'ಸಿದ್ದರಾಮಯ್ಯ, ಎಂಬಿ.ಪಾಟೀಲ್ ದಾರಿ ತಪ್ಪಿದ ಮಕ್ಕಳು: ಅತೃಪ್ತ ಶಾಸಕರು ಯಾರನ್ನೂ ಸಂಪರ್ಕಿಸಿಲ್ಲ'

ನಮ್ಮ ಗುಂಪಿನಲ್ಲಿರುವ ಯಾವ ಶಾಸಕರೂ ಸಹ ಯಾರನ್ನೂ ಸಂಪರ್ಕಿಸಿಲ್ಲ, ಮೈತ್ರಿ ನಾಯಕರೂ ಸಹ ನಮ್ಮನ್ನು ಸಂಪರ್ಕಿಸಿಲ್ಲ ಎಂದು ವಿಶ್ವನಾಥ್ ಹೇಳಿದ್ದಾರೆ....

Published: 27th July 2019 12:00 PM  |   Last Updated: 27th July 2019 01:38 AM   |  A+A-


MB Patil and siddaramiah

ಸಿದ್ದರಾಮಯ್ಯ ಮತ್ತು ಎಂಬಿ ಪಾಟೀಲ್

Posted By : SD SD
Source : Online Desk
ಬೆಂಗಳೂರು: ನಮ್ಮ ಗುಂಪಿನಲ್ಲಿರುವ ಯಾವ ಶಾಸಕರೂ ಸಹ ಯಾರನ್ನೂ ಸಂಪರ್ಕಿಸಿಲ್ಲ, ಮೈತ್ರಿ ನಾಯಕರೂ ಸಹ ನಮ್ಮನ್ನು ಸಂಪರ್ಕಿಸಿಲ್ಲ ಎಂದು ವಿಶ್ವನಾಥ್ ಹೇಳಿದ್ದಾರೆ.

ಇಬ್ಬರು ಅತೃಪ್ತ ಶಾಸಕರು ಮುಂಬಯಿಯಿಂದ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಲು ಫೋನ್ ಮಾಡಿದ್ದರು ಎಂದು ಮಾಜಿ ಸಚಿವ ಎಂ ಬಿ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಎಟ್, ವಿಶ್ವನಾಥ್  ಎಂ.ಬಿ.ಪಾಟೀಲ್ ಸೇರಿದಂತೆ ಕಾಂಗ್ರೆಸ್ ನಾಯಕರ ಹೇಳಿಕೆಗಳು ಹಸಿ ಸುಳ್ಳು  ಹೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಯಾವ ಅತೃಪ್ತ ಶಾಸಕರೂ ಸಹ ಯಾರನ್ನೂ ಸಂಪರ್ಕಿಸಿಲ್ಲ. ಎಂ.ಬಿ.ಪಾಟೀಲ್ ಹೇಳುತ್ತಿರುವುದು ಹಸಿ ಸುಳ್ಳು. ಕನ್ಫ್ಯೂಸ್ ಮಾಡಲು ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಈ ರೀತಿ ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದ್ದಾರೆ. 

ಆದರೆ ಯಾರೂ ದಾರಿ ತಪ್ಪುವುದಿಲ್ಲ. ಅವರೇ ದಾರಿ ತಪ್ಪಿದ್ದಾರೆ. ಸಿದ್ದರಾಮಯ್ಯ, ಎಂ.ಬಿ.ಪಾಟೀಲ್ ಸೇರಿದಂತೆ ಅವರೊಂದಿಗೆ ಇರುವವರು ದಾರಿ ತಪ್ಪಿದ ಮಕ್ಕಳು. ರಾಜ್ಯ ರಾಜಕಾರಣದ ಈ 30 ದಿನಗಳ ಬೆಳವಣಿಗೆಯಲ್ಲಿ ಅವರು ದಾರಿ ತಪ್ಪಿದ ಮಕ್ಕಳು ಎಂದು ವ್ಯಂಗ್ಯವಾಡಿದ್ದಾರೆ.
Stay up to date on all the latest ರಾಜಕೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp