ಅಧಿಕಾರ ನಡೆಸಲು ಆದರೆ ಅಧಿಕಾರ ಮಾಡಲಿ, ಆಗದಿದ್ದರೆ ನಮಗೆ ಬಿಟ್ಟು ಕೊಡಲಿ: ಬಿ ಎಸ್ ಯಡಿಯೂರಪ್ಪ

ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿಯವರ ಮಗ ಯಾವುದೇ ಸಂದರ್ಭದಲ್ಲಾದರೂ ಚುನಾವಣೆಗೆ ಸಿದ್ಧರಾಗಿ ಎಂದು ಹೇಳಿದ್ದಾರೆ, ಆದರೆ ...

Published: 07th June 2019 12:00 PM  |   Last Updated: 07th June 2019 12:22 PM   |  A+A-


B S Yedyurappa

ಬಿ ಎಸ್ ಯಡಿಯೂರಪ್ಪ

Posted By : SUD SUD
Source : Online Desk
ಹುಬ್ಬಳ್ಳಿ: ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿಯವರ ಮಗ ಯಾವುದೇ ಸಂದರ್ಭದಲ್ಲಾದರೂ ಚುನಾವಣೆಗೆ ಸಿದ್ಧರಾಗಿ ಎಂದು ಹೇಳಿದ್ದಾರೆ, ಆದರೆ ಯಾವುದೇ ಕಾರಣಕ್ಕೂ ಹೊಸ ಚುನಾವಣೆಗೆ ಹೋಗುವ ಪ್ರಶ್ನೆಯಿಲ್ಲ. ಜನರ ಬಳಿ ಹೋಗಲು ಇನ್ನೂ ಐದು ವರ್ಷ ಬಾಕಿಯಿದೆ ನಾವು ಮರು ಚುನಾವಣೆಗೆ ಒಪ್ಪುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. 

ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಜನರ ಬಳಿ ಹೋಗಲು ಇನ್ನೂ ಐದು ವರ್ಷ ಬಾಕಿಯಿದೆ. ಕಾಂಗ್ರೆಸ್-ಜೆಡಿಎಸ್ ಅಧಿಕಾರ ನಡೆಸಲು ಆದರೆ ಅಧಿಕಾರ ಮಾಡಲಿ, ಆಗದಿದ್ದರೆ ನಮಗೆ ಬಿಟ್ಟು ಕೊಡಲಿ.ಈ ಸರ್ಕಾರ ಬಹಳ ದಿನ ಇರುತ್ತೆ ಅಂತಾ ಯಾರಿಗೂ ವಿಶ್ವಾಸವಿಲ್ಲ ಎಂದರು. 

ಸಿಎಂ ಕುಮಾರಸ್ಚಾಮಿಯವರ ಗ್ರಾಮ ವಾಸ್ತವ್ಯ ರಾಜಕೀಯ ನಾಟಕ. ಹಿಂದೆ ವಾಸ್ತವ್ಯ ಮಾಡಿದ ಗ್ರಾಮಗಳಿಗೆ ಸೂಕ್ತ ಅನುದಾನ ಕೊಟ್ಟಿಲ್ಲ, ಅದನ್ನು ಬಿಟ್ಟು ಬರಗಾಲ ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಿ,  ಜನರ ಗಮನ ಬೇರೆಡೆ ಸೆಳೆಯುವ ರಾಜಕೀಯ ದೊಂಬರಾಟವಿದು. ರಾಜ್ಯದ ಜನ ಇದಕ್ಕೆಲ್ಲ ಬೆಲೆ ಕೊಡಲ್ಲ. ಜನರನ್ನು ವಂಚಿಸಿ ಪರಸ್ಪರ ಕಚ್ಚಾಟ, ಬಡಿದಾಟದಲ್ಲಿ ಮೈತ್ರಿ ಸರ್ಕಾರದವರು ತೊಡಗಿದ್ದಾರೆ ಎಂದು ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಆರೋಪಿಸಿದರು.

ಇಂದಿನಿಂದ ಮೂರು ದಿನ ರಾಜ್ಯದಲ್ಲಿ ಬರ ಅಧ್ಯಯನ ಪ್ರವಾಸ ಮಾಡುತ್ತಿದ್ದೇನೆ.ಜಿಂದಾಲ್‌ಗೆ ಕೊಡುತ್ತಿರುವ ಜಮೀನಲ್ಲಿ ಉತ್ತಮ ಖನಿಜಗಳಿವೆ.ಈಗಾಗಲೇ ಜಿಂದಾಲ್‌ಗೆ ಕೊಟ್ಟಿರುವ ಭೂಮಿ ಸಾಕಷ್ಟು ಆಗಿದೆ, ಮತ್ತೆ ಜಮೀನು ಕೊಡುವ ಅವಶ್ಯಕತೆಯಿಲ್ಲ ಎಂದರು. 

ಕೇಂದ್ರ ಸಂಪುಟದಲ್ಲಿ ಲಿಂಗಾಯತರಿಗೆ ಅವಕಾಶ ಕೊಡುವುದು ಪ್ರಧಾನಿಗಳಿಗೆ ಬಿಟ್ಟ ವಿಚಾರ ಎಂದ ಅವರು, ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಸೇರುವ ಬಗ್ಗೆ ಪ್ರತಿಕ್ರಿಯಿಸಿದರು. ನಾವು ಸುಮಲತಾ ಅವರನ್ನು ಅಪ್ರೋಚ್ ಮಾಡಿಲ್ಲ. ಅದು ಅವರಿಗೆ ಬಿಟ್ಟ ವಿಷಯ ಎಂದರು.

ಇದೇ ವೇಳೆ ಜಿಂದಾಲ್ ಕಂಪನಿಗೆ ಕೊಡುತ್ತಿರುವ ಜಮೀನಿನ ಬಗ್ಗೆ ಮಾತನಾಡಿದ ಅವರು, ಜಿಂದಾಲ್‍ಗೆ ಕೊಡುತ್ತಿರುವ ಜಮೀನಲ್ಲಿ ಉತ್ತಮ ಖನಿಜಗಳಿವೆ. ಈಗಾಗಲೇ ಜಿಂದಾಲ್‍ಗೆ ಬಹಳ ಭೂಮಿ ಕೊಟ್ಟಾಗಿದೆ ಮತ್ತೆ ಜಮೀನು ಕೊಡುವ ಅವಶ್ಯಕತೆಯಿಲ್ಲ. ಬೇರೆ ಇಂಡಸ್ಟ್ರೀಸ್‍ಗೆ ಪ್ರೋತ್ಸಾಹ ಮಾಡಬಹುದು. ಯಾವುದೋ ಒಂದು ಕಂಪನಿಗೆ ಅನುಕೂಲ ಮಾಡಿ ವ್ಯವಹಾರ ಕುದುರಿಸಿಕೊಳ್ಳಲು ಕುಮಾರಸ್ವಾಮಿ ಹೊರಟಿದ್ದಾರೆ. ಕುಮಾರಸ್ಚಾಮಿ ನಿರ್ಧಾರ ಖಂಡಿಸಿ ಮೂರು ದಿನ ಧರಣಿ ಮಾಡುತ್ತೇವೆ ಎಂದು ತಿಳಿಸಿದರು.

ಯಡಿಯೂರಪ್ಪನವರು ಇಂದು ಮಾಜಿ ಸಿಎಂ ಸಿದ್ದರಾಮಯ್ಯನವರ ಸ್ವಕ್ಷೇತ್ರ ಬಾಗಲಕೋಟೆ ಜಿಲ್ಲೆಯ ಬಾದಾಮಿ ಕ್ಷೇತ್ರದಿಂದ ಪ್ರವಾಸ ಆರಂಭಿಸಿದ್ದಾರೆ. ಬೆಳಗ್ಗೆ 11 ಗಂಟೆಗೆ ಮುಷ್ಠಿಗೆರೆಯಿಂದ ಬಿಎಸ್​ವೈ ತನ್ನ ಬರ ಅಧ್ಯಯನ ಪ್ರವಾಸವನ್ನು ಆರಂಭಿಸಿ ಬಳಿಕ ಮಧ್ಯಾಹ್ನ ಬಾದಾಮಿಯಲ್ಲಿ ಬರ ಪರಿಸ್ಥಿತಿ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಲಿದ್ದಾರೆ.
ಪ್ರವಾಸದ ವೇಳೆ ಮಾಜಿ ಶಾಸಕ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ ಹಾಗೂ ಜಿಲ್ಲಾ ಬಿಜೆಪಿ ಮುಖಂಡರು ಸಾಥ್ ನೀಡಲಿದ್ದಾರೆ.
Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp