ಸರ್ಕಾರ ರಚಿಸುವ ಸ್ಪೀಡ್ ನಲ್ಲಿರುವ ಯಡಿಯೂರಪ್ಪಗೆ 'ಸ್ವಲ್ಪ ತಡೀರಿ' ಅಂದ್ರು ಅಮಿತ್ ಶಾ!

ಬಿಜೆಪಿ ಅಂದುಕೊಂಡಂತೆಯೇ ಮೈತ್ರಿ ಸರ್ಕಾರ ಪತನಗೊಂಡಿದೆ. ಆದರೆ ತಾನು ಸರ್ಕಾರ ರಚಿಸುವ ಹಾದಿಯೇನು ಸುಗಮವಾಗಿಲ್ಲ ಎಂಬುದು ಈಗ ಬಹಿರಂಗವಾಗಿದೆ.
ಯಡಿಯೂರಪ್ಪ
ಯಡಿಯೂರಪ್ಪ
ಬೆಂಗಳೂರು: ಬಿಜೆಪಿ ಅಂದುಕೊಂಡಂತೆಯೇ ಮೈತ್ರಿ ಸರ್ಕಾರ ಪತನಗೊಂಡಿದೆ. ಆದರೆ ತಾನು ಸರ್ಕಾರ ರಚಿಸುವ ಹಾದಿಯೇನು ಸುಗಮವಾಗಿಲ್ಲ ಎಂಬುದು ಈಗ ಬಹಿರಂಗವಾಗಿದೆ. 
ಮೈತ್ರಿ ಸರ್ಕಾರ ಪತನಗೊಳ್ಳುತ್ತಿದ್ದಂತೆಯೇ ಸರ್ಕಾರ ರಚನೆಗೆ ಹಕ್ಕು ಮಂಡನೆ ಮಾಡಲು ತುದಿಗಾಲಲ್ಲಿ ನಿಂತಿದ್ದ ರಾಜ್ಯ ಬಿಜೆಪಿ ನಾಯಕರ ಸ್ಪೀಡ್ ಗೆ ಹೈಕಮಾಂಡ್ ಮುಂದಿನ ಆದೇಶದ ವರೆಗೂ ಕಾಯಿರಿ ಎಂದು ಬ್ರೇಕ್ ಹಾಕಿದೆ. 
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿಯ ಪ್ರಕಾರ, ಸರ್ಕಾರ ರಚನೆಗೆ ಹಕ್ಕು ಮಂಡಿಸಲು ರಾಜ್ಯಪಾಲರನ್ನು ಭೇಟಿ ಮಾಡಲು ತರಾತುರಿಯಲ್ಲಿರುವ ಯಡಿಯೂರಪ್ಪ ಅವರಿಗೆ ಅಮಿತ್ ಶಾ "ಸ್ವಲ್ಪ ತಡೀರಿ" ಎಂಬ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ. 
ಗುರುವಾರ ಬಿಜೆಪಿ ಸಂಸದೀಯ ಮಂಡಳಿ ಸಭೆ ನಡೆಯಲಿದ್ದು, ರಾಜ್ಯದ ಸ್ಥಿತಿಯನ್ನು ಗಮನಿಸುವುದಕ್ಕೆ ಕರ್ನಾಟಕಕ್ಕೆ ಬಿಜೆಪಿ ಹೈಕಮಾಂಡ್ ವೀಕ್ಷಕರನ್ನು ಕಳಿಸಲಿದೆ. ಈ ನಂತರವಷ್ಟೇ ಬಿಜೆಪಿ ಸರ್ಕಾರ ರಚನೆಗೆ ಹಕ್ಕು ಮಂಡನೆಗೆ ಗ್ರೀನ್ ಸಿಗ್ನಲ್ ದೊರೆಯಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ. 
ಇನ್ನು ಇದಕ್ಕೆ ಪೂರಕವೆಂಬಂತೆ, ಸರ್ಕಾರ ರಚನೆಗೆ ಹೈಕಮಾಂಡ್ ನಿಂದ ಈ ವರೆಗೂ ಸ್ಪಷ್ಟ ಸೂಚನೆ ಬಾರದೇ ಇರುವ ಹಿನ್ನೆಲೆಯಲ್ಲಿ, ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿ, ಜಗದೀಶ್ ಶೆಟ್ಟರ್, ಮಾಧುಸ್ವಾಮಿ ಸೇರಿದಂತೆ ರಾಜ್ಯದ ಹಿರಿಯ ಬಿಜೆಪಿ ನಾಯಕರು ದೆಹಲಿಗೆ ತೆರಳಿದ್ದು, ಹೈಕಮಾಂಡ್ ಜೊತೆ ಮಾತನಾಡಲಿದ್ದಾರೆ.  ಇದಕ್ಕೂ ಮುನ್ನ ನೂತನ ಸರ್ಕಾರ ರಚನೆ ಸಂಬಂಧ ಹೈಕಮಾಂಡ್ ಸೂಚನೆಗಾಗಿ ಕಾಯುತ್ತಿದ್ದೇನೆ ಎಂದು ಸ್ವತಃ ಯಡಿಯೂರಪ್ಪ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com