ಬೀದರ್ ಲೋಕಸಭಾ ಕ್ಷೇತ್ರದ ಪ್ರತಿ ಹಳ್ಳಿಗೂ ಭೇಟಿ ನೀಡಿ ಜನರ ಸಮಸ್ಯ ಆಲಿಸುವೆ: ಖೂಬಾ

ಎರಡನೇ ಬಾರಿಗೆ ಸಂಸದರಾಗಿರುವ ಭಗವಂತ್ ಖೂಬಾ ತಮ್ಮ ಕ್ಷೇತ್ರಗಳಲ್ಲಿರುವ ಎಲ್ಲಾ ಹಳ್ಳಿಗಳಿಗೆ ಭೇಟಿ ನೀಡಲು ನಿರ್ಧರಿಸಿದ್ದಾರೆ, ಜೊತೆಗೆ ಕೇಂದ್ರದ ಎಲ್ಲಾ ...
ಭಗವಂತ್ ಖೂಬಾ
ಭಗವಂತ್ ಖೂಬಾ
ಬೀದರ್: ಎರಡನೇ ಬಾರಿಗೆ ಸಂಸದರಾಗಿರುವ  ಭಗವಂತ್ ಖೂಬಾ ತಮ್ಮ ಕ್ಷೇತ್ರಗಳಲ್ಲಿರುವ ಎಲ್ಲಾ ಹಳ್ಳಿಗಳಿಗೆ ಭೇಟಿ ನೀಡಲು ನಿರ್ಧರಿಸಿದ್ದಾರೆ, ಜೊತೆಗೆ ಕೇಂದ್ರದ ಎಲ್ಲಾ ಯೋಜನೆಗಳನ್ನು ಅನುಷ್ಠಾನಗೊಳಿಸುವುದಾಗಿ ಹೇಳಿದ್ದಾರೆ. ಕ್ಷೇತ್ರದ ಸುಮಾರು ಆರುವರೆ ಲಕ್ಷ ಜನ ಹಲವು ಯೋಜನೆಗಳ ಲಾಭ ಪಡೆಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.
2014 ರಲ್ಲಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದ ಖೂಬಾ ಹಿರಿಯ ಕಾಂಗ್ರೆಸ್ ನಾಯಕ ಧರ್ಮಸಿಂಗ್ ಅವರನ್ನು ಸೋಲಿಸಿದರು. ಮೊದಲ ಬಾರೆ ಸಂಸದರಾಗಿದ್ದ ಧರ್ಮಸಿಂಗ್ ತಮ್ಮ 5 ವರ್ಷದ ಅವಧಿಯಲ್ಲಿ  ಜಿಲ್ಲೆಗೆ 13 ಹೊಸ ರೈಲುಗಳನ್ನು ತರುವುದಾಗಿ ಹೇಳಿದ್ದರು, ಆದರೆ ಅದು ಆಗಲಿಲ್ಲ, ನಾನು ಎಲ್ಲಾ ಹಳ್ಳಿಗಳಿಗೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸಲಿದ್ದೇನೆ ಎಂದು ಖೂಬಾ ತಿಳಿಸಿದ್ದಾರೆ.
ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ಎಲ್ಲಾ ಬೇಡಿಕೆಗಳನ್ನು ರೈಲ್ವೆ ಸಚಿವರ ಮುಂದಿಡುತ್ತೇನೆ,  ಅದರಲ್ಲಿ ಬೀದರ್-ಯಶವಂತಪುರ ರೈಲು ಕೂಡ ಸೇರಿದೆ. 2014 ರಲ್ಲಿ ಖೂಬಾ ಬಗ್ಗೆ ಜನರಿಗೆ ಅಷ್ಟೊಂದು ತಿಳಿದಿರಲಿಲ್ಲ, ಹೀಗಿದ್ದರೂ 2018ರಲ್ಲಿ ಮೋದಿ ಅಲೆಯ ಮೇಲೆ ಗೆದ್ದು ಬಂದಿದ್ದಾರೆ,.ಜೊತೆಗೆ ಅವರ ಕೆಲಸವೂ ಗೆಲ್ಲಲು ಕಾರಣವಾಗಿದೆ.
2018ರ ವಿಧಾನಸಭೆ ಚುನಾವಣೆಯಲ್ಲಿ ಬೀದರ್ ಕ್ಷೇತ್ರದಲ್ಲಿ ಬಿಜೆಪಿ ಸೋಲನುಭವಿಸಿತ್ತು,  2013 ಮತ್ತು 2018 ರಲ್ಲಿ ಬಿಜೆಪಿ ಶಾಸಕ ಪ್ರಭು ಚವಾಣ್ ಮಾತ್ರ ಗೆದ್ದಿದ್ದರು,
ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದ ಖೂಬಾ  ಕಲಬುರಗಿ- ಹುಮ್ನಾಬಾದ್ ರೈಲ್ವೆ ಮಾರ್ಗ ತರುವಲ್ಲಿ ಯಶಸ್ವಿಯಾಗಿದ್ದರು, ಸದ್ಯ ರೈಲು ಮಾರ್ಗದಲ್ಲಿ ರೈಲು ಸಂಚರಿಸುತ್ತದೆ, 2017ರ ಅಕ್ಟೋಬರ್ ತಿಂಗಳಿನಲ್ಲಿ  ಬೀದರ್-ಕಲಬುರಗಿ ರೈಲ್ವೆ ಮಾರ್ಗವನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದರು, ಇದರ ಕ್ರೆಡಿಟ್ ಖೂಬಾ ಅಲರಿಗೆ ಸಲ್ಲುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com