ದಿನೇಶ್ ಜಾಗಕ್ಕೆ ಖಂಡ್ರೆ ನೇಮಿಸಲು ಖರ್ಗೆ ಸಾಥ್: ಕೆಪಿಸಿಸಿ ಹುದ್ದೆಗೆ ಒಕ್ಕಲಿಗ ಪ್ರಭಾವಿಯೋ? ಸಿದ್ದು ಆಪ್ತನೋ?

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಪೈಪೋಟಿ ಆರಂಭವಾಗಿದೆ. ಕೆಪಿಸಿಸಿ ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷರನ್ನು ಹೊರತು ಪಡಿಸಿ ...
ಈಶ್ವರ ಖಂಡ್ರೆ, ಸಿದ್ದರಾಮಯ್ಯ ಮತ್ತು ಡಿ,ಕೆ ಶಿವಕುಮಾರ್
ಈಶ್ವರ ಖಂಡ್ರೆ, ಸಿದ್ದರಾಮಯ್ಯ ಮತ್ತು ಡಿ,ಕೆ ಶಿವಕುಮಾರ್
ರಾಯಚೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಈಗಾಗಲೇ ಪೈಪೋಟಿ ಆರಂಭವಾಗಿದೆ.  ಕೆಪಿಸಿಸಿ ಅಧ್ಯಕ್ಷ ಮತ್ತು ಕಾರ್ಯಾಧ್ಯಕ್ಷರನ್ನು ಹೊರತು ಪಡಿಸಿ ಉಳಿದ ಸಮಿತಿಗಳನ್ನು ಎಐಸಿಸಿ ವಿಸರ್ಜಿಸಿತ್ತು.
ದಿನೇಶ್ ಗುಂಡೂರಾವ್ ಅವರ ಸ್ಥಾನಕ್ಕೆ ಕಾರ್ಯಾಧ್ಯಕ್ಷ  ಈಶ್ವರ್ ಖಂಡ್ರೆ ಅವರಿಗೆ ನೀಡಬೇಕು ಎಂಬುದು ಕೆಲವರ ವಾದವಾಗಿದೆ. ಹೈದರಬಾದ್- ಕರ್ನಾಟಕ ಭಾಗದ ಪ್ರಮುಖ ನಾಯಕ ಮಲ್ಲಿಕಾರ್ಜುನ ಖರ್ಗೆ ಖಂಡ್ರೆ ಪರ ಬ್ಯಾಟಿಂಗ್ ಮಾಡಿದ್ದಾರೆ. ಜೊತೆಗೆ ಹಲವು ಲಿಂಗಾಯತ ಮುಖಂಡರು ಕೂಡ ಖಂಡ್ರೆಗೆ ಸ್ಥಾನ ನೀಡುವಂತೆ ಒತ್ತಾಯಿಸಿದ್ದಾರೆ,
ಬೆಂಗಳೂರಿನಲ್ಲಿ ನಡೆದ ವೀರಶೈವ-ಲಿಂಗಾಯತ  ಮುಖಂಡರ ಸಭೆಯಲ್ಲಿ  ಹೆಚ್ಚಿನ ಕಾಂಗ್ರೆಸ್ ಮುಖಂಡರು ಖಂಡ್ರೆಗೆ ಸಪೋರ್ಟ್ ಮಾಡಿದ್ದಾರೆ, ಈ ರೀತಿಯ ಸಭೆ ಇತ್ತೀಚೆಗೆ ಎಲ್ಲಿಯೂ ನಡೆದಿರಲಿಲ್ಲ ಎಂದು ಮೂಲಗಳಉ ತಿಳಿಸಿವೆ.
ಶಾಮನೂರು ಶಿವಶಂಕರಪ್ಪ, ಎಂ. ಬಿ ಪಾಟೀಲ್, ಎಸ್.ಆರ್ ಪಾಟೀಲ್ ಮತ್ತಿತರರು, ಸಭೆಯಲ್ಲಿ  ಹಾಜರಿದ್ದರು,  ಸಭೆಯನ್ನು ಸ್ವತಃ ಖಂಡ್ರೆ ಅವರೇ ಆಯೋಜಿಸಿದ್ದರು. ಇತ್ತೀಚೆಗೆ ಈಶ್ವರ್ ಖಂಡ್ರೆಗೆ ಕರೆ ಮಾಡಿದ್ದ ಖರ್ಗೆ ಹೈಕಮಾಂಡ್ ಜೊತೆ ಚರ್ಚಿಸಿರುವುದಾಗಿ ತಿಳಿಸಿದ್ದಾರೆ.  ಆದರೆ ತಮಗೆ ಇದರ ಬಗ್ಗೆ ಆಸಕ್ತಿಯಿಲ್ಲ ಎಂದು ಖಂಡ್ರೆ ಮೇಲ್ನೋಟಕ್ಕೆ ತಿಳಿಸಿದ್ದಾರೆ,
ಪಕ್ಷ ವಹಿಸಿದ ಯಾವುದೇ ಜವಾಬ್ದಾರಿಯನ್ನು ತಾನು ನಿರ್ವಹಿಸಲು ಸಮರ್ಥನಿರುವುದಾಗಿ ಹೇಳಿದ್ದಾರೆ, ಮುಂದಿನ ಕರ್ನಾಟಕ ಮುಖ್ಯಮಂತ್ರಿಗಳಾಗಲು ಬಯಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಒಕ್ಕಲಿಗ ಪ್ರಭಾವಿ ನಾಯಕ ಡಿ.ಕೆ ಶಿವಕುಮಾರ್ ಅವರಿಗೆ ಖಂಡ್ರೆ ಪ್ರಬಲ ಎದುರಾಳಿಯಾಗಿದ್ದಾರೆ.
ಇಬ್ಬರು ಕೂಡ ಸಿಎಂ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ, ತಮ್ಮ ಆಪ್ತರಿಗೆ ಕೆಪಿಸಿಸಿ ಹುದ್ದೆ ಕೊಡಿಸಲು ಸಿದ್ದರಾಮಯ್ಯ ಪಣ ತೊಟ್ಟಿದ್ದಾರೆ,.ಜೊತೆ ಮತ್ತೆ ಸಿಎಂ ಆಗುವ ಕನಸು ಕಾಣುತ್ತಿದ್ದಾರೆ. ಸಚಿವ ಡಿ.ಕೆ ಶಿವಕುಮಾರ್ ಕೂಡ ಇದೇ ಉದ್ದೇಶ ಈಡೇರಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಈಗಾಗಲೇ ಖಂಡ್ರೆ ವಿರುದ್ಧ ಲಾಬಿ ಆರಂಭಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com