ಚುನಾವಣೆ ರಾಜಕೀಯವನ್ನು ಅಭಿವೃದ್ಧಿಯೊಂದಿಗೆ ಬೆರೆಸುವುದು ಸೂಕ್ತವಲ್ಲ : ತಮ್ಮಣ್ಣಗೆ ಮುಖ್ಯಮಂತ್ರಿ ಬುದ್ಧಿವಾದ

ವೋಟಿಗೆ ಅವ್ರುಸ ಕೆಲಸಕ್ಕೆ ಮಾತ್ರ ನಾವಾ? ವೋಟು ಹಾಕದೆ ಅಭಿವೃದ್ಧಿ ಕೇಳೋದಕ್ಕೆ ನಾಚಿಕೆ ಆಗೋಲ್ವಾ ಎಂದು ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಜನರ ಮೇಲೆ ವಾಗ್ದಾಳಿ ನಡೆಸಿದ ಸಾರಿಗೆ ಸಚಿವ ಡಿ. ಸಿ. ತಮ್ಮಣ್ಣ ಅವರಿಗೆ ಮುಖ್ಯಮಂತ್ರಿ ಎಚ್ . ಡಿ. ಕುಮಾರಸ್ವಾಮಿ ಬುದ್ದಿವಾದ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ವೋಟಿಗೆ ಅವ್ರುಸ ಕೆಲಸಕ್ಕೆ ಮಾತ್ರ ನಾವಾ? ವೋಟು ಹಾಕದೆ ಅಭಿವೃದ್ಧಿ ಕೇಳೋದಕ್ಕೆ ನಾಚಿಕೆ ಆಗೋಲ್ವಾ ಎಂದು ಸಮಸ್ಯೆ ಹೇಳಿಕೊಳ್ಳಲು ಬಂದಿದ್ದ ಜನರ ಮೇಲೆ ವಾಗ್ದಾಳಿ ನಡೆಸಿದ ಸಾರಿಗೆ ಸಚಿವ ಡಿ. ಸಿ. ತಮ್ಮಣ್ಣ ಅವರಿಗೆ ಮುಖ್ಯಮಂತ್ರಿ ಎಚ್ . ಡಿ. ಕುಮಾರಸ್ವಾಮಿ ಬುದ್ದಿವಾದ ಹೇಳಿದ್ದಾರೆ.
ಚುನಾವಣೆ ರಾಜಕೀಯವನ್ನು ಅಭಿವೃದ್ಧಿಯೊಂದಿಗೆ ಬೆರೆಸುವುದು ಸೂಕ್ತವಲ್ಲ. ಜನಪ್ರತಿನಿಧಿಗಳಾದ ಹಾಗೂ ಮಂತ್ರಿಮಂಡಲದಲ್ಲಿ ಸ್ಥಾನ ಪಡೆದಿರುವ ನಾವೆಲ್ಲರೂ ಪಕ್ಷಾತೀತವಾಗಿ ವರ್ತಿಸಬೇಕಾಗಿದೆ ಎಂದು ತಿಳುವಳಿಕೆ ಮೂಡಿಸಿದ್ದಾರೆ.
ಪಕ್ಷಾತೀತವಾಗಿ ಜನರ ರಾಜಕೀಯ ಒಲವನ್ನು ಪರಿಗಣಿಸದೆ ಒಟ್ಟಾಗಿ ಅಖಂಡ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಶ್ರಮಿಸೋಣ. ಇದೇ ಪ್ರಜಾಪ್ರಭುತ್ವದ ಸತ್ವ- ಸಾರ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಟ್ವೀಟ್ ಮೂಲಕ ತಮ್ಣಣ್ಣಗೆ ಬುದ್ದಿವಾದ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com