ಸಂಸತ್ ಭಾಷಣದ ಮೂಲಕ ತಮ್ಮ ಪಕ್ಷದ ನಾಯಕರನ್ನೇ ಅಚ್ಚರಿಗೆ ನೂಕಿದ ಯುವ ಸಂಸದ

ಬೆಂಗಳೂರು: ದಕ್ಷಿಣ ಕ್ಷೇತ್ರದಂತಹಾ ಬಿಜೆಪಿ ಭದ್ರಕೋಟೆಯಿಂದ ಆರಿಸಿ ಬಂದ 28 ವರ್ಷದ ನೀಲಿ ಕಣ್ಣ ಹುಡುಗ ತೇಜಸ್ವಿ ಸೂರ್ಯ ಸಂಸತ್ ಪ್ರವೇಶವನ್ನು ಕಂಡು ತಮ್ಮದೇ ಪಕ್ಷದ ನಾಯಕರು ಅಚ್ಚರಿಗೊಂಡಿದ್ದಾರೆ.

Published: 27th June 2019 12:00 PM  |   Last Updated: 27th June 2019 08:20 AM   |  A+A-


Tejasvi Surya

ತೇಜಸ್ವಿ ಸೂರ್ಯ

Posted By : RHN RHN
Source : The New Indian Express
ಬೆಂಗಳೂರು: ಬೆಂಗಳೂರು: ದಕ್ಷಿಣ ಕ್ಷೇತ್ರದಂತಹಾ ಬಿಜೆಪಿ ಭದ್ರಕೋಟೆಯಿಂದ ಆರಿಸಿ ಬಂದ 28 ವರ್ಷದ ನೀಲಿ ಕಣ್ಣ ಹುಡುಗ ತೇಜಸ್ವಿ ಸೂರ್ಯ ಸಂಸತ್ ಪ್ರವೇಶವನ್ನು ಕಂಡು ತಮ್ಮದೇ ಪಕ್ಷದ ನಾಯಕರು ಅಚ್ಚರಿಗೊಂಡಿದ್ದಾರೆ.

ಕಾನೂನು ಪದವೀಧರನಾಗಿರುವ ಸೂರ್ಯ ಹೆಸರನ್ನು ಸಂಸತ್ ಚುನಾವಣೆ ಅಭ್ಯರ್ಥಿಯಾಗಿ ಘೋಷಿಸಿದಾಗಿನಿಂದ ಅವರ ಓಟಕ್ಕೆ ತಡೆ ಇಲ್ಲವಾಗಿದೆ.ತೇಜಸ್ವಿ ತನ್ನ ‘ಯುವಕ ಸ್ನೇಹಿ’ ವ್ಯಕ್ತಿತ್ವವನ್ನು ಎಚ್ಚರಿಕೆಯಿಂದ ನಿಭಾಯಿಸಿಕೊಂಡಿದ್ದು ಬಿಜೆಪಿಯ ಹಿಂದುತ್ವದ ಕಾರ್ಡ್ ಆಗಿಯೂ ಗುರುತಿಸಿಕೊಂಡಿದ್ದಾರೆ. ಅವರು ಯುವಕರಿಗೆ ಇಷ್ಟವಾಗುವ ಭಾಷೆಯಲ್ಲೇ ಮಾತನಾಡುತ್ತಾರೆ.ಟೆಕ್ ಪರಿಣಿತರು, ಸಾಮಾಜಿಕ ಮಾಧ್ಯಮಗಳ  ಬಳಕೆಯಲ್ಲಿ ಸಿದ್ದಹಸ್ತರಾದ  ಅಸಾಧಾರಣ ವಾಗ್ಮಿ ಯಾಗಿರುವ ಇವರು  ಪ್ರಧಾನಿ ನರೇಂದ್ರ ಮೋದಿಯವರ ಮೆಚ್ಚುಗೆಯನ್ನು ಹಾಗೂ ‘ಹಿಂದೂ ಟ್ಯಾಗ್’ ಅನ್ನು ಜೊತೆಯಾಗಿ ಧರಿಸಲು ಸಿದ್ದವಾಗಿದ್ದಾರೆ.ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಹೇಳುವ ತಮ್ಮ ಮಾತುಗಳಲ್ಲಿ ಸಂಸತ್ತಿನಲ್ಲಿ ತಮ್ಮ ಚೊಚ್ಚಲ ಭಾಷಣ ಮಾಡಿದ್ದ ತೇಜಸ್ವಿ ಬಿಜೆಪಿ ಆಯ್ಕೆಯ ಅಭ್ಯರ್ಥಿಯ  ಓಟವನ್ನು ಹೇಗೆ ತಡೆರಹಿತವಾಗಿ ಮಾಡಿದೆ ಎಂಬುದಕ್ಕೆ ಸಾಕ್ಷಿಯಾಗಿತ್ತು.

ಚಿಕ್ಕಮಗಳುರಿನಲ್ಲಿ ಜನಿಸಿ ಬೆಂಗಳೂರಿನಲ್ಲಿ ಬೆಳೆದ ತೇಜಸ್ವಿ ಅವರು ಆರ್‌ಎಸ್‌ಎಸ್‌ನೊಂದಿಗಿನ ಒಡನಾಟವನ್ನು ಹೆಮ್ಮೆಯಿಂದ ಒಪ್ಪಿಕೊಂಡಿದ್ದಾರೆ.  ಅವರ ಉಮೇದುವಾರಿಕೆಗೆ ಹೆಚ್ಚಿನ ಮನ್ನಣೆ  ಕೊಟ್ಟದ್ದು ಆರ್‌ಎಸ್‌ಎಸ್‌ ಹೊರತೂ ಪಕ್ಷದ ಸಹೋದ್ಯೋಗಿಗಳಲ್ಲ.1991ರಿಂದ ಬಿಜೆಪಿ ತೆಕ್ಕೆಯಲ್ಲಿದ್ದ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ತೇಜಸ್ವಿನಿ ಅನಂತ್ ಕುಮಾರ್ ಅವರನ್ನು ಪರಿಗಣಿಸದೆ ತೇಜಸ್ವಿ ಸೂರ್ಯ ಅವರನ್ನು ಅಭ್ಯರ್ಥಿಯನ್ನಾಗಿಸಲು ಕಾರಣಗಳಿಲ್ಲದೆ ಇಲ್ಲ.

ಬಿಜೆಪಿಯೊಂದಿಗಿನ ತೇಜಸ್ವಿಯ ಒಡನಾಟವು ಎಬಿವಿಪಿ ಮತ್ತು ಯುವ ಮೋರ್ಚಾದಲ್ಲಿ ಅವರ ಭಾಗವಹಿಸುವಿಕೆಯಿಂದ ಪ್ರಾರಂಬವಾಗುತ್ತದೆ.ಅವರ ಚಿಕ್ಕಪ್ಪ ರವಿ ಸುಬ್ರಮಣ್ಯ ಬಿಜೆಪಿಯ ಹಿರಿಯ ನಾಯಕ ಮತ್ತು ಶಾಸಕರಾಗಿದ್ದರೂ ತೇಜಸ್ವಿ ತಮ್ಮದು ರಾಜಕೀಯ ನಾಯಕನ ವಂಶ ಎಂಬುದನ್ನು ನಿರಾಕರಿಸುತ್ತಾರೆ.ವರ ಚೊಚ್ಚಲ ಭಾಷಣವು ಪ್ರಧಾನಿ ಮತ್ತು ಹಿಂದೂ ಧರ್ಮದ ಹೆಮ್ಮೆಯ ಕುರಿತಾಗಿತ್ತು., ಬಿಜೆಪಿಯ ಕಾರ್ಯಸೂಚಿ ಜತೆಗೆ ನವೀನ, ಯುವ ಸಮುದಾಯ, ಮಾಹಿತಿ, ಹಿಂದೂ ಹೆಮ್ಮೆ ಎಂಬ ಅಂಶಗಳನ್ನು ಹೊಂದಿತ್ತು.

ಇನ್ನು ಚುನಾವಣೆ ವೇಳೆ ತೇಜಸ್ವಿ ವಿರುದ್ಧ ಕಿರುಕುಳದ ಆರೋಪ ಕೇಳಿಬಂದಾಗಲೂ ಬಿಜೆಪಿ ಅಧ್ಯಕ್ಷ ಮತ್ತು ಈಗ ಗೃಹ ಸಚಿವ ಅಮಿತ್ ಶಾಕರ್ನಾಟಕ ಅಭಿಯಾನವನ್ನು ತೇಜಸ್ವಿ ಪರ ರೋಡ್ ಶೋ ಮೂಲಕ ಪ್ರಾರಂಭಿಸಿದರು, ಅವರ ಉಮೇದುವಾರಿಕೆಯ ವಿರುದ್ಧ ಯಾವುದೇ ಭಿನ್ನಾಭಿಪ್ರಾಯ ಉಂತಾಗುವುದನ್ನು ಆ ಮೂಲಕ ಶಾ ಹತ್ತಿಕ್ಕಿದರು ಮತ್ತು ಅವರ ಉಮೇದುವಾರಿಕೆಯನ್ನು ಬೆಂಬಲಿಸಲು ರಾಜ್ಯ ನಾಯಕತ್ವವನ್ನು ಒತ್ತಾಯಿಸಿದರು. ಅವರ ಅಭಿಯಾನವು ಯುವ ಕೇಂದ್ರಿತ, ಸಂವಾದಾತ್ಮಕ ಮತ್ತು ಸಾಂಪ್ರದಾಯಿಕವಾಗಿದ್ದದ್ದಲ್ಲದೆ ಪರಿಣಾಮಕಾರಿಯಾಗಿತ್ತು.ಎಷ್ಟರಮಟ್ಟಿಗೆಂದರೆ, ತೇಜಸ್ವಿ  3 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆದ್ದರು, ಇದು 2014 ರಲ್ಲಿ ದಿವಂಗತ ಅನಂತ್ ಕುಮಾರ್ ಅವರ ಜಯದ ಅಂತರಕ್ಕಿಂತಲೂ ಅಧಿಕವಾಗಿದೆ.

"ನಿಜವಾದ ಯಶಸ್ವಿ ಜಾಗತಿಕ ಮಹಾನಗರವಾಗಲು ಬೆಂಗಳೂರಿಧೈರ್ಯಶಾಲಿ ಮತ್ತು ಕ್ರಿಯಾತ್ಮಕ ಕನಸನ್ನು ಹೊತ್ತ  ನಾನು ಪ್ರಯತ್ನಿಸುತ್ತೇನೆ" ಎಂದು ತೇಜಸ್ವಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಪತ್ರಿಕೆಗೆ ಡಿದ ಸಂದರ್ಶನದಲ್ಲಿ ತಿಳಿಸಿದ್ದರು.ಅವರ ರಾಜಕೀಯ ಪ್ರವೇಶ ಅಬ್ಬರದೊಡನೆ ಪ್ರಾರಂಭವಾಗಿದ್ದು ಇದೀಗ ಅವರಿಗೆ ಕೆಲಸದ ಸಮಯವಾಗಿದೆ.ಯುವ ಸಂಸದರು ಬೆಂಗಳೂರಿನ ಅಗತ್ಯತೆ, ಜನಸಮೂಹದ ಆಲೋಚನೆ  ಅಗತ್ಯವನ್ನು ಪುನರುಚ್ಚರಿಸಿದ್ದಾರೆ.ಉಪನಗರ ರೈಲು, ಹೊರತಾಗಿ ಅವರು ಮಾತನಾಡಲು ಆಯ್ದುಕೊಂಡ ವಿಚಾರಗಳು ಯುವ ಕೇಂದ್ರಿತವಾಗಿತ್ತು ಎನ್ನಲು ಅಡ್ಡಿಇಲ್ಲ.
Stay up to date on all the latest ರಾಜಕೀಯ news
Poll
Defence minister Rajanath Singh

101 ರಕ್ಷಣಾ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳಲು ನಿರ್ಬಂಧ ಹೇರುವ ಭಾರತದ ಕ್ರಮವು, ದೇಶೀಯ ಶಸ್ತ್ರಾಸ್ತ್ರ ಉತ್ಪಾದನೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆಯೆ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp