ಸಮ್ಮಿಶ್ರ ಸರ್ಕಾರ ಪತನವಾಗಲು ಕಾಣದ 'ಕೈ' ಕಾರಣ: ಶಾಲು ಸುತ್ತಿಕೊಂಡು ಸಿದ್ದುಗೆ ಹೊಡೆದ್ರಾ ರಾಹುಲ್ ಗಾಂಧಿ?

ಸಮ್ಮಿಶ್ರ ಸರ್ಕಾರವನ್ನು ಬೀಳಿಸಿದ್ದು ಯಾರು? ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ..,..
ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ
ರಾಹುಲ್ ಗಾಂಧಿ ಮತ್ತು ಸಿದ್ದರಾಮಯ್ಯ
ಬೆಂಗಳೂರು: ಸಮ್ಮಿಶ್ರ ಸರ್ಕಾರವನ್ನು ಬೀಳಿಸಿದ್ದು ಯಾರು? ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಭಾವನಾತ್ಮಕವಾಗಿ ಟ್ವೀಟ್  ಮಾಡಿದ್ದಾರೆ. 
ಸಮ್ಮಿಶ್ರ ಸರ್ಕಾರ ರಚನೆಯಾದ ಮೊದಲ ದಿನದಿಂದಲೂ ಪಕ್ಷದ ಹೊರಗೆ ಮತ್ತು ಒಳಗಿನ ಫಟ್ಟಭದ್ರ ಹಿತಾಸಕ್ತಿಗಳು ಸರ್ಕಾರ ಕೆಡವಲು ಆಸಕ್ತಿ ವಹಿಸಿದ್ದವು,  ಮೈತ್ರಿ ಸರ್ಕಾರಕ್ಕೆ ಆರಂಭದಿಂದಲೂ ಬೆದರಿಕೆ ಮತ್ತು ಅಡಚಣೆ  ಇತ್ತು.  ಇಂದು ಅವರ ದುರಾಸೆ ಗೆದ್ದಿದೆ ಎಂದು ನೊಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.
ರಾಹುಲ್ ಗಾಂಧಿ ಪ್ರಕಾರ ಪಕ್ಷದೊಳಗಿನ ಪಟ್ಟಭದ್ರ ಹಿತಾಸಕ್ತಿ ಯಾರು?
 ಕಾಂಗ್ರೆಸ್ ನ ಹಿರಿಯ ನಾಯಕ, ಅವರ ಹೆಸರನ್ನು ನಾನು ಹೇಳಲು ಬಯಸುವುದಿಲ್ಲ, ಅವರು ಸೇರಿದಂತೆ ಹಲವು ಪಟ್ಟಭದ್ರ ಹಿತಾಸಕ್ತಿಗಳಿದ್ದವು, ಅಧಿಕಾರ ಸಿಗಲಿಲ್ಲ ಎಂಬ ಕಾರಣಕ್ಕೆ ಹಲವು ಶಾಸಕರು ಬಂಡಾಯವೆದ್ದರು.
ಜಾರಕಿಹೊಳಿ ವಿವಾದಕ್ಕೆ ಡಿಕೆ ಶಿವಕುಮಾರ್ ಕಾರಣವಾದ್ರು. ಸಚಿವ ಸ್ಥಾನ ನೀಡಲು ಸಾಧ್ಯವಾಗದ ಕಾರಣಕ್ಕೆ ದಿನೇಶ್ ಗುಂಡೂರಾವ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಯಿ ಮೊದಲಿಗೆ ಮಂತ್ರಿ ಸ್ಥಾನ ಸಿಗದಿದ್ದ ಕಾರಣಕ್ಕೆ ಎಂಬಿ ಪಾಟೀಲ್ ದಂಗೆಯೆದ್ದರು.  ಪರಮೇಶ್ವರ್ ಕೂಡ ಹಾಗೆ.
ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಇಬ್ಬರು ಕಾಂಗ್ರೆಸ್ ಮುಖಂಡರು ಕಾರಣ ಎಂದು ರಾಹುಲ್ ಗಾಂಧಿ ಉಲ್ಲೇಖಿಸಿದ್ದಾರೆ. ಎಕೆಂದರೇ ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ. ಎಸ್.ಟಿ ಸೋಮಶೇಖರ್, ಭೈರತಿ ಬಸವರಾಜ್, ಮುನಿರತ್ನ ಮತ್ತು ಎಂಟಿಬಿ ನಾಗರಾಜ್ ಬಂಡಾಯ ಶಾಸಕರೆಂದು ಗುರುತಿಸಿಕೊಂಡಿದ್ದಾರೆ. ಇವರೆಲ್ಲರೂ ಮೈತ್ರಿ ಸರ್ಕಾರದ ವಿರೋಧಿಗಳಾಗಿದ್ದರು.
ಮುಖ್ಯಮಂತ್ರಿಗೆ ಪರ್ಯಾಯವಾದ ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನ ನೀಡಿದ್ದರು ಆ ಸ್ಥಾನದಲ್ಲಿದ್ದರೂ ತಮ್ಮ ಕೈ ಕೆಳಗಿನ ಶಾಸಕರನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ, ಮುಖ್ಯಮಂತ್ರಿಯಾಗಿದ್ದವರು, ಯಾವುದೇ ಅಧಿಕಾರವಿಲ್ಲದ ಕಾರಣ ಅಸಮಾಧಾನಗೊಂಡಿದ್ದರು.
ಸಿದ್ದರಾಮಯ್ಯ ರಾಜಕೀಯ ಶತ್ರು ದೇವೇಗೌಡರು ಎಂದೇ ಪರಿಗಣಿಸಲಾಗಿದೆ, ಉನ್ನತ ಸ್ಥಾನಗಳಿಗೆ ತಮಗೆ ಬೇಕಾದ ಅಧಿಕಾರಿಗಳನ್ನು ಹಾಕದ್ದಕ್ಕೆ ತಮ್ಮ ಆಪ್ತರ ಬಳಿ ಬೇಸರ ವ್ಯಕ್ತ ಪಡಿಸಿದ್ದರು.
ಸಿದ್ದರಾಮಯ್ಯ ಅವರ ಕೋಪಕ್ಕೆ ಕಾರಣ, ಬಾದಾಮಿ ಮತ್ತು ವರುಣಾ ಕ್ಷೇತ್ರಗಳಲ್ಲಿ ಅವರಿಗೆ ಬೇಕಾದ ಅಧಿಕಾರಿಗಳನ್ನು ಹಾಕದೇ, ಸಿದ್ದರಾಮಯ್ಯ ಅವರಲ್ಲಿ ಕೀಳರಿಮೆ ಮೂಡುವಂತೆ ಮಾಡಿದ್ದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. ಹೀಗಾಗಿ ರಾಹುಲ್ ಗಾಂಧಿ ಉಲ್ಲೇಖಿಸಿದ ಒಬ್ಬ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ.
ಇನ್ನೂ ಸದ್ಯ.ವಿಧಾನಸಭೆ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ಈಗಾಗಲೇ ಜಿ ಪರಮೇಶ್ವರ್ ಮತ್ತು ಡಿಕೆ ಶಿವಕುಮಾರ್ ನಡುವೆ ಪೈಪೋಟಿ ಆರಂಭವಾಗಿದೆ, ರಾಜ್ಯದಲ್ಲಿ ಸಿದ್ದರಾಮಯ್ಯ ಅತಿ ದೊಡ್ಡ ಕಾಂಗ್ರೆಸ್ ನಾಯಕನಾಗಿದ್ದರೂ ವಿರೋಧ ಪಕ್ಷ ಸ್ಥಾನಕ್ಕಾಗಿ ಕಿತ್ತಾಟ ಆರಂಭವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com