ಮೈತ್ರಿ ಸರ್ಕಾರ ಉಳಿಸಲು ಬದ್ಧ, ರಾಜಿನಾಮೆ ಕೊಡಲು ಸಿದ್ಧ: ಜೆಡಿಎಸ್ ಸಚಿವರು

ಸಮ್ಮಿಶ್ರ ಸರ್ಕಾರವನ್ನು ಉಳಿಸಲು ನಾವು ರಾಜೀನಾಮೆ ನೀಡಲು ಸಿದ್ಧವಾಗಿದ್ದೇವೆ ಎಂದು ಜೆಡಿಎಸ್ ಸಚಿವರು ಮುಖ್ಯಮಂತ್ರಿ ಎಚ್,ಡಿ ಕುಮಾರಸ್ವಾಮಿಗೆ ...

Published: 05th June 2019 12:00 PM  |   Last Updated: 05th June 2019 11:43 AM   |  A+A-


JDS legislators during the meeting at the Chief Minister’s residence

ಜೆಡಿಎಸ್ ಶಾಸಕಾಂಗ ಪಕ್ಷದ ಸಭೆ

Posted By : SD SD
Source : The New Indian Express
ಬೆಂಗಳೂರು: ಸಮ್ಮಿಶ್ರ ಸರ್ಕಾರವನ್ನು  ಉಳಿಸಲು  ನಾವು ರಾಜೀನಾಮೆ ನೀಡಲು ಸಿದ್ಧವಾಗಿದ್ದೇವೆ ಎಂದು ಜೆಡಿಎಸ್ ಸಚಿವರು ಮುಖ್ಯಮಂತ್ರಿ ಎಚ್,ಡಿ ಕುಮಾರಸ್ವಾಮಿಗೆ ಭರವಸೆ ನೀಡಿದ್ದಾರೆ.

ಮಂಗಳವಾರ ನಡೆದ ಜೆಡಿಎಸ್ ಶಾಸಕಾಂಗ ಸಭೆಯಲ್ಲಿ ಎಲ್ಲಾ ಸಚಿವರು ಸರ್ಕಾರದ ಉಳಿವಿಗಾಗಿ ತಮ್ಮ ತೀರ್ಮಾನ ಪ್ರಕಟಿಸಿದ್ದಾರೆ, ಅಲ್ಲದೇ 37 ಶಾಸಕರೂ ಒಗ್ಗಟ್ಟಾಗಿ ನಿಂತು ಸರ್ಕಾರವನ್ನು ಉಳಿಸಿಕೊಳ್ಳುವುದರ ಜೊತೆಗೆ ಪಕ್ಷವನ್ನು ಸದೃಢವಾಗಿ ಕಟ್ಟುವುದಕ್ಕೆ ಪಣ ತೊಟ್ಟಿದ್ದಾರೆ.

ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ಜೊತೆ ಪರಸ್ಪರ ವಿಶ್ವಾಸದಿಂದ ನಡೆದುಕೊಳ್ಳಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ, ಇನ್ನೂ ಇದೇ ವೇಳೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜಿನಾಮೆಯನ್ನು ವಾಪಸ್ ಪಡೆದುಕೊಳ್ಳಬೇಕು ಎಂದು ವಿಶ್ವನಾಥ್ ಅವರಲ್ಲಿ ಹಲವು ಶಾಸಕರು ಮನವಿ ಮಾಡಿದರು, ಈಗಾಗಲೇ ಪರಿಸ್ಥಿತಿ ಕೆಟ್ಟದಾಗಿದೆ. ಇದರಿಂದ ಮತ್ತಷ್ಟು ಹದಗೆಡಲಿದೆ ಎಂದು ಹೇಳಿದ್ದಾರೆ.

ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ ದೇವೇಗೌಡ,ಸಿಎಂ ಕುಮಾರಸ್ವಾಮಿ, ಸಚಿವ ಎಚ್.ಡಿ ರೇವಣ್ಣ, ಬಂಡೆಪ್ಪ ಕಾಶೆಂಪೂರ್, ಸಿ,ಎಸ್ ಪುಟ್ಟರಾಜು, ಮುಂತಾದವರು ಹಾಜರಿದ್ದರು,ಬಸವರಾಜ ಹೊರಟ್ಟಿ ಗೈರಾಗಿದ್ದಾರೆ. 
Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp