ಜನಾಭಿಪ್ರಾಯ ಒಪ್ಪಲಾಗದವರು ಇವಿಎಂ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಸಿದ್ದರಾಮಯ್ಯಗೆ ಸಿಟಿ ರವಿ ಟಾಂಗ್

ಲೋಕಸಭೆ ಚುನಾವಣೆಯಲ್ಲಿ ಜನಾಭಿಪ್ರಾಯವನ್ನು ಒಪ್ಪಲಾಗದವರು ಇವಿಎಂ ಮೇಲೆ ಗೂಬೆ ಕೂರಿಸುತ್ತಿದ್ದಾರೆ,
ಜನಾಭಿಪ್ರಾಯ ಒಪ್ಪಲಾಗದವರು  ಇವಿಎಂ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಸಿದ್ದರಾಮಯ್ಯ ವಿರುದ್ಧ ಸಿಟಿ ರವಿ ವಾಗ್ದಾಳಿ
ಜನಾಭಿಪ್ರಾಯ ಒಪ್ಪಲಾಗದವರು ಇವಿಎಂ ಮೇಲೆ ಗೂಬೆ ಕೂರಿಸುತ್ತಿದ್ದಾರೆ: ಸಿದ್ದರಾಮಯ್ಯ ವಿರುದ್ಧ ಸಿಟಿ ರವಿ ವಾಗ್ದಾಳಿ
ಚಿಕ್ಕಮಗಳೂರು: ಲೋಕಸಭೆ ಚುನಾವಣೆಯಲ್ಲಿ ಜನಾಭಿಪ್ರಾಯವನ್ನು ಒಪ್ಪಲಾಗದವರು ಇವಿಎಂ ಮೇಲೆ ಗೂಬೆ ಕೂರಿಸುತ್ತಿದ್ದಾರೆ, ಸೋಲಿನ ಹತಾಶೆಯಿಂದಾಗಿ ಇಂತಹಾ ಮಾತುಗಳನ್ನಾಡುತ್ತಿದ್ದಾರೆ ಎಂದು ಚಿಕ್ಕಮಗಳೂರು ಬಿಜೆಪ್ಪಿ ಶಾಸಕ ಸಿಟಿ ರವಿ ಹೇಳಿದ್ದಾರೆ. 
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಶಾಸಕ ರವಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ್ ವಾಗ್ದಾಳಿ ನಡೆಸಿದ್ದಾರೆ.ಇವಿಎಂ, ವಿವಿಪ್ಯಾಟ್ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿವಿಪ್ಯಾಟ್ ಮರುಪರಿಶೀಲನೆಗೆ ಮುಂದಾಗಲಿ, ಬೇಕಾದರೆ ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಿ ಎಂದು ಅವರು ಹೇಳಿದ್ದಾರೆ.
"ಇವಿಎಂ ಯಂತ್ರ ಯಾವುದೇ ಆನ್ ಲೈನ್ ಸಮ್ಪರ್ಕ ಹೊಂದಿರುವುದಿಲ್ಲ. ಆನ್ ಲೈನ್ ಸಂಪರ್ಕವಿದ್ದರೆ ಮಾತ್ರ ಅದನ್ನು ಹ್ಯಾಕ್ ಮಾಡುವ ಸಾಧ್ಯತೆ ಇರುತ್ತದೆ. ಹಾಗೆ ಆನ್ ಲೈನ್ ಸಂಪರ್ಕವಿಲ್ಲದ ಯಂತ್ರವನ್ನು ಹ್ಯಾಕ್ ಮಾಡೋದಾಗಲ್ಲ. ಸಿದ್ದರಾಮಯ್ಯ ತಿಳುವಳಿಕೆಯಿಂದ ಮಾತನಾಡಬೇಕು.
"ಸಿದ್ದರಾಮಯ್ಯನವರಿಗೆ ಒರಟುತನವಿದೆ, ಇದನ್ನು ಜನರು ಅವರ ಗುಣವೆಂದು ಮನ್ನಿಸಿದ್ದಾರೆ. ಆದರೆ ಅಚರ ದಡ್ಡತನವನ್ನೆಂದೂ ಒಪ್ಪಿಕೊಳ್ಳುವುದು ಸಾಧ್ಯವಿಲ್ಲ. ಜನಾಭಿಪ್ರಾಯಕ್ಕೆ ಒಪ್ಪಿಗೆ ಸೂಚಿಸುವುದು ಎಲ್ಲಾ ಪಕ್ಷದ ನಾಯಕರ ಅನಿವಾರ್ಯತೆ. ಒಂದೊಮ್ಮೆ ಜನಾಭಿಪ್ರಾಯಕ್ಕೆ ಗೌರವ ತೋರುವುದು ಸಾಧ್ಯವಾಗದೆ ಹೋದಲ್ಲಿ ಅಂತಹವರು ಇವಿಎಂ ಬಗೆಗೆ ದೂರುತ್ತಾರೆ" ಸಿಟಿ ರವಿ ಹೇಳಿದ್ದಾರೆ.
"ಇವಿಎಂ ಬಳಕೆಗೆ ಬಂದದ್ದು 2004ರಲ್ಲಿ, ಅಲ್ಲಿಂದ ಹತ್ತು ವರ್ಷಗಳ ಕಾಲ ಯುಪಿಎ ಸರ್ಕಾರ ಕೇಂದ್ರದಲ್ಲಿ ಆಡಳಿತ ನಡೆಸಿತ್ತು.ಅದೂ ಇವಿಎಂ ದೋಢವಾಗಿತ್ತೆ? ರಾಜಸ್ಥಾನ ಸೇರಿ ಪಂಚರಾಜ್ಯಗಳ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಜಯ ಗಳಿಸಿದಾಗಲೂ ಇವಿಎಂ ದೋಷವಿತ್ತೆ? ಇವಿಎಂ ತಿರುಚುವುದಾದಲ್ಲಿ ಕೇರಳದಲ್ಲಿಯೂ ಬಿಜೆಪಿ ಗೆಲುವು ಸಾಧಿಸಬಹುದಿತ್ತಲ್ಲವೆ? ಆರೋಪ ಮಾಡುವಾಗ ಇಷ್ಟಾದರೂ ತಿಳಿದಿರಬೇಕಲ್ಲವೆ" ಅವರು ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com