ಮಗನ ರಾಜಕೀಯ ಭವಿಷ್ಯಕ್ಕಾಗಿ ಕಾಂಗ್ರೆಸ್ ಮತಬ್ಯಾಂಕ್ ಪುನರುಜ್ಜೀವನಕ್ಕೆ ಮುಂದಾದ ಸಿದ್ದರಾಮಯ್ಯ

: ಕಾಂಗ್ರೆಸ್ ಹಿನ್ನೆಡೆಯ ಕಾರಣದಿಂದ ವರುಣಾ ಕ್ಷೇತ್ರದಲ್ಲಿ ತನ್ನ ಪುತ್ರ ಯತೀಂದ್ರ ರಾಜಕೀಯ ಭವಿಷ್ಯಕ್ಕೆ ಅಡ್ಡಿಯಾಗಲಿದೆ ಎಂಬ ಅಂಜಿಕೆಯ ಹಿನ್ನೆಲೆ ಮಾಜಿ ಸಿಎಂಸಿದ್ದರಾಮಯ್ಯ ಅವರು ಪಕ್ಷದ ಮುಖಂಡರೊಂದಿಗೆ....
ಸಿದ್ದರಾಮಯ್ಯ
ಸಿದ್ದರಾಮಯ್ಯ
ಬೆಂಗಳೂರು: ಕಾಂಗ್ರೆಸ್ ಹಿನ್ನೆಡೆಯ ಕಾರಣದಿಂದ ವರುಣಾ ಕ್ಷೇತ್ರದಲ್ಲಿ ತನ್ನ ಪುತ್ರ ಯತೀಂದ್ರ ರಾಜಕೀಯ ಭವಿಷ್ಯಕ್ಕೆ ಅಡ್ಡಿಯಾಗಲಿದೆ ಎಂಬ ಅಂಜಿಕೆಯ ಹಿನ್ನೆಲೆ ಮಾಜಿ ಸಿಎಂಸಿದ್ದರಾಮಯ್ಯ ಅವರು ಪಕ್ಷದ ಮುಖಂಡರೊಂದಿಗೆ ಸರಣಿ ಸಭೆಗಳನ್ನು ಆಯೋಜಿಸುತ್ತಿದ್ದಾರೆ.ಪಕ್ಷದ ಕಾರ್ಯಕ್ಷಮತೆಯನ್ನು ಪರಿಶೀಲಿಸಲು ಮತ್ತು ಕಾಂಗ್ರೆಸ್ ಮತಬ್ಯಾಂಕ್ ಕುಸಿತದ  ಹಿಂದಿನ ಕಾರಣಗಳನ್ನು ಕಂಡುಹಿಡಿಯಲು ಅವರು ಎರಡು ವಾರಗಳಲ್ಲಿ ಮೂರನೇ ಸಭೆ ನಡೆಸಿದ್ದಾರೆ.
ವರುಣಾ ಕ್ಷೇತ್ರದಿಂದ ಎರಡು ಚುನಾವಣೆಗಳಲ್ಲಿ ಜಯಗಳಿಸಿ ಪ್ರತಿಪಕ್ಷದ ನಾಯಕ, ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರಿಗೆ ವರುಣಾ ಕ್ಷೇತ್ರದ ಬಗೆಗೆ ಸಹಜವಾಗಿ ಅಪಾರ ಒಲವಿದೆ. ಆದರೆ ಕಳೆದ ಚುನಾವಣೆಯಲ್ಲಿ ತಮ್ಮ ಪುತ್ರ ಯತೀಂದ್ರನ ರಾಜಕೀಯ ಜೀವನ ಉತ್ತಮಗೊಳಿಸುವ ಸಲುವಾಗಿ ಸಮನ್ವಯ ಸಮಿತಿ ಅಧ್ಯಕ್ಷರು ತಮ್ಮ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಟ್ಟರು.
ಇತ್ತೀಚೆಗೆ ಮೈಸೂರು ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಪ್ರತ್ಯೇಕ ಸಭೆ ಕರೆದಿದ್ದ ಸಿದ್ದರಾಮಯ್ಯ  ವರುಣದಲ್ಲಿ ಹೊಸ ಮುಖಗಳೊಂದಿಗೆ ಪಕ್ಷವನ್ನು ಪುನರುಜ್ಜೀವನಗೊಳಿಸಲು ನಿರ್ಧರಿಸಿದರು. ಕ್ಷೇತ್ರದಲ್ಲಿ ರಾಜಕೀಯ ನಿರ್ವಾತವನ್ನು ಸೃಷ್ಟಿಸುವುದನ್ನು ತಪ್ಪಿಸಲು ಹಿಂದುಳಿದ ಸಮುದಾಯಗಳನ್ನು-ದಲಿತರನ್ನು ಬಲಪಡಿಸಲು, ಮುಖಂಡರು, ಕಾರ್ಮಿಕರ ಸಮ್ಮುಖದಲ್ಲಿ  ನಿಯಮಿತವಾಗಿ ಸಂವಹನ ನಡೆಸಲು ಅವರು ನಿರ್ಧರಿಸಿದರು.
ತಾವು ಕ್ಷೇತ್ರದ ಅಭಿವೃದ್ದಿ ಕಾರ್ಯಗಳ ಬಗೆಗೆ ಪರಿಶೀಲನೆ ನಡೆಸುವುದಾಗಿ ಘೋಷಿಸಿದ ಸಿದ್ದರಾಮಯ್ಯ ಮುಚ್ಚಿದ ಬಾಗಿಲಿನ ಸಭೆ ನಡೆಸಿದ್ದಾರೆ.
"ಸಿದ್ದರಾಮಯ್ಯ ಲೋಕಸಭೆ ಚುನಾವಣೆಗೆ ಮುನ್ನ ಈ ಪ್ರಯತ್ನ ಮಾಡಬೇಕಾಗಿತ್ತು. ಅವರು ಈಗ ಗಂಭೀರವಾಗಿದ್ದಾರೆ, ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಮಗ ಸೋಲುತ್ತಾನೆ ಎಂಬ ಭೀತಿಯಿಂದ ಇರುವ ಸಿದ್ದರಾಮಯ್ಯ ವರುಣಾ ಹೊರತಾಗಿ ಇತರೆ ಕ್ಷೇತ್ರಗಳ್ಲಿ ಸಹ  ಪಕ್ಷವನ್ನು ಪುನರುಜ್ಜೀವನಗೊಳಿಸಲು ಇದೇ ಬಗೆಯ ಸಭೆಯನ್ನು ಆಯೋಜಿಸಬೇಕು" ಹೆಸರು ಹೇಳಲಿಚ್ಚಿಸದ ನಾಯಕರೊಬ್ಬರು ಪತ್ರಿಕೆಗೆ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com