ಸಸ್ಪೆಂಡ್ ಮಾಡಲಿ ಬಿಡಿ, ನನ್ನ ಕಂಡರೆ ಭಯ: ನನ್ನನ್ನು ಸುಮ್ಮನಾಗಿಸಲು ಈ ಆರ್ಡರ್: ರೋಷನ್ ಬೇಗ್

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ನಂತರ ಕಾಂಗ್ರೆಸ್ ಮುಖಂಡರ ಬಗ್ಗೆ ಬಹಿರಂಗವಾಗಿಯೇ ಹರಿಹಾಯ್ದಿದ್ದ ಮಾಜಿ ಸಚಿವ ರೋಷನ್ ...
ರೋಷನ್ ಬೇಗ್
ರೋಷನ್ ಬೇಗ್
ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹೀನಾಯ ಸೋಲಿನ ನಂತರ ಕಾಂಗ್ರೆಸ್ ಮುಖಂಡರ ಬಗ್ಗೆ ಬಹಿರಂಗವಾಗಿಯೇ ಹರಿಹಾಯ್ದಿದ್ದ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಪಕ್ಷದಿಂದ ಸಸ್ಪೆಂಡ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ದಿ ನ್ಯೂ ಇಂಡಿಯನ್  ಎಕ್ಸ್ ಪ್ರೆಸ್ ಗೆ ನೀಡಿರುವ ಸಂದರ್ಶನದಲ್ಲಿ ಸಸ್ಪೆಂಡ್ ಆರ್ಡರ್ ಎಂದರೇ ಏನೂ ಇಲ್ಲ, ನನ್ನನ್ನು ಸುಮ್ಮನಾಗಿಸಲು ಇದೊಂದು ತಂತ್ರ  ಎಂದು ಹೇಳಿದ್ದಾರೆ.
ಪ್ರ: ಕಾಂಗ್ರೆಸ್ ಪಕ್ಷ ನಿಮ್ಮನ್ನು ಸಸ್ಪೆಂಡ್ ಮಾಡಿದೆಯಲ್ಲಾ?
ಮಾಡಲಿ ಬಿಡಿ, ಈ ಹಿಂದೆ ಹಲವು ಕಾಂಗ್ರೆಸ್  ನಾಯಕರನ್ನು  ಸಸ್ಪೆಂಡ್ ಮಾಡಿದ್ದರು. ಮಣಿಶಂಕರ್ ಅಯ್ಯರ್, ಕಂಪ್ಲಿ ಗಣೇಶ್,  ಆರ್ ಗುಂಡೂರಾವ್, ಎ.ಆರ್ ಅಂಟುಲಿ, ಅರ್ಜುನ್ ಸಿಂಗ್, ಅವರನ್ನು ಉಚ್ಚಾಟಿಸಲಾಗಿತ್ತು.  ಅದಾದ ನಂತರ ಅರ್ಜುನ್ ಸಿಂಗ್ ಮತ್ತು ಅಂಟುಲಿ ಅವರು ಕೇಂದ್ರ ಸಚಿವರಾಗಿದ್ದರು.  ಸಸ್ಪೆಂಡ್ ಅಂದರೆ ಅದಕ್ಕೆ ಯಾವುದೇ ಅರ್ಧವಿಲ್ಲ, ನನ್ನನ್ನು ಕಂಡರೆ ಭಯ, ನನ್ನನ್ನು ಸುಮ್ಮನಾಗಿಸಲು ಮಾಡಿದ್ದಾರೆ, ಇದರಿಂದ ನನಗೆ ನೋವಾಗಿದೆ.
ಪ್ರ: ಐಎಂಎ ಹಗರಣದಲ್ಲಿ ನೀವು ಭಾಗಿಯಾಗಿದ್ದೀರಾ ಎಂದು ಮಾತನಾಡುತ್ತಿದ್ದಾರಲ್ಲ?
ಜೂನ್ 1 ರಂದು ನನಗೆ  ವಿಷಯದ ಬಗ್ಗೆ ತಿಳಿಯಿತು, ನಾನು ಐಎಂಎ ಪಾಲುದಾರನಲ್ಲ, ಪ್ರಕರಣವನ್ನು ಸಿಬಿಐ ಗೆ ಕೊಡುವಂತೆ ನಾನೇ ಶಿಫಾರಸ್ಸು ಮಾಡುತ್ತಿದ್ದೇನೆ, ಇದನ್ನು ಕುಮಾರಸ್ವಾಮಿ ಅವರಿಗೂ ತಿಳಿಸಿದ್ದೇನೆ, 
ಸಿದ್ದರಾಮಯ್ಯ ಅವರು ಅಹಂಕಾರಿ ಮತ್ತು ಸ್ವಾರ್ಥಿ ಎಂದು ಏಕೆ ಹೇಳಿದ್ದೀರಿ?
1984 ರಿಂದ ನಾನು ಸಿದ್ದರಾಮಯ್ಯ ಅವರನ್ನು ನೋಡಿದ್ದೇನೆ, ನನ್ನ ಹಾಗೆ ಅವರು 7 ಬಾರಿ ಶಾಸಕರಾಗಿದ್ದಾರೆ, ದೇವೇಗೌಡರಿಂದ ಅವರು ಸಿಎಂ ಆಗಿಲ್ಲ,  ಅಹಿಂದ ಚಳುವಳಿ ಆರಂಭಿಸಿದರು,  ನಾನು ಅಧಿಕಾರದಾಹಿಯಾಗಿದ್ದೇನೆ ಎಂದು ಹೇಳಿದ್ದಾರೆ, ಅವರ ಜೊತೆ ಈಗ ಅಧಿಕಾರ ಇದೆಯೇ? ಧಾರ್ಮಿಕ ವಿಚಾರದಲ್ಲಿ ಮೂಗು ತೂರಿಸಿದರು, ಅವರ ದುರಹಂಕಾರದ ವರ್ತನೆಗೆ ಒಕ್ಕಲಿಗರು ಅಸಮಾಧಾನ ಗೊಂಡಿದ್ದಾರೆ, ಅಹಿಂದ ಹೆಸರಲ್ಲಿ ಎರಡು ಪ್ರಬಲ ಸಮುದಾಯಗಳ ವಿರುದ್ಧ ವಿಷ ಕಾರುತ್ತಿದ್ದಾರೆ, ನಮ್ಮ ಯಾವುದೇ ಮಾತು ಕೇಳುವುದಿಲ್ಲ, ಸಿದ್ದರಾಮಯ್ಯ ಹಠಾವೋ, ಪಾರ್ಟಿ ಬಚಾವೋ ಎನ್ನುವ ಸಂದೇಶ ಕಳುಹಿಸಿದ್ದಾರೆ, 
ಪ್ರ: ನಿಮ್ಮ  ವಿರುದ್ಧ ದೂರು ದಾಖಲಿಸಿದ್ದರ ಹಿಂದೆ ಜಮೀರ್ ಆಹ್ಮದ್ ಕೈವಾಡ ಇದೆ ಎಂದು ಹೇಳಲಾಗುತ್ತಿದೆಯಲ್ಲ?
ಈ ವಿಷಯದಲ್ಲಿ ನಾನು ಯಾರ ಹೆಸರನ್ನು ತೆಗೆದುಕೊಳ್ಳಲು ಬಯಸುವುದಿಲ್ಲ.
ಪ್ರ: ನಿಮ್ಮನ್ನು ಮಂತ್ರಿ ಮಾಡದ್ದಕ್ಕೆ ಹಾಗೂ ಬೆಂಗಳೂರು ಸೆಂಟ್ರಲ್ ನಿಂದ ಲೋಕಸಭೆಚುನಾವಣೆಗೆ ಟಿಕೆಟ್ ನೀಡದ್ದಕ್ಕೆ ನೀವು ಬೇಸರಗೊಂಡಿದ್ದೀರಾ?
ಅದರಲ್ಲಿ ತಪ್ಪು ಏನಿದೆ
ಪ್ರ: ಮುಂದಿನ ನಡೆ ಏನು? ಬಿಜೆಪಿ ಅಥವಾ ಜೆಡಿಎಸ್ ಗೆ ಸೇರುತ್ತೀರಾ?
ನಾನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಗೆ ಸೇರಿದವನು, ಬೇರೆ ಯಾವುದೇ ಪಕ್ಷಕ್ಕೆ ಸೇರಿದವನಲ್ಲ, 1980 ರಿಂದ ಕಾಂಗ್ರೆಸ್ ನಾಯಕರು ಹಲವು ತೊಂದರೆ ನೀಡಿದ್ದಾರೆ, ಹೀಗಾಗಿ ನಾನು ರಘುಪತಿ ಮತ್ತು ರಮೇಶ್ ಕುಮಾರ್  ಜನತಾ ಪಕ್ಷ ಸೇರಿದ್ದೆವು, ಮತ್ತೆ ಅಂತದ್ದೇ ಸನ್ನಿವೇಶ ಸೃಷ್ಟಿಸಿದ್ದಾರೆ, ಇದು ನನಗೆ ನೋವು ತಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com