ಪ್ರಧಾನಿ ನಂತರ ರಾಜ್ಯ ಬಿಜೆಪಿ ನಾಯಕರ ಟ್ವಿಟರ್ ಖಾತೆಯಲ್ಲೂ 'ಚೌಕಿದಾರ್' ಸೇರ್ಪಡೆ

ಪ್ರಧಾನಿ ಮೋದಿ ನಂತರ ಬಿಜೆಪಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು, ಉಪಾಧ್ಯಕ್ಷರು, ಇನ್ನಿತರ ನಾಯಕರು ಸೇರಿದಂತೆ ಎಲ್ಲರೂ ತಮ್ಮ ಟ್ವಿಟರ್ ಖಾತೆಯಲ್ಲಿ ಚೌಕಿದಾರ್ ಸೇರ್ಪಡೆ ಮಾಡಿಕೊಂಡಿದ್ದಾರೆ.

Published: 18th March 2019 12:00 PM  |   Last Updated: 18th March 2019 11:51 AM   |  A+A-


BS yeddyurappa, SadanandaGowda Twitter

ಯಡಿಯೂರಪ್ಪ, ಸದಾನಂದಗೌಡ ಟ್ವಿಟರ್ ಖಾತೆ

Posted By : ABN ABN
Source : The New Indian Express
ಬೆಂಗಳೂರು:  ಪ್ರಧಾನಿ ನರೇಂದ್ರ ಮೋದಿ ಅವರು# ಮೈನ್ ಭೀ ಚೌಕಿದಾರ್  ಸಾಮಾಜಿಕ ಮಾಧ್ಯಮಗಳ ಪ್ರಚಾರಕ್ಕೆ ಚಾಲನೆ ನೀಡಿದ ನಂತರ ಕೇಂದ್ರ ಸಚಿವರು, ಬಿಜೆಪಿ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರು, ಉಪಾಧ್ಯಕ್ಷರು, ಇನ್ನಿತರ ನಾಯಕರು ಸೇರಿದಂತೆ ಎಲ್ಲರೂ ತಮ್ಮ ಟ್ವಿಟರ್ ಖಾತೆಯಲ್ಲಿ ಚೌಕಿದಾರ್ ಸೇರ್ಪಡೆ ಮಾಡಿಕೊಂಡಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಸದಾನಂದಗೌಡ, ಅನಂತ್ ಕುಮಾರ್ ಹೆಗ್ಗಡೆ, ಸಂಸದೆ ಶೋಭಾ ಕರಂದ್ಲಾಜೆ, ಪ್ರತಾಪ್ ಸಿಂಹ, ಪ್ರಹ್ಲಾದ್ ಜೋಷಿ ಎಲ್ಲರೂ ಖಾತೆಯ ಹೆಸರನ್ನೂ ಚೌಕಿದಾರ್ ಎಂದು ಬದಲಾಯಿಸಿಕೊಂಡಿದ್ದಾರೆ.

# ಮೈನ್ ಭೀ ಚೌಕಿದಾರ್  ಪ್ರಚಾರಾಂದೋಲನದಲ್ಲಿ ತೊಡಗಿಸಿಕೊಳ್ಳಲು ನನ್ನಗೆ ಹೆಮ್ಮೆಯಾಗುತ್ತದೆ. ಭಾರತವನ್ನು ಪ್ರೀತಿಸುವ ನಾಗರಿಕನಾಗಿ ಭ್ರಷ್ಟಚಾರ  ಬಡತನ, ಭಯೋತ್ಪಾದನೆ ನಿರ್ಮೂಲನೆ ಹಾಗೂ  ಸದೃಢ, ಸುಭದ್ರ, ಮತ್ತು  ಸಂಪಜದ್ಭರಿತ ನವ ಭಾರತ ನಿರ್ಮಾಣಕ್ಕಾಗಿ ಕಾರ್ಯ ನಿರ್ವಹಿಸುವುದಾಗಿ ಯಡಿಯೂರಪ್ಪ ಟ್ವಿಟರ್ ಖಾತೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿಯ ಇತರ ಮುಖಂಡರಾದ ಕೆ. ಎಸ್. ಈಶ್ವರಪ್ಪ, ಸುರೇಶ್ ಕುಮಾರ್, ಅರವಿಂದ್ ಲಿಂಬಾವಳಿ, ಕೋಟಾ ಶ್ರೀನಿವಾಸ ಪೂಜಾರಿ ಮತ್ತಿತರ ಸಹ ಇದೇ ರೀತಿಯಲ್ಲಿ ತಮ್ಮ ಟ್ವಿಟರ್ ಖಾತೆಯನ್ನು ಬದಲಾಯಿಸಿಕೊಂಡಿದ್ದಾರೆ.
Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp