ಸ್ಪೀಕರ್‌ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌ ಗೆ ಹೋಗುತ್ತೇವೆ: ರೆಬೆಲ್ ಶಾಸಕ ಎಚ್ ವಿಶ್ವನಾಥ್

14 ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದು ಜೆಡಿಎಸ್ ಅತೃಪ್ತ ಶಾಸಕ ಎಚ್ ವಿಶ್ವನಾಥ್ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮುಂಬೈ: 14 ಅತೃಪ್ತ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದು ಜೆಡಿಎಸ್ ಅತೃಪ್ತ ಶಾಸಕ ಎಚ್ ವಿಶ್ವನಾಥ್ ಹೇಳಿದ್ದಾರೆ.
ಈ ಕುರಿತಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಜೆಡಿಎಸ್ ಶಾಸಕ ಮತ್ತು ಮಾಜಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ವಿಶ್ವನಾಥ್ ಅವರು, 'ಸ್ಪೀಕರ್ ರಮೇಶ್‌ ಕುಮಾರ್ ಅವರ ತೀರ್ಪನ್ನು ಮಾಧ್ಯಮಗಳ ಮೂಲಕ ಕೇಳಿದ್ದೇನೆ. ಅವರ ತೀರ್ಪು ಆತುರದ ನಿರ್ಧಾರವಾಗಿದೆ. ಯಾವ್ಯಾವ ಸನ್ನಿವೇಶದಲ್ಲಿ ಏನೇನು ಆಯ್ತು, ಸರ್ಕಾರ ಯಾರ ಪರವಾಗಿತ್ತು. ಇವೆಲ್ಲವನ್ನು ಸುದೀರ್ಘವಾಗಿ ಅವರು ಯೋಚಿಸಬೇಕಿತ್ತು ಎಂದು ಹೇಳಿದ್ದಾರೆ.
ಅಂತೆಯೇ ದೂರುದಾರರ ಸಮಸ್ಯೆಗಳನ್ನು ಮಾತ್ರ ಅಲಿಸಿದ ಸ್ಪೀಕರ್ ರಮೇಶ್ ಕುಮಾರ್ ಅವರು, ನಾವು ಯಾವ ಸನ್ನಿವೇಶದಲ್ಲಿ ರಾಜಿನಾಮೆ ನೀಡಿದ್ದೇವೆ ಎಂಬುದನ್ನು ಕೂಲಂಕುಷವಾಗಿ ಪರಿಶೀಲಿಸಬೇಕಿತ್ತು. ದೋಸ್ತಿ ಸರ್ಕಾರದ ದುರಾಡಳಿತದಿಂದ ಬೇಸತ್ತು ನಾವು ರಾಜಿನಾಮೆ ನೀಡಿದ್ದು ಎಂದು ಹೇಳಿದ್ದಾರೆ. 
ಅಲ್ಲದೆ ಇದು ರಾಜಕಾರಣ. ಯಾವುದೋ ಶಿಕ್ಷೆ ಕೊಡುವ ಕೋರ್ಟ್‌ ಅಲ್ಲ. ಅಲ್ಲಿ ನಮ್ಮ ರಾಜೀನಾಮೆ ವಿಚಾರ ಹೆಚ್ಚು ಪ್ರಸ್ತಾಪ ಆಗಿಲ್ಲ. ಇದು ಬಹಳ ಅವಸರದಲ್ಲಿ, ಅನರ್ಹತೆಯ ಆಧಾರದ ಮೇಲೆ ತೀರ್ಪು ನೀಡಿದ್ದಾರೆ. ಸ್ಪೀಕರ್‌ ರಮೇಶ್‌ ಕುಮಾರ್‌ ಅವರದ್ದು ಅವಸರದ ತೀರ್ಪು ಎಂದು ನನಗೆ ಅನ್ನಿಸುತ್ತದೆ. ಸುಪ್ರೀಂಕೋರ್ಟ್‌ನಲ್ಲಿ ನಮ್ಮ ವಾದವನ್ನು ನಾವು ಮಂಡಿಸುತ್ತೇವೆ ಎಂದು ಎಚ್‌.ವಿಶ್ವಾನಾಥ್‌ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com