ನೂತನ ಸಚಿವರಿಗೆ ಇಂದು ಖಾತೆ ಹಂಚಿಕೆ; ಶಂಕರ್ ಗೆ ಪೌರಾಡಳಿತ, ನಾಗೇಶ್ ಗೆ ಶಿಕ್ಷಣ?

ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 10 ದಿನಗಳ ...

Published: 24th June 2019 12:00 PM  |   Last Updated: 24th June 2019 08:47 AM   |  A+A-


Newly inducted ministers H Nagesh and R Shankar

ಸಚಿವರಾದ ಹೆಚ್ ನಾಗೇಶ್ ಮತ್ತು ಆರ್ ಶಂಕರ್

Posted By : SUD SUD
Source : The New Indian Express
ಬೆಂಗಳೂರು:ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ 10 ದಿನಗಳ ನಂತರ ಹೆಚ್ ನಾಗೇಶ್ ಮತ್ತು ಆರ್ ಶಂಕರ್ ಅವರಿಗೆ ಸೋಮವಾರ ಖಾತೆ ಹಂಚಿಕೆಯಾಗಲಿದೆ. 

ಸಿಎಂ ಕುಮಾರಸ್ವಾಮಿ ಗ್ರಾಮ ವಾಸ್ತವ್ಯವಿದ್ದಿರಿಂದ ಸಚಿವರಿಗೆ ಖಾತೆ ಹಂಚಿಕೆ ಮುಂದೂಡಲ್ಪಟ್ಟಿತ್ತು. ಆರ್ ಶಂಕರ್ ಅವರಿಗೆ ಪೌರಾಡಳಿತ ಖಾತೆ ಸಿಗುವ ಸಾಧ್ಯತೆಯಿದೆ.

ಇದಕ್ಕೂ ಮುನ್ನ ಸಿ ಎಸ್ ಶಿವಳ್ಳಿಯವರಿಗೆ ಸಂಪುಟದಲ್ಲಿ ಸಚಿವ ಸ್ಥಾನ ನೀಡಲು ಪೌರಾಡಳಿತ ಖಾತೆ ವಹಿಸಿದ್ದ ರಮೇಶ್ ಜಾರಕಿಹೊಳಿಯವರಿಂದ ತೆಗೆದು ನೀಡಲಾಗಿತ್ತು. ಶಿವಳ್ಳಿಯವರ ನಿಧನದಿಂದ ಖಾತೆ ಖಾಲಿ ಉಳಿದಿತ್ತು. ಅದನ್ನು ಇದೀಗ ಆರ್ ಶಂಕರ್ ಗೆ ನೀಡಲಾಗುತ್ತಿದೆ. 
ಬಿಎಸ್ ಪಿ ಶಾಸಕ ಎನ್ ಮಹೇಶ್ ರಾಜೀನಾಮೆಯಿಂದ ತೆರವಾದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಹೆಚ್ ನಾಗೇಶ್ ಅವರಿಗೆ ಸಿಗುವ ಸಾಧ್ಯತೆಯಿದೆ. 
Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp