ಮೈತ್ರಿ ಮುಂದುವರಿದರೇ ಕಾಂಗ್ರೆಸ್ ಸರ್ವನಾಶ: ಚಲುವರಾಯಸ್ವಾಮಿ ಎಚ್ಚರಿಕೆ

ರಾಜ್ಯದಲ್ಲಿ ಜೆಡಿಎಸ್ ದೋಸ್ತಿಯಿಂದ ಕಾಂಗ್ರೆಸ್ ಪಕ್ಷದ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ವಿರುದ್ದ ಚಲುವರಾಯಸ್ವಾಮಿ ...

Published: 07th June 2019 12:00 PM  |   Last Updated: 07th June 2019 12:57 PM   |  A+A-


Chaluvaraya Swamy

ಚಲುವರಾಯಸ್ವಾಮಿ

Posted By : SD SD
Source : Online Desk
ಮಂಡ್ಯ: ರಾಜ್ಯದಲ್ಲಿ ಜೆಡಿಎಸ್ ದೋಸ್ತಿಯಿಂದ ಕಾಂಗ್ರೆಸ್ ಪಕ್ಷದ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ವಿರುದ್ದ ಚಲುವರಾಯಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಾಗಮಂಗಲದಲ್ಲಿ ಮಾತನಾಡಿದ ಚಲುವರಾಯಸ್ವಾಮಿ, ಮೈತ್ರಿ ವಿಚಾರದಲ್ಲಿ ರಾಷ್ಟ್ರದ ನಾಯಕರು ತೆಗೆದುಕೊಂಡಿರುವ ತೀರ್ಮಾನಕ್ಕೆ ನಾನು ಬದ್ಧ. ಆದ್ರೆ ಇದೇ ರೀತಿ ಮುಂದುವರಿದರೇ ಕಾಂಗ್ರೆಸ್ ಪಕ್ಷ ಬಹಳ ಕಷ್ಟದ ಪರಿಸ್ಥಿತಿ ಎದುರಿಸಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಮ್ಮ ನಾಯಕರುಗಳು ಇದನ್ನ ಸರಿಪಡಿಸಬೇಕು ಇಲ್ಲ, ಒಂದು ಪೂರ್ಣ ಪ್ರಮಾಣದ ತೀರ್ಮಾನ ತೆಗೋಬೇಕು. ಆಗ್ಲಿಲ್ಲ ಅಂದ್ರೆ ಮುಂದೆ ಈ ಪಕ್ಷವನ್ನು ಈ ಸ್ಥಿತಿಗೆ ಬರದೇ ಇರೋತರ ನೋಡಿಕೊಳ್ಳೋಕೆ ಪಕ್ಷದ ಎಲ್ಲಾ ಮುಖಂಡರು ಜವಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ. ನಾನು ಇವತ್ತು ಪಕ್ಷದ ತೀರ್ಮಾನವನ್ನು ಪ್ರಶ್ನೆ ಮಾಡೋಕೆ ಹೋಗಲ್ಲ. ಆದ್ರೆ ಈಗಿನ ನಡವಳಿಕೆ ನೋಡುತ್ತಿದ್ದರೇ ಪಕ್ಷಕ್ಕೆ ಒಳ್ಳೆಯ ಭವಿಷ್ಯ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.

ಈಗ ನಮ್ಮಲ್ಲಿ ಕೆಲವರಿಗೆ ಮನವರಿಕೆಯಾಗಿದೆ, ಮೈತ್ರಿ ಚುನಾವಣೆಯಿಂದ ಈ ಮಟ್ಟಿಗೆ ಪರಿಸ್ಥಿತಿ ಎದುರಾಗಿದೆ ಅಂತಾ. ಇದನ್ನ ನಾನು ಕಾದು ನೋಡ್ತಿನಿ. ಇದು ಹೆಚ್ಚು ಉಳಿಯಲ್ಲ. ಈಗಾಗಲೇ ಜನ ಒಂದ್ಸಾರಿ ತೋರಿಸಿದ್ದಾರೆ.  ಜೆಡಿಎಸ್‌ನವರರಿಗೂ ಜನ ಬುದ್ದಿ ಕಲಿಸ್ತಾರೆ ಎಂದು ಚಲುವರಾಯಸ್ವಾಮಿ ಎಚ್ಚರಿಕೆ ನೀಡಿದ್ದಾರೆ.
Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp