'ನನ್ನ ನೋವು ನನಗಿರಲಿ: ನಿಮ್ಮ ಜೊತೆ ನಾನಿರುತ್ತೇನೆ'

ಜನರಲ್ಲಿ ಹಾಗೂ ಅಧಿಕಾರಿಗಳಲ್ಲಿ ಆತ್ಮ ವಿಶ್ವಾಸ ಮೂಡಿಸಲು ತಾವು ಗ್ರಾಮವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಮುಖ್ಯಮಂತ್ರಿ ಎಚ್.ಡಿ ...

Published: 18th June 2019 12:00 PM  |   Last Updated: 18th June 2019 11:35 AM   |  A+A-


H.D Kumaraswamy

ಎಚ್.ಡಿ ಕುಮಾರಸ್ವಾಮಿ

Posted By : SD SD
Source : The New Indian Express
ಬೆಂಗಳೂರು: ಜನರಲ್ಲಿ ಹಾಗೂ ಅಧಿಕಾರಿಗಳಲ್ಲಿ ಆತ್ಮ ವಿಶ್ವಾಸ ಮೂಡಿಸಲು ತಾವು ಗ್ರಾಮವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ನಾನು ಮುಖ್ಯಮಂತ್ರಿ ಆದಾಗ ಮತ್ತು ಇಂದಿನ ಪರಿಸ್ಥಿತಿ ತುಂಬಾ ವಿಭಿನ್ನವಾಗಿದೆ, ಎಲ್ಲಾ ನೋವು ನನಗೆ ಇರಲಿ, ಕೆಲವೊಮ್ಮೆ ನನಗೆ ಅನಿಸುತ್ತಿತ್ತು, ಜನರ ವಿಶ್ವಾಸ ಕಳೆದುಕೊಳ್ಳುತ್ತೇನೆ ಎಂಬ ಭಾವನೆ ನನಗೆ ಬರುತ್ತಿತ್ತು, ಗ್ರಾಮ ವಾಸ್ತವ್ಯ ಮಾಡಲು ಕೇವಲ ಜನರು ಮಾತ್ರ ಕಾರಣವಲ್ಲ, ಅಧಿಕಾರಿಗಳಲ್ಲೂ ಆತ್ಮ ವಿಶ್ವಾಸ ಮೂಡಿಸಲು ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿರುವುದಾಗಿ ಹೇಳಿದ್ದಾರೆ.

ರಾಮನಗರ ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿದ, ಕುಮಾರಸ್ವಾಮಿ, ರಾಮನಗರದಲ್ಲಿ ಕೂಡ ಗ್ರಾಮವಾಸ್ತವ್ಯ ಹೂಡುವುದಾಗಿ ಹೇಳಿದ್ದಾರೆ. 
Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp