ಬಂಡಾಯ ಹತ್ತಿಕ್ಕಲು ಸಮ್ಮಿಶ್ರ ಸರ್ಕಾರದ ಪ್ಲಾನ್? ಬೆಳಗಾವಿ ಸಾಹುಕಾರ್ ಏಕಾಏಕಿ 'ಥಂಡಾ' ಆಗಲು ಕಾರಣವೇನು?

ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಬಂಡಾಯ ಹತ್ತಿಕ್ಕಲು ಸಮ್ಮಿಶ್ರ ಸರ್ಕಾರ ಸೂಪರ್ ಯೋಜನೆಯೊಂದನ್ನು ರೂಪಿಸಿದೆ, ರಮೇಶ್ ಜಾರಕಿ ಹೊಳಿ ಮಾಡಿರುವ ...
ರಮೇಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ
ಬೆಳಗಾವಿ: ಕಾಂಗ್ರೆಸ್ ಶಾಸಕ ರಮೇಶ್ ಜಾರಕಿಹೊಳಿ ಬಂಡಾಯ ಹತ್ತಿಕ್ಕಲು ಸಮ್ಮಿಶ್ರ ಸರ್ಕಾರ ಸೂಪರ್ ಯೋಜನೆಯೊಂದನ್ನು ರೂಪಿಸಿದೆ, ರಮೇಶ್ ಜಾರಕಿ ಹೊಳಿ ಮಾಡಿರುವ 253 ಕೋಟಿ ರು ಸಾಲವನ್ನು ವಾಪಸ್ ಮಾಡುವಂತೆ ಬ್ಯಾಂಕ್ ನೊಟೀಸ್ ನೀಡಿದೆ, ಇದು ಮೈತ್ರಿ ಪಕ್ಷಗಳ ಪಿತೂರಿ ಎಂದೇ ಹೇಳಲಾಗಿದೆ.
ರಮೇಶ್ ಜಾರಕಿಹೊಳಿ ಒಡೆತನದ ಸೌಭಾಗ್ಯ ಸಕ್ಕರೆ ಕಾರ್ಖಾನೆಯ 253 ಕೋಟಿ ಸಾಲ ಬಾಕಿ ಇದೆ ಕಳೆದ ಆರು ತಿಂಗಳ‌‌ ಹಿಂದೇಯೆ ಅಪೆಕ್ಸ್ ಬ್ಯಾಂಕ್ ನಿಂದ ನೋಟಿಸ್ ಕಳುಹಿಸಲಾಗಿತ್ತು. 
ಇತ್ತೀಚೆನೆ ನಡೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸಿದ್ದ ರಮೇಶ್ ಜಾರಕಿಹೊಳಿ ಶೀಘ್ರವೇ ತಾವು ಕಾಂಗ್ರೆಸ್ ತೊರೆಯುವುದಾಗಿ ಮಾಧ್ಯಮಗಳಿಗೆ ತಿಳಿಸಿದ್ದರು ರಮೇಶ್ ಬಂಡಾಯ ಚಟುವಟಿಕೆಗಳಿಂದ ತೀವ್ರ ಇರಿಸು-ಮುರಿಸು ಅನುಭವಿಸಿದ್ದ ಸಮ್ಮಿಶ್ರ ಸರ್ಕಾರದ ಅಂಗಪಕ್ಷವಾದ ಕಾಂಗ್ರೆಸ್ ಬ್ಯಾಂಕ್ ಮೂಲಕ ತನ್ನ ಕೆಲಸ ಸಾಧಿಸಿಕೊಂಡಿದೆ.
ರಮೇಶ್ ಜಾರಕಿಹೊಳಿ ಸಕ್ಕರೆ ಕಾರ್ಖಾನೆ ವಿವಿಧ ಬ್ಯಾಂಕ್ ಗಳಿಂದ ಸಾಲ ಪಡೆದಿದೆ, ಸಾಲವನ್ನು ವಾಪಸ್ ಮಾಡಬೇಕೆಂದು ಬ್ಯಾಂಕ್ ನೋಟೀಸ್ ನೀಡಿದೆ ಈ ಕಾರಣಕ್ಕಾಗಿ ಜಾರಕಿಹೊಳಿ ಬಂಡಾಯ ಚಟುವಟಿಕೆಯಲ್ಲಿ ಪಾಲ್ಗೋಳ್ಳದೇ ತಣ್ಣಗಾಗಿದ್ದಾರೆ ಎನ್ನಲಾಗಿದೆ. ಸದ್ಯ ಗೋಕಾಕ್ ವಿಧಾನಸಭೆ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಅವರಿಗೆ ಸೇರಿದ ಎಲ್ಲಾ ರಾಜಕೀಯ ವ್ಯವಹಾರಗಳನ್ನು ಅವರ ಬಾಮೈದ ಅಂಬೀರಾವ್ ಪಾಟೀಲ್ ನೋಡಿಕೊಳ್ಳುತ್ತಿದ್ದಾರೆ, 
ರಮೇಶ್ ಜಾರಕಿಹೊಳಿ ಬಂಡಾಯ ಚಟುವಟಿಕೆಗಳ ಸಂಬಂಧ ಕಾಂಗ್ರೆಸ್ ಇನ್ನೂ ಯಾವುದೇ ಶಿಸ್ತುಕ್ರಮ ಕೈಗೊಂಡಿಲ್ಲ, ಬ್ಯಾಂಕ್ ಗೆ ಸಾಲ ಮರುಪಾವತಿ ಮಾಡದ ಕಾರಣಕ್ಕಾಗಿ ಬಿಜೆಪಿ ಕೂಡ ರಮೇಶ್ ಜಾರಕಿಹೊಳಿಯನ್ನು ಧೂಷಿಸಿದೆ ಎಂದು ಹೇಳಲಾಗಿದೆ, 
ಅಪೆಕ್ಸ್ ಬ್ಯಾಂಕ್ ಬೆಂಗಳೂರಿನಲ್ಲಿ 119 ಕೋಟಿ ರೂ. ಸಾಲ ಬಾಕಿ, ಡಿಸಿಸಿ ಬ್ಯಾಂಕ್ ವಿಜಯಪುರ 40 ಕೋಟಿ, ಡಿಸಿಸಿ ಬ್ಯಾಂಕ್ ತುಮಕೂರು 31 ಕೋಟಿ, ಸೌಥ್ ಕೆನರಾ ಡಿಸಿಸಿ ಬ್ಯಾಂಕ್ ಮಂಗಳೂರು 31 ಕೋಟಿ, ಡಿಸಿಸಿ ಬ್ಯಾಂಕ್ ಶಿರಸಿ 31 ಕೋಟಿ ಸಾಲವಿದೆ. ಸೌಭಾಗ್ಯ ಲಕ್ಷ್ಮೀ ಸಕ್ಕರೆ ಕಾರ್ಖಾನೆ ಹೆಸರಿನಲ್ಲಿ ಸಾಲ ಪಡೆದುಕೊಂಡಿರುವ ರಮೇಶ್ ಜಾರಕಿಹೊಳಿ, ಸಾಲ ಮರು ಪಾವತಿ ಮಾಡದ ಹಿನ್ನೆಲೆಯಲ್ಲಿ ಸಕ್ಕರೆ ಕಾರ್ಖಾನೆ ಮುಟ್ಟುಗೋಲು ಹಾಕಲು ಅಪೆಕ್ಸ್ ಚಿಂತನೆ ಮಾಡಿದೆ.
ರಮೇಶ್ ಜಾರಕಿಹೊಳಿ ಅವರು ಸಕ್ಕರೆ ಕಾರ್ಖಾನೆ ಉಳಿಸಿಕೊಳ್ಳಲು ಸರ್ಕಾರದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಸದ್ಯ ಆಪರೇಷನ್ ಕಮಲದಿಂದ ದೂರ ಉಳಿದರಾ ಅನ್ನೋ ಅನುಮಾನವೂ ಮೂಡಿದೆ. ಯಾಕಂದರೆ ಶಾಸಕರ ರಮೇಶ್ ಅವರು ಕಳೆದ ಒಂದು ತಿಂಗಳಿಂದ ಯಾರ ಕೈಗೂ ಸಿಗದೆ ಸೈಲೆಂಟ್ ಆಗಿ ಉಳಿದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com