ಮೈತ್ರಿ ಸರ್ಕಾರ ಹೆಚ್ಚು ಕಾಲ ಉಳಿಯಲ್ಲ, 'ಹೊಸ ಆಯ್ಕೆಗಳು' ತೆರೆದುಕೊಳ್ಳಲಿದೆ: ಮುರಳೀಧರ ರಾವ್

ರಾಜ್ಯದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಉಳಿಯಲ್ಲ, ಆದರೆ ಇದರಿಂದ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆ ಕಡಿಮೆ ಇದ್ದು ಬೇರೆ "ಕೆಲವು ಆಯ್ಕೆಗಳು" ತೆರೆದುಕೊಳ್ಳಲಿದೆ ಎಂದು ಭಾರತೀಯ ಜನತಾ ಪಕ್ಷ ಶುಕ್ರವಾರ ಹೇಳಿದೆ,
ಪಿ ಮುರಳೀಧರ್ ರಾವ್
ಪಿ ಮುರಳೀಧರ್ ರಾವ್
ಬೆಂಗಳೂರು: ರಾಜ್ಯದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಹೆಚ್ಚು ದಿನ ಉಳಿಯಲ್ಲ, ಆದರೆ ಇದರಿಂದ ಮಧ್ಯಂತರ ಚುನಾವಣೆ ನಡೆಯುವ ಸಾಧ್ಯತೆ ಕಡಿಮೆ ಇದ್ದು ಬೇರೆ  "ಕೆಲವು ಆಯ್ಕೆಗಳು" ತೆರೆದುಕೊಳ್ಳಲಿದೆ ಎಂದು ಭಾರತೀಯ ಜನತಾ ಪಕ್ಷ ಶುಕ್ರವಾರ ಹೇಳಿದೆ, 
ರಾಜ್ಯದ ಆಡಳಿತ ನಡೆಸುತ್ತಿರುವ ಸರ್ಕಾರ ಜನರ ಒಲವನ್ನು ಕಳೆದುಕೊಂಡಿದೆ ಎಂದು ಕರ್ನಾಟಕದ ಪಕ್ಷದ ವ್ಯವಹಾರಗಳ ಉಸ್ತುವಾರಿ ಹೊಂದಿರುವ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪಿ ಮುರಳೀಧರ್ ರಾವ್ ಹೇಳಿದ್ದಾರೆ, ದಕ್ಷಿಣದಲ್ಲಿನ ರಾಜ್ಯದ ವಿವಿಧ ಪಕ್ಷಗಳಿಗೆ ಸೇರಿದ ಶಾಸಕರು ಮಧ್ಯಕಾಲೀನ ಚುನಾವಣೆಗಳನ್ನು ಬಯಸುವುದಿಲ್ಲ.
ಕರ್ನಾಟಕದಲ್ಲಿ ಮಧ್ಯಕಾಲೀನ ಚುನಾವಣೆ ನಡೆಯುವುದರಲ್ಲಿ ಸಂದೇಹವಿಲ್ಲ ಎಂದು ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ರಾವ್, ಜೆಡಿಎಸ್ ಮುಖ್ಯಸ್ಥ ಗೌಡರು ತಮ್ಮ ಇತಿಮಿತಿಗಳನ್ನು ಮೀರಿದ್ದಾರೆ.ಕೇವಲ 37 ಶಾಸಕರನ್ನು ಹೊಂದಿರುವ ತಮ್ಮ ಪಕ್ಷ ಅಧಿಕಾರ ನಡೆಸಲು ಅರ್ಹವಲ್ಲ, ಸದನವನ್ನು ವಿಸರ್ಜಿಸಲು ಶಿಫಾರಸು ಮಾಡಬೇಕಿದೆ" ಎಂದಿದ್ದಾರೆ.
"ನಾನು ಕರ್ನಾಟಕದಲ್ಲಿ ಯಾವುದೇ ಮಧ್ಯಕಾಲೀನ ಚುನಾವಣೆ ಸಾಧ್ಯತೆ ಕಾಣುವುದಿಲ್ಲ.ಬಿಜೆಪಿ ಇದನ್ನು ಬಯಸುವುದಿಲ್ಲ.ನನ್ನ ದೃಷ್ಟಿಯಲ್ಲಿ, ಪ್ರಸ್ತುತ ಸರ್ಕಾರವು ಜನಾದೇಶವನ್ನು ಕಳೆದುಕೊಂಡಿದೆ. ಜನರು ಈ ಮೈತ್ರಿಯನ್ನು ಸಂಪೂರ್ಣವಾಗಿ ತಿರಸ್ಕರಿಸಿದ್ದಾರೆ" ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
"ಒಕ್ಕೂಟ ಸರ್ಕಾರದ ಮುಂದುವರಿಕೆ  ಕರ್ನಾಟಕದ ಜನರಿಗೆ ನೋವು ಮತ್ತು ಸಂಕಟವನ್ನು ಉಂಟುಮಾಡುತ್ತಿದೆ. ಇದು ದೀರ್ಘಕಾಲ ಉಳಿಯುವುದಿಲ್ಲ ಮತ್ತು ಕೆಲವು ಹೊಸ ಯ್ಕೆಗಳು ಹೊರಹೊಮ್ಮುತ್ತವೆ ಎಂದು ಬಿಜೆಪಿ ಭಾವಿಸುತ್ತದೆ. ಎಲ್ಲಾ ಪಕ್ಷಗಳಿಗೆ ಸೇರಿದ ಶಾಸಕರು (ಕರ್ನಾಟಕದಲ್ಲಿ) ಮಧ್ಯಂತರ ಚುನಾವಣೆಯ ಬಗೆಗೆ ಆಸಕ್ತಿ ಹೊಂದಿಲ್ಲ "  ರಾವ್ ಹೇಳಿದರು.
ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿ-ಎಸ್ ತಲಾ ಒಂದು ಲೋಕಸಭಾ ಸ್ಥಾನವನ್ನು ಮಾತ್ರ ಗಳಿಸುವಲ್ಲಿ ಯಶಸ್ವಿಯಾದರೆ, ಕರ್ನಾಟಕದ 28 ಸ್ಥಾನಗಳಲ್ಲಿ 25 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com