'ರೈತರ ಆತ್ಮಹತ್ಯೆಗೆ, ಯೋಧರ ಸಾವಿಗೆ ಕಣ್ಣೀರಿಲ್ಲ; ಚುನಾವಣೆಗೆ ಮಾತ್ರ ಕಣ್ಣೀರು! ಜನ ಈಗಲೂ ಮರುಳಾಗುವರೇ?'

ವೇದಿಕೆಯಲ್ಲಿ ಕಣ್ಣೀರಿಡುವ ದೇವೇಗೌಡರ ಕುಟುಂಬ ಸದಸ್ಯರ ನಡೆಯನ್ನು ಪ್ರತಿಪಕ್ಷ ಬಿಜೆಪಿ ಕಟುವಾಗಿ ಟೀಕಿಸಿದೆ.
'ರೈತರ ಆತ್ಮಹತ್ಯೆಗೆ ಅಳಲಿಲ್ಲ, ಯೋಧರ ಸಾವಿಗೆ ಕಣ್ಣೀರಿಲ್ಲ ಚುನಾವಣೆಗೆ ಮಾತ್ರ ಮನೆಮಂದಿಗೆಲ್ಲ ಕಣ್ಣೀರು! ಜನ ಈಗಲೂ ಮರುಳಾಗುವರೇ?'
'ರೈತರ ಆತ್ಮಹತ್ಯೆಗೆ ಅಳಲಿಲ್ಲ, ಯೋಧರ ಸಾವಿಗೆ ಕಣ್ಣೀರಿಲ್ಲ ಚುನಾವಣೆಗೆ ಮಾತ್ರ ಮನೆಮಂದಿಗೆಲ್ಲ ಕಣ್ಣೀರು! ಜನ ಈಗಲೂ ಮರುಳಾಗುವರೇ?'
ಬೆಂಗಳೂರು: ವೇದಿಕೆಯಲ್ಲಿ ಕಣ್ಣೀರಿಡುವ ದೇವೇಗೌಡರ ಕುಟುಂಬ ಸದಸ್ಯರ ನಡೆಯನ್ನು ಪ್ರತಿಪಕ್ಷ ಬಿಜೆಪಿ ಕಟುವಾಗಿ ಟೀಕಿಸಿದೆ. 
ಮಾ.13 ರಂದು ಹೊಳೆನರಸೀಪುರದ ಮೂಡಲಹಿಪ್ಪೆ ಗ್ರಾಮದಿಂದ ಜೆಡಿಎಸ್ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಹಾಸನ ಲೋಕಸಭಾ ಕ್ಷೇತ್ರವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣಗೆ ಬಿಟ್ಟುಕೊಡುವುದನ್ನು ಘೋಷಿಸಿದ್ದ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ವೇದಿಕೆ ಮೇಲೆ ಕಣ್ಣೀರು ಹಾಕಿದ್ದರು. ಇದೇ ವೇಳೆ ತಂದೆಯವರ ತ್ಯಾಗ ದೊಡ್ಡದು ಎಂದು ರೇವಣ್ಣ ಸಹ ಕಣ್ಣೀರು ಹಾಕಿದ್ದರು. 
ಈ ಘಟನೆ ಬಗ್ಗೆ ಬಿಜೆಪಿ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದು, ರೈತರು ಆತ್ಮಹತ್ಯೆ ಮಾಡಿಕೊಂಡಾಗ ಅಳಲಿಲ್ಲ!ಪುಲ್ವಾಮಾ ದಾಳಿಯಾಗಿ ಯೋಧರು ಮಡಿದಾಗ ಕಣ್ಣೀರು ಬರಲಿಲ್ಲ! ಚುನಾವಣೆ ಬಂದಾಗ ಮಾತ್ರ ಮನೆಮಂದಿಗೆಲ್ಲ ವೇದಿಕೆಯಲ್ಲಿ ಕಣ್ಣೀರು! ರಾಜ್ಯದ ಜನ ಈಗಲೂ ಮರುಳಾಗುವರೇ? ಎಂದು ಪ್ರಶ್ನಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com