ಉಪಚುನಾವಣೆಗೆ ದೊಡ್ಡ ಗೌಡರ ತಾಲೀಮು: ಕೆಆರ್ ಪೇಟೆಯಿಂದ ನಿಖಿಲ್; ಹುಣಸೂರಿನಿಂದ ಜಿಟಿಡಿ ಪುತ್ರ ?

ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಯಾವುದನ್ನೇ ಹೋರಾಟವಿಲ್ಲದೇ ಅಷ್ಟು ಸುಲಭಕ್ಕೆ ಬಿಟ್ಟುಕೊಡುವುದಿಲ್ಲ, 87 ವರ್ಷದ ಮುತ್ಸದ್ದಿ ದೇವೇಗೌಡರ ಪುತ್ರ ...
ನಿಖಿಲ್ ಮತ್ತು ಜಿಟಿ ದೇವೇಗೌಡ
ನಿಖಿಲ್ ಮತ್ತು ಜಿಟಿ ದೇವೇಗೌಡ
ಬೆಂಗಳೂರು: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಯಾವುದನ್ನೇ ಹೋರಾಟವಿಲ್ಲದೇ ಅಷ್ಟು ಸುಲಭಕ್ಕೆ ಬಿಟ್ಟುಕೊಡುವುದಿಲ್ಲ, 87 ವರ್ಷದ ಮುತ್ಸದ್ದಿ ದೇವೇಗೌಡರ ಪುತ್ರ ಕುಮಾರಸ್ವಾಮಿ ಕೇವಲ 14 ತಿಂಗಳಲ್ಲಿ ಅಧಿಕಾರ ಕಳೆದು ಕೊಂಡಿದ್ದಾರೆ,
ಪಕ್ಷಕ್ಕೆ ಡ್ಯಾಮೇಜ್ ಮಾಡಿ ಮಗನ ಸರ್ಕಾರ ಪತನಕ್ಕೆ ಕಾರಣರಾದ ಶಾಸಕರಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ. ಲೋಕಸಭೆ ಚುನಾವಣೆಯ ಸೋಲಿನ ಆಘಾತದಿಂದ ಬೇಸರಗೊಂಡಿರುವ ದೊಡ್ಡಗೌಡರು, ಪಕ್ಷವನ್ನು ಪುನರ್ ಸಂಘಟಿಸಲು ಶಪಥ ಮಾಡಿದ್ದಾರೆ.
ದೇವೇಗೌಡರ ವಯಸ್ಸಿನವರು ಈಗಾಗಲೇ ರಾಜಕೀಯ ಸನ್ಯಾಸ ತೆಗೆದುಕೊಂಡಿದ್ದಾರೆ. ಆದರೆ ಕುಮಾರ ಸ್ವಾಮಿಗೆ ಆರೋಗ್ಯ ಸಮಸ್ಯೆ, ರೇವಣ್ಣಗೆ  ನಾಯಕತ್ವದ ಕೊರತೆ, ಜೊತೆಗೆ ಮೊಮ್ಮಕ್ಕಳಿಗೆ ಇನ್ನೂ ಅನುಭವ ಸಾಲದು, ಪರಿಸ್ಥಿತಿ ಹೀಗಿರುವಾಗ ತಾವೇ ಮುಂದೆ ನಿಂತು ಪಕ್ಷ ಕಟ್ಟಲು ದೇವೇಗೌಡರು ನಿರ್ಧರಿಸಿದ್ದಾರೆ, ರಾಜ್ಯದಲ್ಲಿ ಪಕ್ಷವನ್ನು ಸದೃಢವಾಗಿಸಲು ದೇವೇಗೌಡರು ಪಣ ತೊಟ್ಟಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರ ಪ್ರಾಬಲ್ಯವಿದ್ದು, ಮತ್ತೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಮುಂದಾಗಿದ್ದಾರೆ,  ಪಕ್ಷದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳಲು ನಿರ್ಧರಿಸಿದ್ದು, ಉಪ ಚುನಾವಣೆಗೆ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ.  ಮುಂದಿನ ಉಪ ಚುನಾವಣೆಯಲ್ಲಿ ಬಂಡಾಯ ಶಾಸಕರ ತಕ್ನ ಪಾಠ ಕಲಿಸಲು ಮುಂದಾಗಿದ್ದಾರೆ..
ಸುಪ್ರೀಂಕೋರ್ಟ್ ತೀರ್ಪು ಬಳಿಕ ಬಂದ ನಿರ್ಧಾರ ಕೈಗೊಳ್ಳಲು ಕಾಯುತ್ತಿದ್ದಾರೆ,. ಕಾರ್ಯಕರ್ತರ ಒತ್ತಾಯದ ಮೇರೆಗೆ  ಕೆ ಆರ್ ಪೇಟೆ ಕ್ಷೇತ್ರದಿಂದ ನಿಖಿಲ್ ಕಣಕ್ಕಿಳಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ
ಒಕ್ಕಲಿಗರ ಪ್ರಾಬಲ್ಯ ವಿರುವ ಹುಣಸೂರಿನಿಂದ ಜಿ.ಟಿ ದೇವೇಗೌಡರ ಪುತ್ರ  ಹರೀಶ್ ಗೌಡ ಅವರನ್ನು ಕಣಕ್ಕಳಿಸಲು ಚಿಂತನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.  ಕೇವಲ ಮೈಸೂರು ಮಾತ್ರವಲ್ಲದೇ ಉತ್ತರ ಕರ್ನಾಟಕದಲ್ಲೂ ಜೆಡಿಎಸ್ ತನ್ನ ಅಧಿಪತ್ಯ ಸಾಧಿಸಲು ಮುಂದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com