ಲಡ್ಡು ಬಂದು ಬಾಯಿಗೆ ಬಿತ್ತು: 17 ಅತೃಪ್ತ ಶಾಸಕರ ಅನರ್ಹತೆ ಬಿಜೆಪಿಗೆ ಹೆಚ್ಚು ಲಾಭವಾಗೋದೇಗೆ?

ಕಾಂಗ್ರೆಸ್ ಹಾಗೂ ಜೆಡಿಎಸ್ ನ ಒಟ್ಟು 17 ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ರಮೇಶ್ ಕುಮಾರ್ ನೀಡಿರುವ ತೀರ್ಪು, ಬಿಜೆಪಿಗೆ ಲಾಭದಾಯಕವಾಗಿದೆ. ಆ ಮೂಲಕ ವಿಶ್ವಾಸಮತ ಯಾಚನೆಯಲ್ಲಿ...
ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ
ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ನ ಒಟ್ಟು 17 ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ರಮೇಶ್ ಕುಮಾರ್ ನೀಡಿರುವ ತೀರ್ಪು, ಬಿಜೆಪಿಗೆ ಲಾಭದಾಯಕವಾಗಿದೆ. ಆ ಮೂಲಕ ವಿಶ್ವಾಸಮತ ಯಾಚನೆಯಲ್ಲಿ ಬಿಜೆಪಿಗೆ ಬಹುಮತ ಸಾಬೀತು ಪಡಿಸುವುದು ಸಲೀಸಾಗಲಿದೆ. 
ವಿಧಾನಸಭೆಯ ಒಟ್ಟುಬಲಾಬಲ 224- ಇದರಲ್ಲಿ ಬಿಜೆಪಿ 105, ಕಾಂಗ್ರೆಸ್ 79, ಜೆಡಿಎಸ್ 37, ಪಕ್ಷೇತರ 1, ಕೆಪಿಜೆಪಿ 1, ಬಿಎಸ್ ಪಿ 1. ಕಾಂಗ್ರೆಸ್ ಬೆಂಬಲಿತ ಕೆಪಿಜೆಪಿಯ 1 ಕಾಂಗ್ರೆಸ್ ನ ಒಟ್ಟು 80 ಸದಸ್ಯರಲ್ಲಿ  14 ಶಾಸಕರು ಹಾಗೂ ಜೆಡಿಎಸ್ ನ 37 ರಲ್ಲಿ 3 ಶಾಸಕರು ಅನರ್ಹರಾಗಿದ್ದು, ವಿಧಾನಸಭೆಯಲ್ಲಿ ಸ್ಪೀಕರ್ ಬಿಟ್ಟು ಕಾಂಗ್ರೆಸ್ 64, ಜೆಡಿಎಸ್ 34 ಸದಸ್ಯರು ಉಳಿದಿದ್ದಾರೆ. 
ಒಟ್ಟು 17 ಶಾಸಕರ ಅನರ್ಹತೆಯಿಂದ ಸದ್ಯದ ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯಾಬಲ 208 ಕ್ಕೆ ಕುಸಿದಿದೆ. ಬ ಪಕ್ಷೇತರ ಎನ್.ನಾಗೇಶ್ ಬಿಜೆಪಿಗೆ ಬೆಂಬಲ ಸೂಚಿಸುವುದರಿಂದ ಬಿಜೆಪಿ ಬಳಿ 106 ಸದಸ್ಯರ ಬಲವಿದೆ. ಬಿಎಸ್.ಪಿ ಮಹೇಶ್ ಸೋಮವಾರ ಸದನಕ್ಕೆ ಗೈರಾದರೂ ಬಿಜೆಪಿಗೆ ಯಾವುದೇ ತೊಂದರೆಯಿಲ್ಲ. 
ವಿಧಾನಸಭೆಯಲ್ಲಿ 208 ರಲ್ಲಿ ಬಹುಮತಕ್ಕೆ 104 ಮ್ಯಾಜಿಕ್ ಸಂಖ್ಯೆಯ ಅಗತ್ಯವಿದೆ. ಬಿಜೆಪಿಯ ಬಳಿ ಇದಾಗಲೇ ಇದೆ. ಹೀಗಾಗಿ ಸೋಮವಾರ ನಡೆಯಲಿರುವ ವಿಶ್ವಾಸಮತ ಯಾಚನೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ವಿಶ್ವಾಸಮತ ಬಹಳ ಸಲೀಸಾಗಿದೆ. 
17 ಶಾಸಕರನ್ನು ಅನರ್ಹಗೊಳಿಸುವ  ಮೂಲಕ ಒಂದು ಕಡೆ ಮೈತ್ರಿ ಪಕ್ಷಗಳು ಅತೃಪ್ತ ಶಾಸಕರಿಗೆ ತಕ್ಕಪಾಠ ಕಲಿಸಿವೆ. ಬಿಜೆಪಿ ನಂಬಿದ್ದ ಅತೃಪ್ತರಿಗೆ ದೊಡ್ಡ ಆಘಾತ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com