಕ್ಕ ಫಲ ಇದು. ಗೇಮ್ ಆಫ್ ಕರ್ಮಾ ಎಂದು ಟ್ವೀಟ್ ಮಾಡಿದೆ. ಈ ಕುರಿತಂತೆ ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ ಘಟಕ, ಇದು ಕರ್ನಾಟಕ ಜನತೆಗೆ ಸಿಕ್ಕ ಗೆಲುವು. ಭ್ರಷ್ಟಾಚಾರ ಮತ್ತು ಅಪವಿತ್ರ ಮೈತ್ರಿಯ ಕೊನೆ. ನಾವು ಈ ಮೂಲಕ ಕರ್ನಾಕದ ಜನತೆಗೆ ಸ್ಥಿರ ಮತ್ತು ಜನಪರ ಸರ್ಕಾರ ನೀಡುವ ಪ್ರಮಾಣ ಮಾಡುತ್ತೇವೆ. ಮತ್ತೆ ಕರ್ನಾಟಕ ತಲೆ ಎತ್ತಿಕೊಳ್ಳುವಂತೆ ಮಾಡುತ್ತೇವೆ ಎಂದು ಟ್ವೀಟ್ ಮಾಡಿದೆ.
ಮತ್ತೊಂದು ಟ್ವೀಟ್ ನಲ್ಲಿ ಕರ್ನಾಟಕದಲ್ಲಿ ಮತ್ತೊಮ್ಮೆ ಪ್ರಜಾಪ್ರಭುತ್ವವನ್ನು ಸ್ಥಾಪನೆ ಮಾಡುವಲ್ಲಿ ಯಶಸ್ವಿಯಾಗಿದ್ದು, ಕಾಂಗ್ರೆಸ್-ಜೆಡಿಎಸ್ ಅಪವಿತ್ರ ಮೈತ್ರಿ ಕುಸಿದಿದೆ. ಕರ್ನಾಕದ ಜನತೆ ಬಿಜೆಪಿಯನ್ನು ಅತ್ಯಧಿಕ ಸ್ಥಾನಗಳನ್ನು ನೀಡಿ ಏಕೈಕ ಅತೀ ದೊಡ್ಡ ಪಕ್ಷವನ್ನಾಗಿ ಮಾಡಿತ್ತು. ಶೀಘ್ರದಲ್ಲೇ ನಾವು ಸರ್ಕಾರ ರಚನೆ ಮಾಡಲಿದ್ದು, ನಮ್ಮ ಭೂಮಿಯ ಘನತೆ ಮತ್ತು ಪಾವಿತ್ರ್ಯವನ್ನು ಎತ್ತಿಹಿಡಿಯುತ್ತೇವೆ. ಅಭಿವೃದ್ಧಿಯ ಯುಗವನ್ನು ನಾವು ಆರಂಭಿಸುತ್ತೇವೆ ಎಂದು ಟ್ವೀಟ್ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com