ಶೋಭಕ್ಕ ಸ್ವಲ್ಪ ತಾಳ್ಮೆಯಿಂದ ಇರಿ; ನಿಮಗಿಂತ ಹೆಚ್ಚು ಸಂಸ್ಕೃತ ಪದ ನನಗೆ ಗೊತ್ತು: ಎಂಬಿ ಪಾಟೀಲ್

ಶೋಭಕ್ಕ ಸ್ವಲ್ಪ ತಾಳೆಯಿಂದ ಇರಕ್ಕ. ಹೆಣ್ಣುಮಗಳು ಅಂತ ನಾವು ಯಾವ ಪದಗಳನ್ನು ಪ್ರಯೋಗಿಸುತ್ತಿಲ್ಲ. ನಾವು ಬಿಜಾಪುರದವರು ನಮಗೆ ಬೇರೆ ಪದಗಳೇ ಗೊತ್ತು ಎಂದು ಗೃಹ ಸಚಿವ ಎಂಬಿ ಪಾಟೀಲ್...

Published: 17th June 2019 12:00 PM  |   Last Updated: 17th June 2019 01:35 AM   |  A+A-


ಸಂಗ್ರಹ ಚಿತ್ರ

Posted By : VS VS
Source : Online Desk
ಬೆಂಗಳೂರು: ಶೋಭಕ್ಕ ಸ್ವಲ್ಪ ತಾಳೆಯಿಂದ ಇರಕ್ಕ. ಹೆಣ್ಣುಮಗಳು ಅಂತ ನಾವು ಯಾವ ಪದಗಳನ್ನು ಪ್ರಯೋಗಿಸುತ್ತಿಲ್ಲ. ನಾವು ಬಿಜಾಪುರದವರು ನಮಗೆ ಬೇರೆ ಪದಗಳೇ ಗೊತ್ತು ಎಂದು ಗೃಹ ಸಚಿವ ಎಂಬಿ ಪಾಟೀಲ್ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕಿಡಿಕಾರಿದ್ದಾರೆ.

ಜಿಂದಾಲ್ ಗೆ ಸರ್ಕಾರಿ ಭೂಮಿ ನೀಡುತ್ತಿರುವುದನ್ನು ಖಂಡಿಸಿ ಬಿಜೆಪಿ ನಡೆಸಿದ್ದ ಬಿಜೆಪಿ ನಾಯಕರನ್ನು ಬಂಧಿಸಿದ್ದು ಇದಕ್ಕೆ ಸಂಬಂಧಿಸಿದಂತೆ ಶೋಭಾ ಕರಂದ್ಲಾಜೆ ಅವರು ಎಂಬಿ ಪಾಟೀಲ್ ಒಬ್ಬ ಶತಮೂರ್ಖ ಗೃಹಸಚಿವ ಇತಹವರು ಈ ರಾಜ್ಯದಲ್ಲಿರುವುದು ದುರಾದೃಷ್ಟಕರ ಎಂದು ವಾಗ್ದಾಳಿ ನಡೆಸಿದ್ದರು. 

ಇದಕ್ಕೆ ತಿರುಗೇಟು ನೀಡಿರುವ ಎಂಬಿ ಪಾಟೀಲ್ ಅವರು ನಿಮ್ಮ ಬಾಯಲ್ಲಿ ಇಂತಹ ಪದ ಬರಬಾರದು. ನಿಮ್ಮ ಹಿನ್ನಲೆ, ಸಂಸ್ಕಾರ ಜನರಿಗೆ ಗೊತ್ತಿದೆ. ಜಿಂದಾಲ್ ಬಗ್ಗೆ ಏನಾದರೂ ತಕರಾರು ಇದ್ದರೆ ಸಮಿತಿ ಮುಂದೆ ಹೋಗಲಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಮಿಶ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಬಿಜೆಪಿ ನಾಯಕರು ಅಹೋರಾತ್ರಿ ಧರಣಿ ನಡೆಸಿದ್ದರು. ನಿನ್ನೆ ಸಿಎಂ ಗೃಹ ಕಚೇರಿ ಕೃಷ್ಣಾಗೆ ಮುತ್ತಿಗೆ ಹಾಕಲು ಯತ್ನಿಸಿದ್ದ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸೇರಿ ಬಿಜೆಪಿಯ ಹಲವು ಮುಖಂಡರನ್ನು ಪೊಲೀಸರು ಬಂಧಿಸಿದ್ದರು.
Stay up to date on all the latest ರಾಜಕೀಯ news
Poll

ಎನ್‌ಡಿಎ ಆಡಳಿತದಲ್ಲಿ ಭಯೋತ್ಪಾದಕ ದಾಳಿಯಿಂದ ಭಾರತ ಸುರಕ್ಷಿತವಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp