ಒಂದು ದೇಶ, ಒಂದು ಚುನಾವಣೆಯಿಂದ ಮತದಾರರಲ್ಲಿ ಗೊಂದಲ ಸೃಷ್ಟಿ: ಎಚ್ ಡಿ ದೇವೇಗೌಡ

ಲೋಕಸಭಾ ಚುನಾವಣೆ ಜೊತೆಯಲ್ಲಿಯೇ ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಸುವುದರಿಂದ ಮತದಾರರಲ್ಲಿ ಗೊಂದಲ ಸೃಷ್ಟಿಯಾಗುತ್ತದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಹೇಳಿದ್ದಾರೆ.
ಎಚ್. ಡಿ. ದೇವೇಗೌಡ
ಎಚ್. ಡಿ. ದೇವೇಗೌಡ
ಬೆಂಗಳೂರು: ಲೋಕಸಭಾ ಚುನಾವಣೆ ಜೊತೆಯಲ್ಲಿಯೇ ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಸುವುದರಿಂದ ಮತದಾರರಲ್ಲಿ ಗೊಂದಲ ಸೃಷ್ಟಿಯಾಗುತ್ತದೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್. ಡಿ. ದೇವೇಗೌಡ ಹೇಳಿದ್ದಾರೆ.
ಒಂದು ದೇಶ, ಒಂದು ಚುನಾವಣೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ದೆಹಲಿಯಲ್ಲಿ ನಿನ್ನೆ ಸರ್ವಪಕ್ಷ ಸಭೆ ನಡೆಸಿದ ಬೆನ್ನಲ್ಲೇ  ಇಂದು ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ,  ಇದರ ಬಗ್ಗೆ ನನಗೂ ಆತಂಕವಿದೆ. ನಾವು ಅಷ್ಟು ಮುಂದುವರೆದಿಲ್ಲ ಅನ್ನಿಸುತ್ತದೆ ಎಂದರು.
ಒಂದು ದೇಶ, ಒಂದು ಚುನಾವಣೆ ಪದ್ಧತಿಯನ್ನು ಕೆಲವರು ಸ್ವಾಗತಿಸಿದರೆ ಮತ್ತೆ ಕೆಲವರು ಆಕ್ಷೇಪಿಸಿದ್ದಾರೆ. ಇಲ್ಲಿ ಲೋಕಸಭೆಗಾಗಿ ಮತಗಟ್ಟೆ ಇಟ್ಟರೆ ಮತ್ತೊಂದು ಕಡೆಯಲ್ಲಿ ಅಸೆಂಬ್ಲಿ ಚುನಾವಣೆಗಾಗಿ ಮತಗಟ್ಟೆ ಇಡುತ್ತಾರೆ. ಇದರಿಂದ ಮತದಾರರು ಗೊಂದಲಕ್ಕೊಳಗಾಗುತ್ತಾರೆ.  ಇದರಿಂದ ಅನಾನೂಕೂಲವಾಗುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. 
 ಪೇಪರ್ ಬ್ಯಾಲೆಟ್ ನಲ್ಲಿ  ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಏಕಕಾಲದಲ್ಲಿ ನಡೆಯುವಾಗ ಅಧಿಕಾರಿಗಳು ಪ್ರತ್ಯೇಕವಾದ ಕಾಗದ ಪ್ರತಿಗಳನ್ನು ನೀಡಬೇಕಾಗುತ್ತದೆ. ಈ ಪ್ರಕ್ರಿಯೆಯಿಂದ ಮತದಾರರಲ್ಲಿ ಅನುಮಾನ ಮೂಡುತ್ತದೆ ಎಂದು ಅವರು ತಿಳಿಸಿದರು.
ಈಗ ವಿದ್ಯುನ್ಮಾನ ಮತಯಂತ್ರಗಳಿಂದ ಚುನಾವಣೆ ನಡೆದಿವೆ. ಒಂದು ವೇಳೆ ಏಕಕಾಲದಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ನಡೆಯುವುದರಿಂದ ಅವುಗಳಿಂದಲೂ ತೊಂದರೆಯಾಗಲಿದೆ ಎಂದು ದೇವೇಗೌಡ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com