ಸಂಪುಟಕ್ಕೆ ಇಬ್ಬರು ಪಕ್ಷೇತರ ಶಾಸಕರ ಸೇರ್ಪಡೆ: ಇನ್ನೂ ಹಂಚಿಕೆಯಾಗದ ಖಾತೆ!

ಪಕ್ಷೇತರ ಶಾಸಕರಾದ ಆರ್. ಶಂಕರ್ ಮತ್ತು ಎಚ್. ನಾಗೇಶ್ ನಿನ್ನೆ ನಡೆದ ಸಂಪುಟ ವಿಸ್ತರಣೆಯಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ....
ಪಕ್ಷೇತರ ಶಾಸಕರಾದ ನಾಗೇಶ್ ಮತ್ತು ಆರ್, ಶಂಕರ್
ಪಕ್ಷೇತರ ಶಾಸಕರಾದ ನಾಗೇಶ್ ಮತ್ತು ಆರ್, ಶಂಕರ್
ಬೆಂಗಳೂರು: ಪಕ್ಷೇತರ ಶಾಸಕರಾದ ಆರ್. ಶಂಕರ್ ಮತ್ತು ಎಚ್. ನಾಗೇಶ್ ನಿನ್ನೆ ನಡೆದ ಸಂಪುಟ ವಿಸ್ತರಣೆಯಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
ಇಬ್ಬರು ಪಕ್ಷೇತರರು ಸಂಪುಟಕ್ಕೆ ಸೇರುವ ಮೂಲಕ ಸದ್ಯ ಸಮ್ಮಿಶ್ರ ಸರ್ಕಾರದ ಸಚಿವರ ಸಂಖ್ಯೆ 33ಕ್ಕೇರಿದೆ. ತಮ್ಮ ಪಾಲಿನ ಒಂದು ಖಾತೆಯನ್ನು ಹಂಚಿಕೆ ಮಾಡದ ಜೆಡಿಎಸ್ ಹಾಗೆಯೇ ಉಳಿಸಿಕೊಂಡಿದೆ 
ಪಕ್ಷೇತರ ಶಾಸಕ ಆರ್. ಶಂಕರ್ ಅವರಿಗೆ ಪೌರಾಡಳಿತ ಖಾತೆ ಸಿಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. 
ಯಾವುದೇ ಅಡೆತಡೆಗಳಿಲ್ಲದೇ ಸರ್ಕಾರ ಸುಗಮವಾಗಿ ನಡೆಯಬೇಕೆಂಬ ಕಾರಣಕ್ಕಾಗಿ ಪಕ್ಷೇತರರಿಗೆ ಅವಕಾಶ ನೀಡಲಾಗಿದೆ ಎಂದು ಜಲ ಸಂಪನ್ಮೂಲ ಸಚಿವ ಡಿ,ಕೆ ಶಿವಕುಮಾರ್ ಹೇಳಿದ್ದಾರೆ.  ಪಕ್ಷವನ್ನು ಉಳಿಸಲು ನಾವು ಯಾವುದೇ ತ್ಯಾಗ ಮಾಡಲು ಸಿದ್ಧ ಎಂದು ಹೇಳಿದ್ದಾರೆ.
ಸಂಪುಟ ಸೇರ್ಪಡೆ ಬಗ್ಗೆ ಪ್ರತಿಕ್ರಿಯಿಸಿರುವ ಆರ್, ಶಂಕರ್ ನಾನೊಬ್ಬ ಅವಕಾಶವಾದಿ ರಾಜಕಾರಣಿಯಲ್ಲ,. ಹಾಗೆಂದ ಮಾತ್ರಕ್ಕೆ ನಾನು ಸನ್ಯಾಸಿಯೂ ಅಲ್ಲ, ಜನರ ಸೇವೆ ಮಾಡಲು ಅವಕಾಶ ಸಿಕ್ಕಿದೆ, ಅದನ್ನು ಸದುಪಯೋಗ ಪಡಿಸಿಕೊಳ್ಳುತ್ತೇನೆ ಎಂದಿದ್ದಾರೆ, 2018ರ ಚುನಾವಣೆ ವೇಳೆ ಜೆಡಿಎಸ್,ಮತ್ತು ಬಿಜೆಪಿ ತಮಗೆ ಟಿಕೆಟ್  ಆಫರ್ ನೀಡಿದ್ದವು, ಕಾಂಗ್ರೆಸ್ ನನಗೆ  ಟಿಕೆಟ್ ನೀಡಲು ಸಿದ್ಧವಿತ್ತು, ಆದರೆ ಯಾರದ್ದೋ ಪಿತೂರಿಯಿಂದ  ಕೈ ತಪ್ಪಿ ಹೋಯಿತು ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com