ಸರ್ಕಾರ ನಡೆಸೋಕಾಗಿಲ್ಲ ಅಂದ್ರೆ ರಾಜೀನಾಮೆ ಕೊಡಿ ಎಂದ ಬಿಎಸ್ ವೈ, ಅರ್ಥಹೀನ ಟೀಕೆಗೆ ಮೌನವೇ ಉತ್ತರ ಎಂದ ಸಿಎಂ

ಸಿಎಂ ಎಚ್.ಡಿ, ಕುಮಾರಸ್ವಾಮಿ ಗ್ರಾಮ ವಾಸ್ತ್ಯವ್ಯ ಮತ್ತು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಮಧ್ಯಂತರ ಚುನಾವಣೆ ಕುರಿತಾದ ಎಚ್ಚರಿಕೆಗಳನ್ನು ದಾಳವಾಗಿಸಿಕೊಂಡಿರುವ ಪ್ರತಿಪಕ್ಷ ಬಿಜೆಪಿ ರಾಜ್ಯದ ಸಮ್ಮಿಶ್ರ ಸರ್ಕಾರದ ವಿರುಧ್ಹ ತನ್ನ ಪ್ರತಿದಾಳಿ ನಡೆಸಿದೆ.
ಕುಮಾರಸ್ವಾಮಿ  ಬಿಎಸ್ ವೈ
ಕುಮಾರಸ್ವಾಮಿ ಬಿಎಸ್ ವೈ
ಬೆಂಗಳೂರು: ಸಿಎಂ ಎಚ್.ಡಿ, ಕುಮಾರಸ್ವಾಮಿ  ಗ್ರಾಮ ವಾಸ್ತ್ಯವ್ಯ ಮತ್ತು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಮಧ್ಯಂತರ ಚುನಾವಣೆ ಕುರಿತಾದ ಎಚ್ಚರಿಕೆಗಳನ್ನು ದಾಳವಾಗಿಸಿಕೊಂಡಿರುವ ಪ್ರತಿಪಕ್ಷ ಬಿಜೆಪಿ ರಾಜ್ಯದ ಸಮ್ಮಿಶ್ರ ಸರ್ಕಾರದ ವಿರುಧ್ಹ ತನ್ನ ಪ್ರತಿದಾಳಿ ನಡೆಸಿದೆ.
ಸಿಎಂ ಗ್ರಾಮವಾಸ್ತವ್ಯವಿದ್ದಾಗಲೇ ದೇವೇಗೌಡರು ಮಧ್ಯಂತರ ಚುನಾವಣೆ ಬಗೆಗೆ ಮಾತನಾಡುತಾರೆ ಎಂದು ಹೇಳಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿತ್ಯೂರಪ್ಪ "ಅವರಿಗೆ ಸರ್ಕಾರ ನಡೆಸುವ ಸಾಮರ್ಥ್ಯ ಇಲ್ಲದಿದ್ದರೆ ಅವರು ರಾಜೀನಾಮೆ ನೀಡಿ ಹೊರಹೋಗಬೇಕು. ನಮ್ಮಲ್ಲಿ 105 ಶಾಸಕರು ಇದ್ದಾರೆ ಮತ್ತು ಸರ್ಕಾರ ರಚಿಸಲು ಸಾಂವಿಧಾನಿಕ ವಿಧಾನಗಳನ್ನು ಬಳಸುತ್ತೇವೆ.ಮತ್ತೊಂದು ಚುನಾವಣೆಯನ್ನು ಜನರ ಮೇಲೆ ಹೇರುವುದು ಅಗತ್ಯವಿಲ್ಲ" ಎಂದಿದ್ದಾರೆ.
ಸರ್ಕಾರವು ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದ ಯಡಿಯೂರಪ್ಪ ಮಳೆಯ ಕುಂಟ ನೆಪದಲ್ಲಿ ತಮ್ಮ ಗ್ರಾಮ ವಾಸ್ತವ್ಯವನ್ನು ಮೊಟಕುಗೊಳಿಸಿದ್ದಾರೆ. ಹಾಗೊಂದು ವೇಳೆ ಸಮ್ಮಿಶ್ರ ಸರ್ಕಾರದ ಮುಖಂಡರಿಗೆ ಅಸಮಾಧಾನವಿದ್ದರೆ ಅವರು ಲೋಕಸಭಾ ಚುನಾವಣೆಯ ನಂತರ ರಾಜೀನಾಮೆ ನೀಡಬೇಕಾಗಿತ್ತು, ಏಕೆಂದರೆ ಜನರು ಬಿಜೆಪಿಗೆ 25 ಸ್ಥಾನಗಳನ್ನು ನೀಡಿದ್ದಾರೆ ಹಾಗೆಯೇ ಕಾಂಗ್ರೆಸ್-ಜೆಡಿಎಸ್ ಗಳನ್ನು ಜನ ತಿರಸ್ಕರಿಸಿದ್ದಾರೆ ಎಂದರು.
ಅರ್ಥಹೀನ ಟೀಕೆಗೆ  ಮೌನವೇ ಪ್ರತಿಕ್ರಿಯೆ
ಇನ್ನು ಯಡಿಯೂರಪ್ಪ ಟೀಕೆಗಳ ಬಗೆಗೆ ಪ್ರತಿಕ್ರಯಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ  “ಅರ್ಥಹೀನ ಪ್ರಶ್ನೆಗಳಿಗೆ ಮೌನವಾಗಿ ರುವುದೇ ಉತ್ತಮ. ವಿರೋಧ ಪಕ್ಷದ ನಾಯರ ಟೀಕೆಗೆ ಇದು ನನ್ನ ಪ್ರತಿಕ್ರಿಯೆ. ಅವರ ಟೀಕೆಗಳಿಗೆ ಆಧಾರವಿಲ್ಲ.ಬರಗಾಲ ಸಮಸ್ಯೆಗೆ ಸರ್ಕಾರ ರಿಣಾಮಕಾರಿಯಾಗಿ ಸ್ಪಂದಿಸುತ್ತಿದೆ. ನನ್ನ ಗ್ರಾಮ ವಾಸ್ತ್ಯವ್ಯ ಬರಪೀಡಿತ ಯಾದಗೀರ್‌ನಲ್ಲಿತ್ತು. ಅಲ್ಲಿ ಜನರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ನಾನು ತಿಳಿದುಕೊಂಡೆ. ” ಎಂದಿದ್ದಾರೆ.
"“ಒಂದು ಕಡೆ, ಪ್ರತಿಪಕ್ಷಗಳು ಬರ ಪರಿಹಾರದಲ್ಲಿ ತೊಡಗಿರುವ ಅಧಿಕಾರಿಗಳನ್ನು ಪ್ರಶ್ನಿಸುತ್ತಿದೆ, ಇನ್ನೊಂದೆಡೆ ಮಾದ್ಯಮಗಳ ಮುಂದೆ ಬೇರೆಯದೇ ಮಾತನ್ನಾಡುತ್ತಿದೆ. ಇದು ಅವರ ಡೋಂಗಿತನವೆಂದು ಕಾಣುತ್ತಿದೆ" ಸಿಎಂ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com